Kiccha Sudeep ಅಭಿಮಾನಿಗಳಿಗೆ ಸಿಹಿಸುದ್ದಿ; Max Movie ಬಿಡುಗಡೆ ದಿನಾಂಕ ಕೊನೆಗೂ ಔಟ್!

ಕಿಚ್ಚ ಸುದೀಪ್​ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಮ್ಯಾಕ್ಸ್’ ಸಿನಿಮಾ ಬಗ್ಗೆ ನಿರ್ಮಾಪಕರು ಗುಡ್​ ನ್ಯೂಸ್​ ನೀಡಿದ್ದು, ‘ಸರೆಗಮ ಕನ್ನಡ’ ಯೂಟ್ಯೂಬ್​​ನಲ್ಲಿ ಟೀಸರ್​ ಬಿಡುಗಡೆ ಮಾಡುವ ಮೂಲಕ ರಿಲೀಸ್​ ಡೇಟ್​ ಬಗ್ಗೆ ಅಪ್​ಡೇಟ್​ ನೀಡಲಾಗಿದೆ.
Kiccha Sudeep Max Movie
ಮ್ಯಾಕ್ಸ್ ಚಿತ್ರದ ಪೋಸ್ಟರ್
Updated on

ಬೆಂಗಳೂರು: ನಟ ಕಿಚ್ಚಾ ಸುದೀಪ್ ಅಭಿಮಾನಿಗಳಿಗೆ ಇಲ್ಲೊಂದು ಸಿಹಿ ಸುದ್ದಿ ಇದ್ದು, ಬಹು ನಿರೀಕ್ಷಿತ ಮ್ಯಾಕ್ಸ್ ಚಿತ್ರದ ಬಿಡುಗಡೆ ದಿನಾಂಕ ಕೊನೆಗೂ ಘೋಷಣೆಯಾಗಿದೆ.

ಹೌದು.. ಕಿಚ್ಚ ಸುದೀಪ್​ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಮ್ಯಾಕ್ಸ್’ ಸಿನಿಮಾ ಬಗ್ಗೆ ನಿರ್ಮಾಪಕರು ಗುಡ್​ ನ್ಯೂಸ್​ ನೀಡಿದ್ದು, ‘ಸರೆಗಮ ಕನ್ನಡ’ ಯೂಟ್ಯೂಬ್​​ನಲ್ಲಿ ಟೀಸರ್​ ಬಿಡುಗಡೆ ಮಾಡುವ ಮೂಲಕ ರಿಲೀಸ್​ ಡೇಟ್​ ಬಗ್ಗೆ ಅಪ್​ಡೇಟ್​ ನೀಡಲಾಗಿದೆ.

ಸುದೀಪ್ ಅಭಿನಯದ ಈ ಸಿನಿಮಾಗಾಗಿ ಅಭಿಮಾನಿಗಳು ಹಲವು ತಿಂಗಳಿನಿಂದ ಕಾಯುತ್ತಿದ್ದಾರೆ. ಅದ್ದೂರಿ ಬಜೆಟ್​ನಲ್ಲಿ ಈ ಚಿತ್ರ ನಿರ್ಮಾಣ ಆಗಿದೆ. ಸುದೀಪ್​ ಅವರು ‘ಮ್ಯಾಕ್ಸ್​’ ಸಿನಿಮಾದಲ್ಲಿ ತುಂಬ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ನವೆಂಬರ್​ 27ರಂದು ‘ಮ್ಯಾಕ್ಸ್​’ ಸಿನಿಮಾ ಬಗ್ಗೆ ದೊಡ್ಡ ಅನೌನ್ಸ್​ಮೆಂಟ್​ ಆಗಲಿದೆ ಎಂದು ನಿರ್ಮಾಪಕರು ಇತ್ತೀಚೆಗೆ ತಿಳಿಸಿದ್ದರು. ಅದರಂತೆ, ಇಂದು ಬಿಡುಗಡೆ ದಿನಾಂಕದ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ.

Kiccha Sudeep Max Movie
ಯಾವ ಭಿನ್ನಾಭಿಪ್ರಾಯಗಳೂ ಇಲ್ಲ: 'ಮ್ಯಾಕ್ಸ್' ಬಿಡುಗಡೆ ಬಗ್ಗೆ ಕಿಚ್ಚ ಸುದೀಪ್ ಸ್ಪಷ್ಟನೆ

ಚಿತ್ರತಂಡ ಹೇಳಿಕೊಂಡಿರುವಂತೆ ಡಿಸೆಂಬರ್​ 25ಕ್ಕೆ ಮ್ಯಾಕ್ಸ್ ಸಿನಿಮಾ ಬಿಡುಗಡೆ ಆಗಲಿದೆ. ಚಿತ್ರದಲ್ಲಿ ಸಂಯುಕ್ತಾ ಹೊರನಾಡು, ಪ್ರಮೋದ್​ ಶೆಟ್ಟಿ, ವರಲಕ್ಷ್ಮಿ ಶರತ್​ಕುಮಾರ್​, ಸುನಿಲ್ ಮುಂತಾದವರು ಪ್ರಮುಖ ಪಾತ್ರವರ್ಗದಲ್ಲಿ ಇದ್ದಾರೆ. ಸುದೀಪ್​ ಅವರು ಸಿಕ್ಕಾಪಟ್ಟೆ ಮಾಸ್ ಪಾತ್ರವನ್ನು ಈ ಚಿತ್ರದಲ್ಲಿ ಮಾಡಿದ್ದಾರೆ. ಈ ಮೊದಲು ಬಿಡುಗಡೆ ಆಗಿದ್ದ ಟೀಸರ್​ಗಳು ಧೂಳೆಬ್ಬಿಸಿದ್ದವು. ‘ಮ್ಯಾಕ್ಸಿಮಮ್​ ಮಾಸ್​..’ ಹಾಡು ಕೂಡ ಸಖತ್​ ಸದ್ದು ಮಾಡಿದೆ.

ಮಾಸ್​ ಆಗಿ ಮೂಡಿಬಂದಿರುವ ‘ಮ್ಯಾಕ್ಸ್’ ಸಿನಿಮಾದ ಮೇಲೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಅಜನೀಶ್​ ಲೋಕನಾಥ್ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಶೇಖರ್​ ಚಂದ್ರ ಛಾಯಾಗ್ರಹಣ ಮಾಡಿದ್ದಾರೆ.

2022ರ ಜುಲೈನಲ್ಲಿ ‘ವಿಕ್ರಾಂತ್ ರೋಣ’ ಸಿನಿಮಾ ತೆರೆಕಂಡಿತ್ತು. ಆ ಬಳಿಕ ಸುದೀಪ್​ ಅಭಿನಯದ ಯಾವುದೇ ಸಿನಿಮಾ ಬಿಡುಗಡೆ ಆಗಿರಲಿಲ್ಲ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಕಳೆದ ವರ್ಷವೇ ಬಿಡುಗಡೆ ಆಗಬೇಕಿತ್ತು. ಆದರೆ ಒಂದಷ್ಟು ಕಾರಣಗಳಿಂದಾಗಿ ಸಿನಿಮಾದ ಬಿಡುಗಡೆ ತಡವಾಯಿತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com