ಚಂದನ್ ಶೆಟ್ಟಿ ಅಭಿನಯದ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿ

ನಟನಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿರುವ ರಾಪ್ ಗಾಯಕ ಮತ್ತು ಸಂಗೀತ ಸಂಯೋಜಕ ಚಂದನ್ ಶೆಟ್ಟಿ ಅವರ ಚೊಚ್ಚಲ ಚಿತ್ರ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಬಿಡುಗಡೆಗೆ ಸಜ್ಜಾಗಿದ್ದು, ಜುಲೈ 19 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದ ಸ್ಟಿಲ್
ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದ ಸ್ಟಿಲ್
Updated on

ನಟನಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿರುವ ರಾಪ್ ಗಾಯಕ ಮತ್ತು ಸಂಗೀತ ಸಂಯೋಜಕ ಚಂದನ್ ಶೆಟ್ಟಿ ಅವರ ಚೊಚ್ಚಲ ಚಿತ್ರ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಬಿಡುಗಡೆಗೆ ಸಜ್ಜಾಗಿದ್ದು, ಜುಲೈ 19 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ವೆರೈಟಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಸುಬ್ರಹ್ಮಣ್ಯ ಕುಡ್ಡೆ ಮತ್ತು ಎಸಿ ಶಿವಲಿಂಗೇಗೌಡ ನಿರ್ಮಿಸಿರುವ, ಅರುಣ್ ಅಮುಕ್ತ ನಿರ್ದೇಶನದ ಈ ಚಿತ್ರದಲ್ಲಿ ಅಮರ್, ಭಾವನಾ, ಮಾನಸಿ, ಭವ್ಯ, ಮತ್ತು ವಿವಾನ್ ಸೇರಿದಂತೆ ಬಹುತೇಕ ಹೊಸ ಮುಖಗಳಿದ್ದು, ಭವ್ಯಾ, ಸುನೀಲ್ ಪುರಾಣಿಕ್, ರಘು ರಾಮನಕೊಪ್ಪ, ಸುಧಿ ಮುಂತಾದ ಅನುಭವಿ ನಟರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ವಿಜೇತ್ ಕೃಷ್ಣ ಸಂಗೀತ ನೀಡಿದ್ದು, ಕುಮಾರ್ ಗೌಡ ಮತ್ತು ಅರುಣ್ ಸುರೇಶ್ ಛಾಯಾಗ್ರಹಣ ಮಾಡಿದ್ದಾರೆ.

'3 ಪೆಗ್ಸ್' ಜನಪ್ರಿಯ ಹಾಡಿಗೆ ಹೆಸರುವಾಸಿಯಾದ ವಾಸು ದೀಕ್ಷಿತ್, ಚಂದನ್ ಶೆಟ್ಟಿ ಮತ್ತು ಸಂಗೀತ ನಿರ್ದೇಶಕ ವಿಜೇತ್ ಕೃಷ್ಣ ಇದೀಗ ಮತ್ತೆ 'ಸ್ಟೂಡೆಂಟ್ ಪಾರ್ಟಿ' ಹಾಡಿಗಾಗಿ ಒಂದಾಗಿದ್ದಾರೆ. ಈ ಹಾಡಿಗೆ ನಿರ್ದೇಶಕ ಮತ್ತು ಗೀತರಚನೆಕಾರ ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದಾರೆ.

ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದ ಸ್ಟಿಲ್
'ವಿದ್ಯಾರ್ಥಿ ವಿದ್ಯಾಥಿನಿಯರೇ' ಟ್ರೇಲರ್ ಎರಡು ಭಾಗಗಳಲ್ಲಿ ಬಿಡುಗಡೆ; ಸೈಡ್ ಎ ರಿಲೀಸ್

'ನಾನು ರಚಿಸಿದ ಪಾರ್ಟಿ ಹಾಡುಗಳು ಎಂದಾಕ್ಷಣ 'ಟಕಿಲ', 'ಪಾರ್ಟಿ ಫ್ರೀಕ್', '3 ಪೆಗ್ಸ್' ನೆನಪಿಗೆ ಬರುತ್ತೆ. ಈಗ ಈ 'ಸ್ಟೂಡೆಂಟ್ ಪಾರ್ಟಿ' ಹಾಡು ಕೂಡ ಅದೇ ಸಾಲಿಗೆ ಸೇರುತ್ತದೆ. ಗೀತರಚನೆಕಾರರೂ ಆಗಿರುವ ನಿರ್ದೇಶಕ ಚೇತನ್ ಅವರು ಪಾರ್ಟಿ ಸಂಸ್ಕೃತಿಯ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಿದ್ದಾರೆ ಮತ್ತು ಹಾಡಿನ ಸಾಲುಗಳಲ್ಲಿ ಅದರ ಸಾರವನ್ನು ಅದ್ಭುತವಾಗಿ ಸೆರೆಹಿಡಿದಿದ್ದಾರೆ ಈ ಹಾಡು ಟಿ-ಸೀರೀಸ್ ಬ್ಯಾನರ್ ಅಡಿಯಲ್ಲಿ ನಮ್ಮ ಸಹಯೋಗವನ್ನು ಗುರುತಿಸುತ್ತದೆ' ಎನ್ನುತ್ತಾರೆ ಚಂದನ್ ಶೆಟ್ಟಿ.

ನಿರ್ದೇಶಕ ಮತ್ತು ಗೀತರಚನೆಕಾರ ಚೇತನ್ ಮಾತನಾಡಿ, 'ನಮ್ಮ ನಿರ್ದೇಶಕರ ದೃಷ್ಟಿಗೆ ಧನ್ಯವಾದಗಳು. ಹಾಡು ಅತ್ಯಂತ ಉತ್ತಮವಾಗಿ ಮೂಡಿಬಂದದೆ. ಅವರು ಸಾಹಿತ್ಯವನ್ನು ಮೆಚ್ಚಿದರೆ, ಅರ್ಧದಷ್ಟು ಯುದ್ಧವು ಗೆದ್ದಹಾಗೆ ಮತ್ತು ವಿಜೇತ್ ಅವರ ಪ್ರೋಗ್ರಾಮಿಂಗ್ ಟ್ರ್ಯಾಕ್‌ಗೆ ಬಾಲಿವುಡ್-ಎಸ್ಕ್ ಮೋಡಿಯನ್ನು ಸೇರಿಸುತ್ತದೆ' ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com