ಸುದೀಪ್ ನಟನೆಯ 'ಮ್ಯಾಕ್ಸ್' ಅಭಿಮಾನಿಗಳಿಗೆ ಆ್ಯಕ್ಷನ್ ರಸದೌತಣ ನೀಡುತ್ತದೆ: ಇಂದ್ರಜಿತ್ ಲಂಕೇಶ್

ಸುದೀಪ್ ಅಭಿಮಾನಿಗಳಿಗೆ 'ಮ್ಯಾಕ್ಸ್' ಆ್ಯಕ್ಷನ್ ಫೀಸ್ಟ್ ಆಗಲಿದೆ ಎಂದು ಗೌರಿ ಚಿತ್ರದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ. ಸದ್ಯ ಮ್ಯಾಕ್ಸ್‌ ಚಿತ್ರೀಕರಣ ನಡೆಯುತ್ತಿರುವ ಮಹಾಬಲಿಪುರಂಗೆ ಇತ್ತೀಚೆಗೆ ಭೇಟಿ ನೀಡಿದ ನಿರ್ದೇಶಕರು, ಚಿತ್ರದ ಶೋರೀಲ್ ನೋಡುವ ಭಾಗ್ಯ ಪಡೆದರು.
ಸುದೀಪ್ ಜೊತೆಗೆ ಇಂದ್ರಜಿತ್ ಲಂಕೇಶ್
ಸುದೀಪ್ ಜೊತೆಗೆ ಇಂದ್ರಜಿತ್ ಲಂಕೇಶ್

ಸುದೀಪ್ ಅಭಿಮಾನಿಗಳಿಗೆ 'ಮ್ಯಾಕ್ಸ್' ಆ್ಯಕ್ಷನ್ ಫೀಸ್ಟ್ ಆಗಲಿದೆ ಎಂದು ಗೌರಿ ಚಿತ್ರದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ. ಸದ್ಯ ಮ್ಯಾಕ್ಸ್‌ ಚಿತ್ರೀಕರಣ ನಡೆಯುತ್ತಿರುವ ಮಹಾಬಲಿಪುರಂಗೆ ಇತ್ತೀಚೆಗೆ ಭೇಟಿ ನೀಡಿದ ನಿರ್ದೇಶಕರು, ಚಿತ್ರದ ಶೋರೀಲ್ ನೋಡುವ ಭಾಗ್ಯ ಪಡೆದರು. ಆರಂಭಿಕ ದೃಶ್ಯಗಳನ್ನು ವೀಕ್ಷಿಸಿದ ಕೆಲವರಲ್ಲಿ ಒಬ್ಬರಾದ ಇಂದ್ರಜಿತ್ ಲಂಕೇಶ್, ಸಿನಿಮಾ ಬಗ್ಗೆ ತಮ್ಮ ಉತ್ಸಾಹವನ್ನು ಹಂಚಿಕೊಂಡರು.

ಇಂದ್ರಜಿತ್ ಲಂಕೇಶ್ ಹೇಳುವಂತೆ ಚಿತ್ರವು ತನ್ನ ಹೈ-ಆಕ್ಟೇನ್ ಸೀಕ್ವೆನ್ಸ್ ಮತ್ತು ಅಭಿನಯದಿಂದ ಪ್ರೇಕ್ಷಕರನ್ನು ಸೆಳೆಯುವ ಸಾಮರ್ಥ್ಯ ಹೊಂದಿದೆ. ಶೋರಿಲ್ ಬಗ್ಗೆ ಮಾತನಾಡುತ್ತಾ, ಚಿತ್ರದ ಆ್ಯಕ್ಷನ್ ಸೀಕ್ವೆನ್ಸ್‌ಗಳನ್ನು ಹೈಲೈಟ್ ಮಾಡಿದರು ಮತ್ತು ಸುದೀಪ್ ಅವರ ವರ್ತನೆ ಮತ್ತು ಬಾಡಿ ಲಾಂಗ್ವೇಜ್ ಹುಚ್ಚ ಮತ್ತು ಕೆಂಪೇಗೌಡ ಸಿನಿಮಾದಲ್ಲಿನ ನಟನ ಅಪ್ರತಿಮ ಪಾತ್ರಗಳ ನೆನಪುಗಳನ್ನು ತರುತ್ತದೆ. ಈ ಅಂಶಗಳು ಮ್ಯಾಕ್ಸ್‌ನಲ್ಲಿನ ಸುದೀಪ್ ಅವರ ಅಭಿನಯಕ್ಕೆ ಕನ್ನಡಿ ಹಿಡಿಯುತ್ತವೆ ಎಂದು ಇಂದ್ರಜಿತ್ ವಿವರಿಸಿದರು. ಒಳ್ಳೆ ಗೆಳೆಯರಾದ ಇಬ್ಬರು ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದರು.

