ಬೆಂಗಳೂರು: ಚಿತ್ರ ಪ್ರಚಾರದಲ್ಲಿ ನಟ ಶಿವರಾಜ್ ಕುಮಾರ್ ಅಭಿನಯದ ಭೈರತಿ ರಣಗಲ್ ಚಿತ್ರತಂಡ ಒಂದು ಹೆಜ್ಜೆ ಮುಂದೆ ಹೋಗಿದ್ದು, ಬಿಸ್ಲೇರಿ ನೀರಿನ ಬಾಟಲ್ ಮೇಲೆ Bhairathi Ranagal ಚಿತ್ರದ ಪೋಸ್ಟರ್ ಪ್ರಿಂಟ್ ಮಾಡಿಸುವ ಮೂಲಕ ಭರ್ಜರಿ ಪ್ರಚಾರ ನಡೆಸಿದೆ.
ಮೂಲಗಳ ಪ್ರಕಾರ ಕರ್ನಾಟಕದಾದ್ಯಂತ ಸುಮಾರು 1 ಕೋಟಿ ಬಿಸ್ಲೆರಿ ನೀರಿನ ಬಾಟಲ್ ಗಳ ಮೇಲೆ ಭೈರತಿ ರಣಗಲ್ ಪೋಸ್ಟರ್ ರಾರಾಜಿಸುತ್ತಿದ್ದು, ನೀರಿನ ಬಾಟಲಿ ಮೇಲೆ ಹಾಕುವ ಸ್ಟಿಕರ್ ಮೇಲೆ ಭೈರತಿ ರಣಗಲ್ ಚಿತ್ರದ ಪುಟ್ಟ ಪೋಸ್ಟರ್ ಮುದ್ರಣವಾಗುತ್ತಿದೆ.
ನೀರಿನ ಬಾಟಲಿ ಮೇಲೆ ಪೋಸ್ಟರ್ ಸಹಿತ ಸ್ಟಿಕ್ಕರ್ ಇರುವ ನೀರಿನ ಬಾಟಲಿಗಳು ಹೊರಬರುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಶಿವರಾಜ್ ಕುಮಾರ್ ಅಭಿಮಾನಿಗಳು ಮತ್ತು ಕನ್ನಡ ಸಿನಿ ಅಭಿಮಾನಿಗಳು ಈ ವಿಡಿಯೋವನ್ನು ವ್ಯಾಪಕ ಶೇರ್ ಮಾಡುತ್ತಿದ್ದಾರೆ.
ಅಂದಹಾಗೆ ನಟ ಶಿವರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಭೈರತಿ ರಣಗಲ್’ ಚಿತ್ರ ನವೆಂಬರ್ 15ರಂದು ತೆರೆಗೆ ಬರಲಿದೆ. ಚಿತ್ರವನ್ನು ಮಫ್ತಿ ಖ್ಯಾತಿಯ ನರ್ತನ್ ನಿರ್ದೇಶಿಸಿದ್ದು, ಮಫ್ತಿ ಚಿತ್ರದಲ್ಲಿ ಶಿವಣ್ಣ ಭೈರತಿ ರಣಗಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಭೈರತಿ ರಣಗಲ್ ಯಾರು? ಹೇಗೆ ಭೈರತಿ ರಣಗಲ್ ಆದ್ರು ಅನ್ನೋ ವಿಚಾರ ಕೂಡ ರಿವೀಲ್ ಆಗುತ್ತಿದೆ.
ಕನ್ನಡದ ಮೊದಲ ಪ್ರೀಕ್ವೆಲ್ ಸಿನಿಮಾ ಭೈರತಿ ರಣಗಲ್ ಚಿತ್ರ ಕನ್ನಡದ ಮೊದಲ ಪ್ರೀಕ್ವೆಲ್ ಚಿತ್ರವಾಗಿದ್ದು, ಈ ಮೂಲಕ ಭೈರತಿ ರಣಗಲ್ ಈ ವಿಚಾರದಲ್ಲೂ ವಿಶೇಷವಾಗಿದೆ. ಭೈರತಿ ರಣಗಲ್ ಚಿತ್ರದಲ್ಲಿ ರುಕ್ಮಿಣಿ ವಸಂತ್ ಮತ್ತು ಛಾಯಾ ಸಿಂಗ್ ನಟಿಸಿದ್ದಾರೆ. ಸಿಂಗ ಪಾತ್ರದಲ್ಲಿ ಮಧು ಗುರುಸ್ವಾಮಿ ಇದ್ದಾರೆ.
Advertisement