Max ಸಿನಿಮಾ ರಿಲೀಸ್ ಬಗ್ಗೆ Update ಕೊಟ್ಟ ಕಿಚ್ಚ ಸುದೀಪ್!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಹೀಗಿರುವಾಗ ‘ಮ್ಯಾಕ್ಸ್’ ಚಿತ್ರ ರಿಲೀಸ್ ಆಗೋದು ಯಾವಾಗ ಎಂದು ಫ್ಯಾನ್ಸ್‌ಗೆ ಸುದೀಪ್ ಅಪ್‌ಡೇಟ್ ಕೊಟ್ಟಿದ್ದಾರೆ.
ಸುದೀಪ್
ಸುದೀಪ್
Updated on

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಹೀಗಿರುವಾಗ ‘ಮ್ಯಾಕ್ಸ್’ ಚಿತ್ರ ರಿಲೀಸ್ ಆಗೋದು ಯಾವಾಗ ಎಂದು ಫ್ಯಾನ್ಸ್‌ಗೆ ಸುದೀಪ್ ಅಪ್‌ಡೇಟ್ ಕೊಟ್ಟಿದ್ದಾರೆ.

ಕಿಚ್ಚ ಸುದೀಪ್ ಅವರ ಬಹು ನಿರೀಕ್ಷಿತ ಮ್ಯಾಕ್ಸ್ ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿದೆ, ರಾಮರಸ ಚಿತ್ರದ ಬಿಡುಗಡೆ ಸಮಾರಂಭದಲ್ಲಿ ನಟ ಸ್ವತಃ ಮಾಧ್ಯಮ ಸಂವಾದದಲ್ಲಿ ಸುಳಿವು ನೀಡಿದ್ದಾರೆ. ತಮಿಳುನಾಡಿನ ಮಹಾಬಲಿಪುರಂನಲ್ಲಿ ವ್ಯಾಪಕವಾದ ಚಿತ್ರೀಕರಣದ ನಂತರ ಶೂಟಿಂಗ್ ಪೂರ್ಣಗೊಂಡಿದೆ. ಸುದೀಪ್, ಚಿತ್ರೀಕರಣವನ್ನು ಪೂರ್ಣಗೊಳಿಸಿದ ನಂತರ, 10 ತಿಂಗಳ ಪ್ರಯಾಣದ ಉದ್ದಕ್ಕೂ ತಂಡವು ನೀಡಿದ ಬೆಂಬಲಕ್ಕಾಗಿ ಕೃತಜ್ಞತೆಗಳನ್ನು ವ್ಯಕ್ತಪಡಿಸುವ ಹೃತ್ಪೂರ್ವಕ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಮ್ಯಾಕ್ಸ್ ಚಿತ್ರೀಕರಣ ಮತ್ತು ಡಬ್ಬಿಂಗ್ ಪೂರ್ಣಗೊಂಡಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ್ರಗತಿಯಲ್ಲಿವೆ. ಆಗಸ್ಟ್‌ನಲ್ಲಿ ಮ್ಯಾಕ್ಸ್ ಬಿಡುಗಡೆಯಾಗುವ ಸಾಧ್ಯತೆಯಿದೆ" ಎಂದು ಸುದೀಪ್ ಅವರು ಚಿತ್ರದ ಬಿಡುಗಡೆ ಬಗ್ಗೆ ಸುಳಿವು ನೀಡಿದ್ದಾರೆ. ಶಿವರಾಜಕುಮಾರ್ ಅವರ ಬಹುಭಾಷಾ ಭೈರತಿ ರಣಗಲ್ ಮತ್ತು ಅಲ್ಲು ಅರ್ಜುನ್ ಅವರ ಪುಷ್ಪ 2 ನಂತಹ ಚಲನಚಿತ್ರಗಳು ಆರಂಭದಲ್ಲಿ ಆಗಸ್ಟ್ ಬಿಡುಗಡೆಗೆ ನಿಗದಿಯಾಗಿದ್ದವು.

