
ಕಾಲೇಜು ಕೇಂದ್ರಿತ ಕಥೆಗಳು ಆಗಾಗ್ಗೆ ಉತ್ತಮ ಮನರಂಜನೆಯನ್ನು ನೀಡುತ್ತವೆ. ಈ ಕಥೆಗಳು ಎಲ್ಲಾ ವಯಸ್ಸಿನ ಪ್ರೇಕ್ಷಕರೊಂದಿಗೆ ಕನೆಕ್ಟ್ ಆಗುತ್ತವೆ. ಬ್ಯಾಕ್ ಬೆಂಚರ್ಸ್ ಚಿತ್ರತಂಡ ಇದೀಗ ಇದೇ ರೀತಿಯ ಕಥೆಯನ್ನು ಕನ್ನಡ ಚಿತ್ರರಂಗಕ್ಕೆ ಮರಳಿ ತರುತ್ತಿದ್ದಾರೆ. ತಾಜಾ ನಿರೂಪಣೆಗಳನ್ನು ಹೆಣೆಯುವಲ್ಲಿ ಹೆಸರುವಾಸಿಯಾದ ನಿರ್ದೇಶಕ ಬಿಆರ್ ರಾಜಶೇಖರ್ ಬ್ಯಾಕ್ ಬೆಂಚರ್ಸ್ ಸಿನಿಮಾಗಾಗಿ ಹೊಸ ಮುಖಗಳನ್ನು ಒಂದೆಡೆ ಸೇರಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಟೀಸರ್ ಕಾಮಿಡಿ ಮತ್ತು ಹೃದಯಸ್ಪರ್ಶಿ ಕಥೆಯ ಸುಳಿವು ನೀಡಿದೆ.
ಪಿಪಿ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಚಿತ್ರದಲ್ಲಿ ನಿರ್ದೇಶಕ-ನಟ ಅರವಿಂದ್ ಕುಪ್ಲಿಕರ್, ರಂಜನ್ ನರಸಿಂಹ ಮೂರ್ತಿ, ಜತಿನ್ ಆರ್ಯನ್, ಆಕಾಶ್, ಶಶಾಂಕ್ ಸಿಂಗ್, ಮಾನ್ಯಾ ಗೌಡ, ಕುಂಕುಮ್, ಅನುಷಾ ಸುರೇಶ್, ಮನೋಜ್ ಶೆಟ್ಟಿ ಮತ್ತು ನಮಿತಾ ಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ನಕುಲ್ ಅಭಯಂಕರ್ ಅವರ ಸಂಗೀತ ಸಂಯೋಜನೆ ಮತ್ತು ಮನೋಹರ್ ಜೋಶಿ ಅವರ ಛಾಯಾಗ್ರಹಣವಿದೆ.
ಈ ಹಿಂದೆ ತ್ರಿಕೋನ ಮತ್ತು ಬರ್ಫಿ ಚಿತ್ರಗಳನ್ನು ನಿರ್ದೇಶಿಸಿದ್ದ ರಾಜಶೇಖರ್ ಸದ್ಯ ಬ್ಯಾಕ್ ಬೆಂಚರ್ಸ್ ಬಿಡುಗಡೆಗೆ ಸಜ್ಜಾಗಿದ್ದಾರೆ. ಟೀಸರ್ ಬಿಡುಗಡೆಯ ಬದಿಯಲ್ಲಿ ಸಿನಿಮಾ ಎಕ್ಸ್‌ಪ್ರೆಸ್ ಜೊತೆಗೆ ಮಾತನಾಡಿದ ಅವರು, ಬ್ಯಾಕ್ ಬೆಂಚರ್ಸ್‌ನಲ್ಲಿ ನಿಜವಾದ ಕ್ಯಾಂಪಸ್ ಅನುಭವವನ್ನು ಸೃಷ್ಟಿಸುವ ತಮ್ಮ ಬದ್ಧತೆ ಕುರಿತು ಹೇಳಿದರು.
ಅದಕ್ಕಾಗಿಯೇ ಅವರು ತಾಜಾ ಮುಖಗಳನ್ನು ತೆರೆಮೇಲೆ ತರಲು ಆದ್ಯತೆ ನೀಡಿದ್ದಾರೆ. 700 ಮಹತ್ವಾಕಾಂಕ್ಷಿ ನಟರೊಂದಿಗೆ ಆಡಿಷನ್ ಮೂಲಕ ನಿರ್ದೇಶಕ ರಾಜಶೇಖರ್ ಅವರು 20 ಭರವಸೆಯ ಪ್ರತಿಭೆಗಳನ್ನು ಆಯ್ಕೆ ಮಾಡಿದ್ದಾರೆ ಮತ್ತು ಶೂಟಿಂಗ್ ಆರಂಭವಾಗುವ ಮುನ್ನ ಒಂದು ವರ್ಷದ ಕಾರ್ಯಾಗಾರದ ಮೂಲಕ ಅವರ ಕೌಶಲ್ಯಗಳನ್ನು ಹೆಚ್ಚಿಸಿದ್ದಾರೆ. ಜೂನ್‌ನಲ್ಲಿ ಚಿತ್ರ ಬಿಡುಗಡೆಗೆ ಚಿತ್ರತಂಡ ಯೋಜನೆ ರೂಪಿಸಿದೆ.
'ಚಿತ್ರವು ಪ್ರತಿಭೆಗಳ ಮಿಶ್ರಣದೊಂದಿಗೆ ಬರುತ್ತದೆ. ಬ್ಯಾಕ್ ಬೆಂಚರ್ಸ್‌ಗಳೊಂದಿಗೆ ನಾನು ಪರಿಚಿತ ಪ್ರಕಾರದ ಬಗ್ಗೆ ಹೊಸ ದೃಷ್ಟಿಕೋನವನ್ನು ನೀಡುವ ಗುರಿಯನ್ನು ಹೊಂದಿದ್ದೇನೆ' ಎಂದು ಅವರು ಹೇಳುತ್ತಾರೆ.
Advertisement