ಪ್ರಮೋದ್ ಜಯ ನಿರ್ದೇಶನದ 'ದಿಲ್ ಖುಷ್' ನಾಳೆ ತೆರೆಗೆ; ನಾಯಕನಾಗಿ ರಂಜಿತ್ ಮಿಂಚು

ಈ ಹಿಂದೆ ನಿರ್ದೇಶಕ ಸಿಂಪಲ್ ಸುನಿ ಬಳಿ ಸಹಾಯಕರಾಗಿ ಕೆಲಸ ಮಾಡಿದ್ದ ಪ್ರಮೋದ್ ಜಯ ನಿರ್ದೇಶನದ 'ದಿಲ್ ಖುಷ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಚಿತ್ರವು ಮಾರ್ಚ್ 22ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ದಿಲ್ ಖುಷ್ ಸಿನಿಮಾದ ಸ್ಟಿಲ್
ದಿಲ್ ಖುಷ್ ಸಿನಿಮಾದ ಸ್ಟಿಲ್

ಈ ಹಿಂದೆ ನಿರ್ದೇಶಕ ಸಿಂಪಲ್ ಸುನಿ ಬಳಿ ಸಹಾಯಕರಾಗಿ ಕೆಲಸ ಮಾಡಿದ್ದ ಪ್ರಮೋದ್ ಜಯ ನಿರ್ದೇಶನದ 'ದಿಲ್ ಖುಷ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಚಿತ್ರವು ಮಾರ್ಚ್ 22ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಪ್ರಮೋದ್ ಅವರು ತಮ್ಮ ಜೀವನದ ಅನುಭವಗಳನ್ನು ಆಧರಿಸಿ ದಿಲ್ ಖುಷ್ ಸಿನಿಮಾದ ಕಥೆ ಬರೆದಿದ್ದಾರೆ. ಆಪರೇಷನ್ ಅಲಮೇಲಮ್ಮ, ಚಮಕ್ ಮತ್ತು ಬಜಾರ್‌ನಂತಹ ಸಿನಿಮಾಗಳಲ್ಲಿ ಕೆಲಸ ಮಾಡಿದ್ದ ಅನುಭವವನ್ನು ಹೊಂದಿದ್ದಾರೆ.

ನಿರ್ದೇಶಕರಾಗಿ ದಿಲ್ ಖುಷ್ ಪ್ರಮೋದ್ ಅವರ ಚೊಚ್ಚಲ ಚಿತ್ರವಾಗಿರುವುದಲ್ಲದೆ, ಸಿನಿಮಾ. ರಂಗಭೂಮಿ, ಧಾರಾವಾಹಿಗಳು ಮತ್ತು ಕಿರುಚಿತ್ರಗಳಲ್ಲಿ ನಟಿಸಿದ ಅನುಭವ ಹೊಂದಿರುವ ರಂಜಿತ್ ಅವರಿಗೂ ಇದು ಮೊದಲ ಸಿನಿಮಾ. ಚಿತ್ರದಲ್ಲಿ ನಾಯಕಿಯಾಗಿ ಸ್ಪಂದನಾ ಸೋಮಣ್ಣ ನಟಿಸಿದ್ದಾರೆ. ಅವರು ಕೂಡ ಕಿರಿತೆರೆಯಿಂದ ಬೆಳ್ಳಿತೆರೆಗೆ ಪದಾರ್ಪಣೆ ಮಾಡುತ್ತಿದ್ದಾರೆ.

ಜಯಪ್ರಭಾ ಕಲರ್ ಫ್ರೇಮ್ಸ್ ಬ್ಯಾನರ್ ಅಡಿಯಲ್ಲಿ ಜಯಲಕ್ಷ್ಮಿ ಪ್ರವೀಣ್ ಮತ್ತು ಪ್ರಭಾಸ್ ಶೇಖರ್ ದಿಲ್ ಖುಷ್ ಸಿನಿಮಾ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಧರ್ಮಣ್ಣ ಕಡೂರು, ರಘು ರಾಮನಕೊಪ್ಪ, ಅರುಣಾ ಬಾಲರಾಜ್, ರಂಗಾಯಣ ರಘು ಸೇರಿದಂತೆ ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಪ್ರಸಾದ್ ಕೆ ಶೆಟ್ಟಿ ಅವರ ಸಂಗೀತ ಮತ್ತು ನಿವಾಸ ನಾರಾಯಣ ಅವರ ಛಾಯಾಗ್ರಹಣವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com