ವಿಜಯ್ ಕಾರ್ತಿಕೇಯನ್ ಅವರ ಚೊಚ್ಚಲ ನಿರ್ದೇಶನದ ಮ್ಯಾಕ್ಸ್ ಚಿತ್ರೀಕರಣದ ಅಂತಿಮ ಹಂತಕ್ಕೆ ಪ್ರವೇಶಿಸಿದೆ. ಸುದೀಪ್ ಸದ್ಯ ಪ್ರಮುಖ ಆ್ಯಕ್ಷನ್ ಸೀಕ್ವೆನ್ಸ್‌ಗಳಲ್ಲಿ ತೊಡಗಿಕೊಂಡಿದ್ದಾರೆ. ಶೀಘ್ರದಲ್ಲೇ ನಿರ್ಮಾಣವನ್ನು ಪೂರ್ಣಗೊಳಿಸುವ ಯೋಜನೆ ಇದೆ. ವಿಕ್ರಾಂತ್ ರೋಣ, ವರದನಾಯಕ, ವೀರ ಮದಕರಿ ಮತ್ತು ಕೆಂಪೇಗೌಡರಂತಹ ಕೆಲವು ಚಿತ್ರಗಳಲ್ಲಿ ಪೊಲೀಸ್ ಅಧಿಕಾರಿಯ ಪಾತ್ರಕ್ಕೆ ಹೆಸರುವಾಸಿಯಾದ ಸುದೀಪ್, ಮ್ಯಾಕ್ಸ್‌ನಲ್ಲಿ ಮತ್ತೊಮ್ಮೆ ಇನ್ಸ್‌ಪೆಕ್ಟರ್ ಪಾತ್ರವನ್ನು ನಿರ್ವಹಿಸಲಿದ್ದಾರೆ.

ಸುದೀಪ್ ಜೊತೆಗೆ ಇಂದ್ರಜಿತ್ ಲಂಕೇಶ್
ಅಂತಿಮ ಹಂತದ ಶೂಟಿಂಗ್ ನಲ್ಲಿ ಸುದೀಪ್ ನಟನೆಯ 'ಮ್ಯಾಕ್ಸ್'!

ಕಲೈಪುಲಿ ಎಸ್ ಥಾನು ಅವರ ವಿ ಕ್ರಿಯೇಷನ್ಸ್ ನಿರ್ಮಾಣದ ಮ್ಯಾಕ್ಸ್ ಚಿತ್ರದಲ್ಲಿ ಸುದೀಪ್ ಅವರ ಮಾಣಿಕ್ಯ ಸಿನಿಮಾದಲ್ಲಿ ನಟಿಸಿದ್ದ ವರಲಕ್ಷ್ಮಿ ಶರತ್‌ಕುಮಾರ್ ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆ. ಇವರೊಂದಿಗೆ ಚಿತ್ರದಲ್ಲಿ ಸಂಯುಕ್ತಾ ಹೊರ್ನಾಡ್, ಸುಕೃತಾ ವಾಗ್ಲೆ ಮತ್ತು ಅನಿರುದ್ಧ್ ಭಟ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಚಿತ್ರಕ್ಕೆ ಶಿವಕುಮಾರ್ ಅವರ ಕಲಾ ನಿರ್ದೇಶನ, ಅಜನೀಶ್ ಬಿ ಲೋಕನಾಥ್ ಅವರ ಸಂಗೀತ ಸಂಯೋಜನೆ ಮತ್ತು ಶೇಖರ್ ಚಂದ್ರ ಅವರ ಛಾಯಾಗ್ರಹಣವಿದೆ. ತಮಿಳು ನಿರ್ದೇಶಕ ಚೇರನ್ ಅವರೊಂದಿಗೆ ಸುದೀಪ್ ಮತ್ತೊಂದು ಸಿನಿಮಾವನ್ನು ಮಾಡುತ್ತಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದ ಬಹು ನಿರೀಕ್ಷಿತ ಬಿಲ್ಲಾ ರಂಗ ಬಾಷಾ ಚಿತ್ರದಲ್ಲಿಯೂ ಕೆಲಸ ಮಾಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com