ಟ್ರೋಲ್‌ಗಳು ಮತ್ತು ರೀಲ್‌ಗಳು ಇಂದು ತ್ವರಿತ ಮನರಂಜನೆಯ ಸಾಧನವಾಗಿವೆ: ರೀಷ್ಮಾ ನಾಣಯ್ಯ

ಉಪೇಂದ್ರ ನಿರ್ದೇಶನದ ಯುಐ ಸಿನಿಮಾದ ಟ್ರೋಲಾಗತ್ತೆ ಹಾಡು ಬಿಡುಗಡೆಯಾಗಿದ್ದು, ನಟಿ ರೀಷ್ಮಾ ನಾಣಯ್ಯ ಸಾಕಷ್ಟು ಮೆಚ್ಚುಗೆ ಗಳಿಸಿದ್ದಾರೆ. ಉಪೇಂದ್ರ ಅವರು ತಮ್ಮನ್ನು ಚಿತ್ರಕ್ಕೆ ಆಯ್ಕೆ ಮಾಡಿದಾಗ, ಅವರು ಮುಗ್ಧರಾಗಿರಬೇಕು ಆದರೆ ಕ್ರಿಯಾಶೀಲವಾಗಿರಬೇಕು, ಉತ್ಸಾಹಭರಿತ ಮತ್ತು ಎನರ್ಜಿಯನ್ನು ಹೊಂದಿರಬೇಕು ಎಂಬುದನ್ನು ಬಯಸಿದ್ದರು ಎಂಬುದನ್ನು ಹೇಳುತ್ತಾರೆ ರೀಷ್ಮಾ.
ರೀಷ್ಮಾ ನಾಣಯ್ಯ
ರೀಷ್ಮಾ ನಾಣಯ್ಯ

ಉಪೇಂದ್ರ ನಿರ್ದೇಶನದ ಯುಐ ಸಿನಿಮಾದ ಟ್ರೋಲಾಗತ್ತೆ ಹಾಡು ಬಿಡುಗಡೆಯಾಗಿದ್ದು, ನಟಿ ರೀಷ್ಮಾ ನಾಣಯ್ಯ ಸಾಕಷ್ಟು ಮೆಚ್ಚುಗೆ ಗಳಿಸಿದ್ದಾರೆ. ಉಪೇಂದ್ರ ಅವರು ತಮ್ಮನ್ನು ಚಿತ್ರಕ್ಕೆ ಆಯ್ಕೆ ಮಾಡಿದಾಗ, ಅವರು ಮುಗ್ಧರಾಗಿರಬೇಕು ಆದರೆ ಕ್ರಿಯಾಶೀಲವಾಗಿರಬೇಕು, ಉತ್ಸಾಹಭರಿತ ಮತ್ತು ಎನರ್ಜಿಯನ್ನು ಹೊಂದಿರಬೇಕು ಎಂಬುದನ್ನು ಬಯಸಿದ್ದರು ಎಂದು ಹೇಳುತ್ತಾರೆ ರೀಷ್ಮಾ.

'ಉಪೇಂದ್ರ ಅವರ ನಿರ್ದೇಶನದಲ್ಲಿ ಅಂತಹ ಹಾಡು ಅದೆಷ್ಟು ಅದ್ಭುತವಾಗಿ ಮೂಡಿಬಂದಿದೆ ಎಂಬುದನ್ನು ನೃತ್ಯ ಸಂಯೋಜಕ ಇಮ್ರಾನ್ ಸರ್ಧಾರಿಯಾ ಸಹ ಹೇಳಿದ್ದಾರೆ' ಎಂದು ರೀಷ್ಮಾ ತಿಳಿಸಿದರು.

