ಅಂತಿಮ ಹಂತದ ಶೂಟಿಂಗ್ ನಲ್ಲಿ ಸುದೀಪ್ ನಟನೆಯ 'ಮ್ಯಾಕ್ಸ್'!

ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಬಹುಭಾಷಾ ಸಿನಿಮಾ, ವಿಜಯ್ ಕಾರ್ತಿಕೇಯನ್ ಅವರ ಚೊಚ್ಚಲ ನಿರ್ದೇಶನದ  ಮ್ಯಾಕ್ಸ್ ಶೂಟಿಂಗ್ ಅಂತಿಮ ಹಂತವನ್ನು ಪ್ರವೇಶಿಸಿದೆ. ಚೆನ್ನೈನಲ್ಲಿ ಕ್ಲೈಮ್ಯಾಕ್ಸ್ ಭಾಗಗಳ ಶೂಟಿಂಗ್ ಪುನರಾರಂಭಿಸುವ ಮೂಲಕ ಚಿತ್ರವು ಮುಕ್ತಾಯಗೊಳ್ಳಲಿದೆ.
ಮ್ಯಾಕ್ಸ್ ಸಿನಿಮಾ ಸ್ಟಿಲ್
ಮ್ಯಾಕ್ಸ್ ಸಿನಿಮಾ ಸ್ಟಿಲ್
Updated on

ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಬಹುಭಾಷಾ ಸಿನಿಮಾ, ವಿಜಯ್ ಕಾರ್ತಿಕೇಯನ್ ಅವರ ಚೊಚ್ಚಲ ನಿರ್ದೇಶನದ  ಮ್ಯಾಕ್ಸ್ ಶೂಟಿಂಗ್ ಅಂತಿಮ ಹಂತವನ್ನು ಪ್ರವೇಶಿಸಿದೆ. ಚೆನ್ನೈನಲ್ಲಿ ಕ್ಲೈಮ್ಯಾಕ್ಸ್ ಭಾಗಗಳ ಶೂಟಿಂಗ್ ಪುನರಾರಂಭಿಸುವ ಮೂಲಕ ಚಿತ್ರವು ಮುಕ್ತಾಯಗೊಳ್ಳಲಿದೆ.

ಚೇತನ್ ಡಿ ಸೋಜಾ ನೃತ್ಯ ನಿರ್ದೇಶನದ ಹೈ-ಆಕ್ಟೇನ್ ಸ್ಟಂಟ್ ಸೀಕ್ವೆನ್ಸ್ ಅನ್ನು ತಯಾರಕರು ಯೋಜಿಸಿದ್ದಾರೆ. ಫೆಬ್ರವರಿ 10 ರೊಳಗೆ ಚಿತ್ರೀಕರಣವನ್ನು ಪೂರ್ಣಗೊಳಿಸುವ ಗುರಿಯನ್ನು ತಂಡವು ಹೊಂದಿದೆ. ಮಾಣಿಕ್ಯ ನಂತರ ಸುದೀಪ್ ಅವರೊಂದಿಗೆ  ಮ್ಯಾಕ್ಸ್ ನಲ್ಲಿ ವರಲಕ್ಷ್ಮಿ ಶರತ್‌ಕುಮಾರ್ ಮತ್ತೆ ಒಂದಾಗುತ್ತಿದ್ದಾರೆ. ಚಿತ್ರದಲ್ಲಿ ಸಂಯುಕ್ತಾ ಹೊರ್ನಾಡ್, ಸುಕೃತಾ ವಾಗ್ಲೆ ಮತ್ತು ಅನಿರುದ್ಧ್ ಭಟ್ ಕೂಡ ನಟಿಸಿದ್ದಾರೆ.

 ಕಲೈಪ್ಪುಲಿ ಎಸ್ ಥಾನು ಅವರ ವಿ ಕ್ರಿಯೇಷನ್ಸ್ ನಿರ್ಮಾಣದ ಮ್ಯಾಕ್ಸ್ ಚಿತ್ರಕ್ಕೆ ಶಿವಕುಮಾರ್ ಕಲಾ ನಿರ್ದೇಶನ ಮಾಡಿದ್ದಾರೆ. ಅಜನೀಶ್ ಬಿ ಲೋಕನಾಥ್ ಸಂಗೀತ ನಿರ್ದೇಶನ ಮತ್ತು ಶೇಖರ್ ಚಂದ್ರ ಅವರ ಛಾಯಾಗ್ರಹಣವಿದೆ.  ಪೋಸ್ಟ್-ಪ್ರೊಡಕ್ಷನ್ ಕೆಲಸಗಳು ಮತ್ತು ಡಬ್ಬಿಂಗ್ ಕೆಲಸಗಳು ನಡೆಯುತ್ತಿದ್ದು ಏಪ್ರಿಲ್ 2024 ರಂದು ಸಿನಿಮಾ ಬಿಡುಗಡೆಯಾಲಿದೆ ಎಂದು ಮೂಲಗಳು ತಿಳಿಸಿವೆ.

'ಬಿಗ್ ಬಾಸ್ ಸೀಸನ್ 10' ಹೋಸ್ಟ್ ಮಾಡುತ್ತಿರುವ ಸುದೀಪ್ ತಮಿಳು ನಿರ್ದೇಶಕ ಚೇರನ್ ಅವರೊಂದಿಗೆ ಮತ್ತೊಂದು ಸಿನಿಮಾವನ್ನು ಮಾಡುತ್ತಿದ್ದಾರೆ. ಕೆಜಿಎಫ್ ಖ್ಯಾತಿಯ ಶ್ರೀನಿಧಿ ಶೆಟ್ಟಿ ಈ ಮುಂಬರುವ ಈ ಚಿತ್ರದಲ್ಲಿ ಸುದೀಪ್‌ಗೆ ನಾಯಕಿಯಾಗಿ ಜೊತೆಯಾಗಲಿದ್ದಾರೆ. ಈ ವರ್ಷ  ಸಿನಿಮಾ ಆರಂಭವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com