
ಟಾಲಿವುಡ್ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಪ್ರಭಾಸ್ ಮದುವೆ ಬಗ್ಗೆ ಅಭಿಮಾನಿಗಳಲ್ಲಿ ಬಹಳಷ್ಟು ನಿರೀಕ್ಷೆಯಿದೆ. ಈ ಹಿಂದೆ ಹಲವು ಬಾರಿ ಡಾರ್ಲಿಂಗ್ ಮದುವೆ ಬಗ್ಗೆ ಗುಸು ಗುಸು ಕೇಳಿಬಂದಿತ್ತು. ನಟಿ ಅನುಷ್ಕಾ ಶೆಟ್ಟಿ ಜೊತೆ ಮದುವೆ ಆಗುತ್ತಾರೆ ಎಂದು ಹೇಳಲಾಗಿತ್ತು. ಆದರೆ, ನಾವಿಬ್ಬರು ಜಸ್ಟ್ ಫ್ರೆಂಡ್ಸ್ ಎಂದು ಹೇಳುತ್ತಲೇ ಬಂದಿದ್ದರು. ಈ ನಡುವೆ ಪ್ರಭಾಸ್ ಮಾಡಿರುವ ಪೋಸ್ಟ್ ವೊಂದು ಅಭಿಮಾನಿಗಳ ತಲೆಗೆ ಹುಳ ಬಿಟ್ಟಂತಾಗಿದೆ.
ಇನ್‌ಸ್ಟಾ ಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ಪ್ರಭಾಸ್ ಅವರು, ಡಾರ್ಲಿಂಗ್ಸ್, ಕೊನೆಗೂ ಯಾರೋ ತುಂಬಾ ವಿಶೇಷವಾದವರು ನಮ್ಮ ಜೀವನಕ್ಕೆ ಬರಲಿದ್ದಾರೆ. ವೇಟ್ ಮಾಡಿ ಎಂದು ಬರೆದಿದ್ದಾರೆ.
ಇಲ್ಲಿ ಯಾರೋ ಒಬ್ಬರು ಎಂದು ನಟ ಬರೆದಿರುವ ಕಾರಣ ಇದು ಒಬ್ಬ ವ್ಯಕ್ತಿಯ ಕುರಿತು ಇರಬಹುದು ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ.
ಇನ್ನೂ ಕೆಲವರು ಇದು ವ್ಯಕ್ತಿ ಆಗಿರಲ್ಲ. ಬದಲಾಗಿ ಕಲ್ಕಿ ಸಿನಿಮಾದ ಯಾವುದಾದರೂ ವಿಶೇಷ ಪಾತ್ರದ ಪರಿಚಯ ಆಗಿರಬಹುದು ಎಂದಿದ್ದಾರೆ. ಆದರೆ, ಈ ಬಗ್ಗೆ ಯಾವುದೇ ಹೆಚ್ಚಿನ ಸ್ಪಷ್ಟನೆ ಇಲ್ಲ. ಪ್ರಭಾಸ್ ಸ್ಟೋರಿ ನೋಡಿದ ಜನರು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ.
ಪ್ರಭಾಸ್ ಅವರಿಗೆ ಈಗ 44 ವರ್ಷ ವಯಸ್ಸಾಗಿದ್ದು, ಅವರು ಸಿನಿಮಾಗಳನ್ನು ಮಾಡುವುದರಲ್ಲಿಯೇ ಬ್ಯುಸಿಯಾಗಿದ್ದಾರೆ. ಆದರೆ, ಯಾವುದೇ ಮದುವೆ ಕುರಿತಾದ ಸುದ್ದಿಯನ್ನು ಕೊಡುತ್ತಿಲ್ಲ. ಈ ನಡುವೆ ಪ್ರಭಾಸ್ ಮಾಡಿರುವ ಪೋಸ್ಟ್ ವೊಂದು ಚರ್ಚೆಗೆ ಕಾರಣವಾಗಿದೆ.
Advertisement