'ಈ ಹಾಡಿನ ಪ್ರತಿಯೊಂದು ಸಾಲು ಅರ್ಥಪೂರ್ಣ ಸಂದೇಶವನ್ನು ಹೊಂದಿದೆ, ವಿಭಿನ್ನ ದೃಷ್ಟಿಕೋನದ ಮೇಲೆ ಬೆಳಕು ಚೆಲ್ಲುತ್ತದೆ. ಟ್ರೋಲ್ ಟ್ರ್ಯಾಕ್ ಅನ್ನು ಸಂದೇಶ ಅಥವಾ ಹೇಳಿಕೆಯಾಗಿ ಗ್ರಹಿಸಬಹುದು' ಎಂದು ಅವರು ಹೇಳುತ್ತಾರೆ.

ರೀಷ್ಮಾ ನಾಣಯ್ಯ
ಉಪೇಂದ್ರ ನಿರ್ದೇಶನದ 'ಯುಐ' ಸಿನಿಮಾದ 'ಟ್ರೋಲಾಗುತ್ತೆ' ಹಾಡು ರಿಲೀಸ್: ಗಮನಸೆಳೆದ ರೀಷ್ಮಾ ನಾಣಯ್ಯ

ಟ್ರೋಲ್‌ಗಳು ಮತ್ತು ರೀಲ್‌ಗಳ ಕುರಿತು ತಮ್ಮ ವೈಯಕ್ತಿಕ ಅಭಿಪ್ರಾಯಗಳ ಬಗ್ಗೆ ಹಂಚಿಕೊಳ್ಳುವ ರೀಷ್ಮಾ, 'ಟ್ರೋಲ್‌ಗಳು ಮತ್ತು ರೀಲ್‌ಗಳು ತ್ವರಿತ ಮನರಂಜನೆಯ ಸಾಧನವಾಗಿ ಮಾರ್ಪಟ್ಟಿವೆ. ಆದಾಗ್ಯೂ, ಒಳ್ಳೆಯ ಮತ್ತು ತಮಾಷೆಯ ಪದಗಳನ್ನು ಒಪ್ಪಿಕೊಳ್ಳಲಾಗಿದೆ. ವಿಶೇಷವಾಗಿ, ನೀವು ಕರಿಮಣಿ ಮಾಲಿಕ ನೀನಲ್ಲ ಎನ್ನುವ ರೀಲ್‌ಗಳನ್ನು ವೀಕ್ಷಿಸಿದಾಗ, ಅಂತಹವುಗಳು ನಗುವನ್ನು ತರಿಸುತ್ತವೆ' ಎಂದರು.

ಆದರೂ, ನಕಾರಾತ್ಮಕ ಟ್ರೋಲ್‌ಗಳನ್ನು ಸಹಿಸಿಕೊಳ್ಳುವುದು ಯಾರಿಗಾದರೂ ಕಷ್ಟ. ಓರ್ವ ನಟಿಯಾಗಿ ಇದು ಹಲವು ಬಾರಿ ಕಷ್ಟವಾಗಿರುತ್ತದೆ ಮತ್ತು ಇಂತಹ ಸಮಯದಲ್ಲಿ ಅಂತಹ ವಿಚಾರಗಳಿಗೆ ಹೆಚ್ಚಿನ ಮಹತ್ವ ನೀಡದಿರುವುದು ಒಳ್ಳೆಯದು. ಆದರೆ, ಅಂತಿಮವಾಗಿ, ಎಲ್ಲರೂ ಮನುಷ್ಯರು. ಕೆಟ್ಟ ಟ್ರೋಲ್‌ಗಳು ಮತ್ತು ವಿಭಿನ್ನ ಅಭಿಪ್ರಾಯಗಳೊಂದಿಗೆ ವ್ಯವಹರಿಸುವುದು ಯಾರಿಗೂ ಸುಲಭವಲ್ಲ. ಯಾರಿಗಾದರೂ ಹೇಳಲು ಏನೂ ಒಳ್ಳೆಯ ವಿಚಾರವಿಲ್ಲದಿದ್ದರೆ, ಏನನ್ನೂ ಹೇಳದಿರುವುದೇ ಉತ್ತಮ ಎಂದು ರೀಷ್ಮಾ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com