ಕೆಂಪೇಗೌಡರ ಪಾತ್ರಕ್ಕೆ ಉಪೇಂದ್ರ?: ಧರ್ಮಭೀರು ನಾಡಪ್ರಭು ಕೆಂಪೇಗೌಡ ಚಿತ್ರತಂಡ ಚಿಂತನೆ

ಮುಂಬರುವ ಚಿತ್ರ ಧರ್ಮಭೀರು ನಾಡಪ್ರಭು ಕೆಂಪೇಗೌಡ ಶೀರ್ಷಿಕೆ ಹಕ್ಕುಗಳ ಕುರಿತು ನಿರ್ದೇಶಕ ಟಿಎಸ್ ನಾಗಾಭರಣ ಜೊತೆ ಕಾನೂನು ವಿವಾದದ ನಡುವೆ ನಿರ್ಮಾಪಕ ಕಿರಣ್ ತೋಟಂಬೈಲೆ ಚಿತ್ರಕ್ಕೆ ತಾರಾಗಣವನ್ನು ಅಂತಿಮಗೊಳಿಸುವ ಪ್ರಕ್ರಿಯೆ ನಡೆಸಿದ್ದಾರೆ.
ಉಪೇಂದ್ರ-ಆಶಿಕಾ ರಂಗನಾಥ್
ಉಪೇಂದ್ರ-ಆಶಿಕಾ ರಂಗನಾಥ್Cinema Express
Updated on

ಮುಂಬರುವ ಚಿತ್ರ ಧರ್ಮಭೀರು ನಾಡಪ್ರಭು ಕೆಂಪೇಗೌಡ ಶೀರ್ಷಿಕೆ ಹಕ್ಕುಗಳ ಕುರಿತು ನಿರ್ದೇಶಕ ಟಿಎಸ್ ನಾಗಾಭರಣ ಜೊತೆ ಕಾನೂನು ವಿವಾದದ ನಡುವೆ ನಿರ್ಮಾಪಕ ಕಿರಣ್ ತೋಟಂಬೈಲೆ ಚಿತ್ರಕ್ಕೆ ತಾರಾಗಣವನ್ನು ಅಂತಿಮಗೊಳಿಸುವ ಪ್ರಕ್ರಿಯೆ ನಡೆಸಿದ್ದಾರೆ.

ಧರ್ಮಭೀರು ನಾಡಪ್ರಭು ಕೆಂಪೇಗೌಡ ಚಿತ್ರವನ್ನು ಅಮೃತವರ್ಷಿಣಿ ನಿರ್ದೇಶಕ ದಿನೇಶ್ ಬಾಬೂ ನಿರ್ದೇಶಿಸಲಿದ್ದು ಕಿರಣ್ ತೋಟಂಬೈಲೆ ನಿರ್ಮಿಸಲಿದ್ದಾರೆ. ಕೆಂಪೇಗೌಡರ ಪಾತ್ರಕ್ಕೆ ದೊಡ್ಡ ಸ್ಟಾರ್ ನಟನನ್ನು ತರಲು ಚಿತ್ರತಂಡ ಉತ್ಸುಕವಾಗಿದೆ. ಅದಕ್ಕಾಗಿಯೇ ರಿಯಲ್ ಸ್ಟಾರ್ ಉಪೇಂದ್ರ ಅವರನ್ನು ಸಂಪರ್ಕಿಸಿದೆ. ಆರಂಭಿಕ ಚರ್ಚೆಗಳು ಪ್ರಾರಂಭವಾಗಿವೆ ಎಂದು ಮೂಲಗಳು ಬಹಿರಂಗಪಡಿಸಿವೆ.

ಇನ್ನೂ ಉಪೇಂದ್ರ ಅವರು ಬಹುನಿರೀಕ್ಷಿತ UI ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ, ನಿರ್ಮಾಪಕರು ಆಶಿಕಾ ರಂಗನಾಥ್ ಅವರನ್ನು ಚಿತ್ರದ ನಾಯಕಿಯಾಗಿ ನಟಿಸಲು ಸಂಪರ್ಕಿಸಿದ್ದಾರೆ. ಇದು ಕನ್ನಡ-ಇಂಗ್ಲಿಷ್ ದ್ವಿಭಾಷೆಯಲ್ಲಿ ಮತ್ತು ದಿ ಪಯೋನಿಯರ್ ಆಫ್ ಬೆಂಗಳೂರು ಎಂಬ ಶೀರ್ಷಿಕೆಯನ್ನು ಇಂಗ್ಲಿಷ್ ಆವೃತ್ತಿಯಲ್ಲಿ ಹೊಂದಿದೆ.

ಉಪೇಂದ್ರ-ಆಶಿಕಾ ರಂಗನಾಥ್
'ಮಾರಿಗೆ ದಾರಿ' ಚಿತ್ರದ ಟೀಸರ್ ಬಿಡುಗಡೆ: ನಿರ್ದೇಶನದ ಜೊತೆಗೆ ಹಲವು ಜವಾಬ್ದಾರಿ ಹೊತ್ತ ನಾಯಕ ಅಗಸ್ತ್ಯ!

ಕೆಂಪೇಗೌಡರ ಜನ್ಮದಿನವಾದ ಜೂನ್ 27ರಂದು ಧರ್ಮಭೀರು ನಾಡಪ್ರಭು ಕೆಂಪೇಗೌಡ ಚಿತ್ರಕ್ಕೆ ಚಾಲನೆ ಸಿಗಲಿದೆ. ದೊಡ್ಡ ಬಜೆಟ್‌ನ ಚಿತ್ರ ಅದ್ಧೂರಿಯಾಗಿ ಮೂಡಿಬರಲಿರುವ ಈ ಚಿತ್ರದಲ್ಲಿ ಹಿರಿಯ ನಟ ಭಾರತಿ ವಿಷ್ಣುವರ್ಧನ್, ವಸಿಷ್ಠ ಸಿಂಹ ಮತ್ತು ಶ್ರೀನಗರ ಕಿಟ್ಟಿ ಆಯ್ಕೆ ಅಂತಿಮವಾಗಿದೆ.

ಚೇತನ್ ರಾಜ್ ನಿರ್ಮಾಣ ಜವಾಬ್ದಾರಿಯನ್ನು ನೋಡಿಕೊಳ್ಳಲಿದ್ದು, ಡಿಒಪಿ ಸಂತೆ ಮೈಸ್ ಛಾಯಾಗ್ರಾಹಕರಾಗಿ ಮತ್ತು ಉಜ್ವಲ್ ಕುಲಕರ್ಣಿ ಸಂಕಲನ ಮಾಡಲಿದ್ದಾರೆ. ನಿರ್ಮಾಪಕ ಕಿರಣ್ ತೋಟಂಬೈಲೆ ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com