'ಅಪ್ಪು' ಎಂಬ ಹೆಸರು ಹೃದಯ ಬಡಿತದಂತೆ ಯಾವಾಗಲೂ ಪ್ರತಿಧ್ವನಿಸುತ್ತದೆ: ಯುವ ರಾಜ್‌ಕುಮಾರ್

ಚಾಮರಾಜನಗರದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಶನಿವಾರ ಯುವ ರಾಜ್‌ಕುಮಾರ್ ಅವರು ಮುಖ್ಯ ಭೂಮಿಕೆಯಲ್ಲಿರುವ 'ಯುವ' ಚಿತ್ರದ ಮೊದಲ ಹಾಡು 'ಒಬ್ಬನೇ ಶಿವ ಒಬ್ಬನೇ ಯುವ'ವನ್ನು ಬಿಡುಗಡೆ ಮಾಡಲಾಯಿತು.
ಯುವ ರಾಜ್‌ಕುಮಾರ್
ಯುವ ರಾಜ್‌ಕುಮಾರ್

ಚಾಮರಾಜನಗರದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಶನಿವಾರ ಯುವ ರಾಜ್‌ಕುಮಾರ್ ಅವರು ಮುಖ್ಯ ಭೂಮಿಕೆಯಲ್ಲಿರುವ 'ಯುವ' ಚಿತ್ರದ ಮೊದಲ ಹಾಡು 'ಒಬ್ಬನೇ ಶಿವ ಒಬ್ಬನೇ ಯುವ'ವನ್ನು ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಯುವ ರಾಜ್‌ಕುಮಾರ್, 'ನನ್ನ ಪಯಣ ಇಲ್ಲಿಂದಲೇ ಆರಂಭವಾಗಬೇಕು. ಇದು ನನ್ನ ಆಶಯವಾಗಿತ್ತು. ಈ ಚಿತ್ರಕ್ಕಾಗಿ ನನ್ನ ಕೈಲಾದಷ್ಟು ಮಾಡಿದ್ದೇನೆ. ಸಣ್ಣಪುಟ್ಟ ತಪ್ಪುಗಳಿದ್ದರೆ ದಯವಿಟ್ಟು ಕ್ಷಮಿಸಿ. ಏನೇ ತಪ್ಪುಗಳಿದ್ದರೂ ಮುಂದಿನ ಚಿತ್ರದಲ್ಲಿ ಸರಿಪಡಿಸಿಕೊಳ್ಳುತ್ತೇನೆ. ನೀವು ನೀಡಿದ ಪ್ರೀತಿಗೆ ನನ್ನ ಕೃತಜ್ಞತೆಯನ್ನು ಪದಗಳಲ್ಲಿ ವ್ಯಕ್ತಪಡಿಸುವುದು ಕಷ್ಟ. ನನ್ನ ಇಡೀ ಜೀವನ ನಿಮ್ಮ ಪ್ರೀತಿ ಮತ್ತು ಆಶೀರ್ವಾದಕ್ಕೆ ಸಮರ್ಪಿತವಾಗಿದೆ. ನಾನು ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇನೆ. ನೀವು ನನ್ನ ಬೆಂಬಲಕ್ಕೆ ನಿಲ್ಲುತ್ತೀರಾ? ಎಂದು ಪ್ರಶ್ನಿಸಿದರು.