ಸುದೀಪ್
ಸುದೀಪ್ ನಟನೆಯ 'ಮ್ಯಾಕ್ಸ್' ಅಭಿಮಾನಿಗಳಿಗೆ ಆ್ಯಕ್ಷನ್ ರಸದೌತಣ ನೀಡುತ್ತದೆ: ಇಂದ್ರಜಿತ್ ಲಂಕೇಶ್

ಮ್ಯಾಕ್ಸ್ ಸಿನಿಮಾವನ್ನು ವಿಜಯ್ ಕಾರ್ತಿಕೇಯನ್ ನಿರ್ದೇಶಿಸಿದ್ದಾರೆ ಮತ್ತು ಕಲೈಪ್ಪುಲಿ ಎಸ್ ಥಾನು ವಿ ಕ್ರಿಯೇಷನ್ಸ್ ನಿರ್ಮಿಸಿದೆ, ಮ್ಯಾಕ್ಸ್ ಅನ್ನು ಆಕ್ಷನ್-ಪ್ಯಾಕ್ಡ್ ಎಂಟರ್ಟೈನರ್ ಎಂದು ಹೇಳಲಾಗಿದೆ. ಚಿತ್ರದಲ್ಲಿ ವರಲಕ್ಷ್ಮಿ ಶರತ್‌ಕುಮಾರ್ ನಟಿಸಿದ್ದಾರೆ, ಮಾಣಿಕ್ಯ ನಂತರ ಸುದೀಪ್ ಅವರೊಂದಿಗೆ ಮತ್ತೆ ಒಂದಾಗುತ್ತಿದ್ದಾರೆ, ಜೊತೆಗೆ ಸಂಯುಕ್ತ ಹೊರ್ನಾಡ್, ಸುಕೃತಾ ವಾಗ್ಲೆ ಮತ್ತು ಅನಿರುದ್ಧ ಭಟ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಶಿವಕುಮಾರ್ ಕಲಾ ನಿರ್ದೇಶನವಿದೆ, ಅಜನೀಶ್ ಬಿ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಶೇಖರ್ ಚಂದ್ರು ಛಾಯಾಗ್ರಹಣವಿದೆ.

ಥಿಯೇಟರ್ ಹಾಜರಾತಿ ಕ್ಷೀಣಿಸುತ್ತಿರುವ ಉದ್ಯಮ ಸವಾಲುಗಳ ಬಗ್ಗೆ ಕೇಳಿದಾಗ, ಸುದೀಪ್ ಆಶಾವಾದಿಯಾಗಿದ್ದರು. "ಪ್ರೇಕ್ಷಕರು ಚಿತ್ರಮಂದಿರಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದ್ದರು. ಆದರೆ ಇತ್ತೀಚಿನ ಕೆಲವು ತಪ್ಪುಗಳಿಂದಾಗಿ ಥಿಯೇಟರ್ ಗೆ ಬರುವ ಸಂಖ್ಯೆ ಕಡಿಮೆಯಾಗಲು ಕಾರಣವಾಗಿವೆ" ಎಂದು ಅವರು ಒಪ್ಪಿಕೊಂಡರು. ಹಿರಿಯ ತಂತ್ರಜ್ಞರು ಮತ್ತು ನಟರ ಹೊಸತನದ ಪ್ರಯತ್ನಗಳನ್ನು ಪ್ರಸ್ತಾಪಿಸಿದ ಅವರು, "ಗುಣಮಟ್ಟದ ಚಲನಚಿತ್ರಗಳನ್ನು ನಿರ್ಮಿಸುವುದು ಪ್ರಮುಖವಾಗಿದೆ" ಎಂದು ಹೇಳಿದರು.

ಸುದೀಪ್
ಅಂತಿಮ ಹಂತದ ಶೂಟಿಂಗ್ ನಲ್ಲಿ ಸುದೀಪ್ ನಟನೆಯ 'ಮ್ಯಾಕ್ಸ್'!

ಸುದೀಪ್ ಅವರ ಮುಂಬರುವ ಯೋಜನೆಗಳಲ್ಲಿ ಸತ್ಯ ಜ್ಯೋತಿ ಫಿಲ್ಮ್ಸ್ ಅಡಿಯಲ್ಲಿ ನಿರ್ದೇಶಕ ಚೇರನ್ ಜೊತೆಗಿನ ಚಲನಚಿತ್ರ, ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ ಸಹ ನಟಿಸಿದ್ದಾರೆ. ಅನುಪ್ ಭಂಡಾರಿ ನಿರ್ದೇಶನದ ಬಿಲ್ಲ ರಂಗ ಬಾಷಾ ಮತ್ತು ಕೆಆರ್‌ಜಿ ಸ್ಟುಡಿಯೋಸ್‌ನ ಸಹಯೋಗದಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಖ್ಯಾತಿಯ ಹೇಮಂತ್ ಎಂ ರಾವ್ ಅವರೊಂದಿಗೆ ಸಂದೇಶ್ ಪ್ರೊಡಕ್ಷನ್ಸ್ ಜೊತೆಗೆ ಸಿನಿಮಾಗಾಗಿ ಮಾತುಕತೆ ನಡೆಯುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com