ಐತಿಹಾಸಿಕ ಹಲಗಲಿ ಚಿತ್ರದಿಂದ ಡಾರ್ಲಿಂಗ್ ಕೃಷ್ಣ ಔಟ್; ಡಾಲಿ ಧನಂಜಯ್ ಎಂಟ್ರಿ?

ಹಲಗಲಿ ಚಿತ್ರದ ಐತಿಹಾಸಿಕ ಪಾತ್ರದಲ್ಲಿ ನಟಿಸಲು ಚಿತ್ರತಂಡ ನಟ ಡಾಲಿ ಧನಂಜಯ್ ಅವರೊಂದಿಗೆ ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ.
ಸುಕೇಶ್ ನಾಯಕ್ - ಡಾಲಿ ಧನಂಜಯ್
ಸುಕೇಶ್ ನಾಯಕ್ - ಡಾಲಿ ಧನಂಜಯ್
Updated on

1857ರ ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಕಥೆಯನ್ನು ಆಧರಿಸಿದ 'ಹಲಗಲಿ' ಎಂಬ ಐತಿಹಾಸಿಕ ಸಿನಿಮಾದಿಂದ ಲವ್ ಮಾಕ್‌ಟೇಲ್ ಖ್ಯಾತಿಯ ನಟ ಡಾರ್ಲಿಂಗ್ ಕೃಷ್ಣ ಹೊರನಡೆದಿದ್ದ ಬಗ್ಗೆ ಈ ಹಿಂದೆ ನಾವು ವರದಿ ಮಾಡಿದ್ದೆವು. ಫೆಬ್ರುವರಿಯಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿತ್ತು. ಮಾರ್ಚ್‌ನಲ್ಲಿ ಕೃಷ್ಣ ಒಂದು ದಿನದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಆದರೆ, ಈ ಚಿತ್ರಕ್ಕಾಗಿ ಕೃಷ್ಣ ಅವರು ಎರಡು ವರ್ಷ ತಮ್ಮ ಸಮಯ ಮೀಸಲಿಡುವಂತೆ ಕೇಳಲಾಗಿತ್ತು. ಆದರೆ, ನಟ ಹಾಗೂ ಚಿತ್ರತಂಡದ ನಡುವಿನ ಭಿನ್ನಾಭಿಪ್ರಾಯಗಳಿಂದಾಗಿ ಕೃಷ್ಣ ಅವರು ಚಿತ್ರದಿಂದ ಹೊರನಡೆದಿದ್ದಾರೆ.

ಹಲಗಲಿ ಚಿತ್ರದ ನಿರ್ದೇಶಕ ಸುಕೇಶ್ ನಾಯಕ್, ಕೃಷ್ಣ ಅವರು ಚಿತ್ರದಿಂದ ನಿರ್ಗಮಿಸಿರುವುದರಿಂದ ಚಿತ್ರದಲ್ಲಿನ ಮುಖ್ಯ ಪಾತ್ರದಲ್ಲಿ ನಟಿಸಲು ಇನ್ನೊಬ್ಬ ನಟನ ಹುಡುಕಾಟ ನಡೆಸಿದ್ದೇವೆ ಎಂದು ಖಚಿತಪಡಿಸಿದ್ದಾರೆ.

ಹಲಗಲಿ ಚಿತ್ರದ ಐತಿಹಾಸಿಕ ಪಾತ್ರದಲ್ಲಿ ನಟಿಸಲು ಚಿತ್ರತಂಡ ನಟ ಡಾಲಿ ಧನಂಜಯ್ ಅವರೊಂದಿಗೆ ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ. ಈ ಬೆಳವಣಿಗೆಯನ್ನು ದೃಢಪಡಿಸಿದ ನಿರ್ದೇಶಕರು, 'ನಾವು ಧನಂಜಯ್ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಮತ್ತು ಅವರು ಈ ಪಾತ್ರಕ್ಕೆ ಸೂಕ್ತವೆಂದು ನಾನು ಭಾವಿಸಿದೆವು. ವಾಸ್ತವವಾಗಿ, ಧನಂಜಯ್ ಕೂಡ ಹಲಗಲಿ ಕಥೆಯನ್ನು ಇಷ್ಟಪಟ್ಟಿದ್ದಾರೆ ಮತ್ತು ಪಾತ್ರ ವಿನ್ಯಾಸವನ್ನು ಇಷ್ಟಪಟ್ಟಿದ್ದಾರೆ. ಚರ್ಚೆಗಳು ನಡೆಯುತ್ತಿವೆ. ಧನಂಜಯ್ ಅವರ ಡೇಟ್ ಲಭ್ಯತೆಯ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಇದು ಇತ್ಯರ್ಥವಾದ ನಂತರ, ಪ್ರೊಡಕ್ಷನ್ ಹೌಸ್ ನಿರ್ಧಾರವನ್ನು ಅಂತಿಮಗೊಳಿಸುತ್ತದೆ' ಎಂದಿದ್ದಾರೆ.

ಸುಕೇಶ್ ನಾಯಕ್ - ಡಾಲಿ ಧನಂಜಯ್
ಐತಿಹಾಸಿಕ 'ಹಲಗಲಿ' ಸಿನಿಮಾದಿಂದ ಡಾರ್ಲಿಂಗ್ ಕೃಷ್ಣ ಔಟ್!

ದುಹಾರಾ ಮೂವೀಸ್ ಬ್ಯಾನರ್ ಅಡಿಯಲ್ಲಿ ಕಲ್ಯಾಣ್ ಚಕ್ರವರ್ತಿ ನಿರ್ಮಿಸಲಿರುವ ಹಲಗಲಿ ಚಿತ್ರವನ್ನು ಆರಂಭದಲ್ಲಿ ಕನ್ನಡ ಮತ್ತು ತೆಲುಗಿನಲ್ಲಿ ತಯಾರಿಸಲು ಮತ್ತು ನಂತರ ವಿವಿಧ ಭಾಷೆಗಳಲ್ಲಿ ಡಬ್ಬಿಂಗ್ ಆವೃತ್ತಿಗಳನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ. ಚಿತ್ರಕ್ಕೆ ವಾಸುಕಿ ವೈಭವ್ ಅವರ ಸಂಗೀತ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ವಿಕ್ರಮ್ ಮೋರೆ ಅವರ ಸಾಹಸ ನಿರ್ದೇಶನವಿದೆ.

ಸದ್ಯ ಧನಂಜಯ್ ಜೂನ್ 14 ರಂದು ಪರಮ್ ನಿರ್ದೇಶನದ ಕೋಟಿ ಬಿಡುಗಡೆಗಾಗಿ ಎದುರುನೋಡುತ್ತಿದ್ದಾರೆ. ಉತ್ತರಕಾಂಡ ಮತ್ತು ಅಣ್ಣ ಫ್ರಂ ಮೆಕ್ಸಿಕೋ ಚಿತ್ರದಲ್ಲಿಯೂ ಬ್ಯುಸಿಯಾಗಿದ್ದಾರೆ. ಇದರೊಂದಿಗೆ ಪುಷ್ಪ 2 ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಪುಷ್ಪ ಸಿನಿಮಾ ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com