ತನ್ನ ತಾತ-ಅಜ್ಜಿಯನ್ನು (ರಾಜ್‌ಕುಮಾರ್ ಮತ್ತು ಪಾರ್ವತಮ್ಮ ರಾಜ್‌ಕುಮಾರ್) ಮತ್ತು ಅವರ ತಂದೆ (ರಾಘವೇಂದ್ರ ರಾಜ್‌ಕುಮಾರ್) ಬಗ್ಗೆ ನೆನಪಿಸಿಕೊಂಡ ಯುವ, 'ಅವರು ಯಾವಾಗಲೂ ನನ್ನ ನೆನಪಿಗೆ ಬರುತ್ತಾರೆ. ಏಕೆಂದರೆ, ನಾನು ಅವರೆಲ್ಲರನ್ನು ನಿಮ್ಮಲ್ಲಿ ನೋಡುತ್ತೇನೆ. ಅವರೆಲ್ಲರೂ ನಿಮ್ಮೊಂದಿಗಿದ್ದಾರೆ. ನಾನು ನಿಮ್ಮಲ್ಲಿ ನನ್ನ ಇಡೀ ಕುಟುಂಬವನ್ನು ನೋಡುತ್ತೇನೆ ಎಂದರು. ಈ ವೇಳೆ ಸಮಾರಂಭದಲ್ಲಿ ನೆರೆದಿದ್ದ ಜನರು ‘ಅಪ್ಪು, ಅಪ್ಪು’ ಎಂದು ಸಂಭ್ರಮಿಸಿದರು. 'ನಾನು ಅಪ್ಪು ಎಂಬ ಹೆಸರನ್ನು ಕೇಳಿದಾಗಲೆಲ್ಲಾ, ಅದು ಹೃದಯ ಬಡಿತದಂತೆ ಪ್ರತಿಧ್ವನಿಸುತ್ತದೆ' ಎಂದು ಹೇಳಿದರು.

ಯುವ ರಾಜ್‌ಕುಮಾರ್
ಅಪ್ಪು ರೀತಿ ಸ್ಟೈಲಿಶ್ ಡ್ಯಾನ್ಸ್ 'ಯುವ' ಚಿತ್ರದ ಹಾಡಿನಲ್ಲಿ ಮಿಂಚು ಹರಿಸಿದ ಯುವ ರಾಜಕುಮಾರ್!

ತನ್ನನ್ನು ತಾನು ಈ ಊರಿನ (ಚಾರ್ಮರಾಜನಗರ) ಮಗ ಎಂದು ಕರೆದುಕೊಂಡ ಅವರು, 'ನನ್ನನ್ನು ಬೆಳೆಸಿ, ಪೋಷಿಸಿ. ನಿಮ್ಮ ಆಶೀರ್ವಾದ ಮತ್ತು ಪ್ರೀತಿ ಸದಾ ಇರಲಿ. ಇಂದು ನಾನು ಏನಾಗಿದ್ದರೂ, ನನ್ನ ಕುಟುಂಬ ಏನೇ ಆಗಿದ್ದರೂ, ಎಲ್ಲದಕ್ಕೂ ಜನರೇ ಕಾರಣ ಮತ್ತು ನಿಮ್ಮೆಲ್ಲರಿಂದ ಪೋಷಿಸಲ್ಪಡಬೇಕೆಂದು ನಾನು ಬಯಸುತ್ತೇನೆ. ಇನ್ನಾದರೂ ಎಲ್ಲರೂ ಕನ್ನಡ ಚಿತ್ರಗಳನ್ನು ವೀಕ್ಷಿಸಿ ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.

ಯುವ ರಾಜ್‌ಕುಮಾರ್
ಯುವ ರಾಜ್‌ಕುಮಾರ್ ನಟನೆಯ 'ಯುವ' ಬಿಡುಗಡೆಗೆ ಸಜ್ಜು; ಆಡಿಯೋ ಹಕ್ಕು ಭಾರಿ ಬೆಲೆಗೆ ಮಾರಾಟ!

ಯುವ ಚಿತ್ರದಲ್ಲಿ ಕಾಂತಾರ ಖ್ಯಾತಿಯ ಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿರುವ ಈ ಚಿತ್ರವನ್ನು ಸಂತೋಷ್ ಆನಂದ್‌ರಾಮ್ ನಿರ್ದೇಶಿಸಿದ್ದಾರೆ. ಚಿತ್ರ ಮಾರ್ಚ್ 29 ರಂದು ಬಿಡುಗಡೆಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com