ಪುತ್ತೂರು: ಖ್ಯಾತ ತೆಲುಗು ನಟ ರಾಣಾ ದಗ್ಗುಬಾಟಿ ಕರ್ನಾಟಕಕ್ಕೆ ಆಗಮಿಸಿ ಕನ್ನಡ ಖ್ಯಾತ ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರನ್ನು ಭೇಟಿ ಮಾಡಿದ್ದಾರೆ.
ಕೆಲ ತಿಂಗಳ ಹಿಂದಷ್ಟೆ ತೆಲುಗಿನ ಸ್ಟಾರ್ ನಟ ಜೂ ಎನ್ಟಿಆರ್, ರಿಷಬ್ ಶೆಟ್ಟಿ ಅವರನ್ನು ಹುಡುಕಿಕೊಂಡು ಕರ್ನಾಟಕಕ್ಕೆ ಬಂದಿದ್ದರು. ಎನ್ಟಿಆರ್ ಅವರನ್ನು ರಿಷಬ್ ಶೆಟ್ಟಿ ಕುಂದಾಪುರ ಇನ್ನಿತರೆ ಕಡೆಗಳಿಗೆ ಕರೆದುಕೊಂಡು ಹೋಗಿದ್ದರು.
ಕೆಲವು ದೇವಾಲಯಗಳ ಭೇಟಿ ಮಾಡಿಸಿದ್ದರು. ಈಗ ತೆಲುಗಿನ ಮತ್ತೊಬ್ಬ ಸ್ಟಾರ್ ನಟ ರಿಷಬ್ ಶೆಟ್ಟಿಗಾಗಿ ಕರ್ನಾಟಕಕ್ಕೆ ಬಂದಿದ್ದಾರೆ.
ತೆಲುಗು ಮಾತ್ರವೇ ಅಲ್ಲದೆ ಬಾಲಿವುಡ್ನಲ್ಲಿಯೂ ಹೆಸರು ಮಾಡಿರುವ ನಟ, ನಿರ್ಮಾಪಕ, ವಿತರಕ ರಾಣಾ ದಗ್ಗುಬಾಟಿ ಕೆಲ ದಿನಗಳ ಹಿಂದೆ, ರಿಷಬ್ ಶೆಟ್ಟಿ ಅವರನ್ನು ಹುಡುಕಿಕೊಂಡು ಕರ್ನಾಟಕಕ್ಕೆ ಬಂದಿದ್ದರು. ಮೂಲಗಳ ಪ್ರಕಾರ ರಾಣಾ ದಗ್ಗುಬಾಟಿ, ಒಟಿಟಿ ಶೋ ಕಾರಣಕ್ಕೆ ರಿಷಬ್ ಶೆಟ್ಟಿಯನ್ನು ಭೇಟಿ ಆಗಿದ್ದಾರೆ ಎನ್ನಲಾಗಿದೆ.
ರಾಣಾ ದಗ್ಗುಬಾಟಿ ಹೊಸದೊಂದು ಒಟಿಟಿ ಶೋ ನಿರೂಪಣೆ ಮಾಡುತ್ತಿದ್ದು, ಶೋನ ಹೋಸ್ಟ್ ಅವರೇ ಆಗಿದ್ದಾರೆ. ಈ ಶೋನಲ್ಲಿ ವಿವಿಧ ಚಿತ್ರರಂಗದ ಸ್ಟಾರ್ ನಟ, ನಟಿಯರೊಟ್ಟಿಗೆ ಆಪ್ತವಾಗಿ ಚರ್ಚೆ ಮಾಡುತ್ತಾರೆ.
ಬಹುತೇಕ ಶೋಗಳ ರೀತಿ ಸೆಟ್ನಲ್ಲಿ ಕೂತು ಸಂದರ್ಶನಗಳನ್ನು ಮಾಡುವುದಿಲ್ಲ ರಾಣಾ ದಗ್ಗುಬಾಟಿ ಬದಲಿಗೆ ಔಟ್ಡೋರ್ಗೆ ಹೋಗಿ ಅಲ್ಲಿಯೇ ನಟ-ನಟಿಯರ ಸಂದರ್ಶನ ಮಾಡುತ್ತಾರೆ. ಇದೇ ಕಾರಣಕ್ಕೆ ಅವರು ರಿಷಬ್ ಶೆಟ್ಟಿಯ ಸಂದರ್ಶನ ಮಾಡಲು ಕರ್ನಾಟಕಕ್ಕೆ ಆಗಮಿಸಿದ್ದರು ಎನ್ನಲಾಗಿದೆ.
ರಿಷಬ್ ಶೆಟ್ಟಿ ಇದೀಗ ಕುಂದಾಪುರದ ಬಳಿ ‘ಕಾಂತಾರ’ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದು, ಅಲ್ಲಿಗೆ ಆಗಮಿಸಿರುವ ರಾಣಾ ದಗ್ಗುಬಾಟಿ ಕುಂದಾಪುರ ಮತ್ತಿತರೆ ಸುಂದರ ಸ್ಥಳಗಳಲ್ಲಿ ರಿಷಬ್ ಶೆಟ್ಟಿಯ ಸಂದರ್ಶನ ಮಾಡಿದ್ದಾರೆ.
ಅಂದಹಾಗೆ ರಾಣಾ ದಗ್ಗುಬಾಟಿ ಅವರ ಈ ಟಾಕ್ ಶೋ ಅಮೆಜಾನ್ ಪ್ರೈಂನಲ್ಲಿ ಪ್ರಸಾರ ಆಗಲಿದೆ.
Advertisement