ನಟ ಡಾ. ಶಿವರಾಜ್ ಕುಮಾರ್ ಅವರ ಭೈರತಿ ರಣಗಲ್ ಸಕ್ಸಸ್ ಸಂಭ್ರಮದಲ್ಲಿ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದಾರೆ. ಇತ್ತೀಚೆಗೆ ಶಿವಣ್ಣ ಹುಬ್ಬಳ್ಳಿಗೆ ಬಂದಿದ್ದರು. ಅಲ್ಲಿ ನಡೆದ ಮಾದಕ ವ್ಯಸನ ಜಾಗೃತಿ ಅಭಿಯಾನದಲ್ಲಿ ಶಿವರಾಜಕುಮಾರ್ ಭಾಗಿಯಾಗಿದ್ದರು.
ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ನಡೆದ ಅಭಿಯಾನಕ್ಕೆ ಬಲೂನ್ ಹಾರಿಸುವ ಮೂಲಕ ಶಿವರಾಜಕುಮಾರ್ ಚಾಲನೆ ನೀಡಿದರು. ಹುಬ್ಬಳ್ಳಿ-ಧಾರವಾಡದಲ್ಲಿ ಕಾಲೇಜು ವಿದ್ಯಾರ್ಥಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಶಿವಣ್ಣ, "ನಿಮ್ಮ ಕನಸುಗಳನ್ನು ಸಾಧಿಸಲು ವ್ಯಸನಿಯಾಗಿರಿ, ಮಾದಕ ವಸ್ತುಗಳಿಗಲ್ಲ" ಎಂದು ಪ್ರಬಲ ಸಂದೇಶವನ್ನು ಹಂಚಿಕೊಂಡರು.
ಯುವ ಮನಸ್ಸುಗಳು ದೊಡ್ಡ ಕನಸುಗಳನ್ನು ಕಾಣಲು ಪ್ರೋತ್ಸಾಹಿಸಿದ ಶಿವರಾಜಕುಮಾರ್ ಅವರು ಜೀವನದ ಅನೇಕ ಅವಕಾಶಗಳನ್ನು ಅಳವಡಿಸಿಕೊಳ್ಳುವ ಮಹತ್ವವನ್ನು ಒತ್ತಿ ಹೇಳಿದರು. ಓದುವುದರಲ್ಲಿ ನಶೆ ಕಂಡುಕೊಳ್ಳಿ. ಮಾದಕ ವಸ್ತುವಿನ ನಶೆ ಬೇಡ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ. ಪ್ರತಿ ಅಭಿಮಾನಿಯನ್ನು ಸ್ನೇಹಿತನನ್ನಾಗಿ ನೋಡುತ್ತೇನೆ. ಅಭಿಮಾನಿ ಅಂತ ನೋಡಿದರೆ ಬೇರೆ ರೀತಿ ನೋಡ್ಬೇಕಾಗುತ್ತೆ. ಡ್ರಗ್ಸ್ ನಿಂದ ನಾವು ದೂರ ಇರಬೇಕು. ಶಬ್ದವೇದಿ ಯಲ್ಲಿ ಅಪ್ಪಾಜಿ ಅದ್ಬುತವಾಗಿ ಹೇಳಿದ್ದಾರೆ. ಹುಟ್ಟು ಅನ್ನೋದು ಒಂದು ಗಿಫ್ಟ್. ಅದನ್ನ ಕಾಪಾಡಿಕೊಳ್ಳಬೇಕು ಎಂದಿದ್ದಾರೆ. ನಶೆಯನ್ನು ಓದುವುದರಲ್ಲಿ ಹುಡುಕಿ, ಗೆಳೆತನದಲ್ಲಿ ಹುಡುಕಿ, ಬೇರೆ ಎಲ್ಲದರಲ್ಲೂ ನಶೆ ಇದೆ. ಮಾದಕ ವಸ್ತುವಿಗೆ ನಾವು ಯಾವಾಗ ದಾಸರಾಗ್ತೇವೋ ಲೈಫ್ ಹಾಳಾಗುತ್ತೆ. ಯಾರು ಮಾಡ್ತಾರೆ, ಅವರನ್ನ ಪೊಲೀಸರಿಗೆ ಹಿಡಿದುಕೊಡಿ ಎಂದರು.
ಆರೋಗ್ಯವಂತ ಸಮಾಜವನ್ನು ರಚಿಸುವಲ್ಲಿ ಯುವಕರ ಜವಾಬ್ದಾರಿಯ ಮಹತ್ವದ ಬಗ್ಗೆ ತಿಳಿಸಿದ ಶಿವಣ್ಣ ಪೋಷಕರು ತಮ್ಮ ಮಕ್ಕಳಿಗಾಗಿ ಕಾಣುವ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಪರಿಗಣಿಸುವಂತೆ ಒತ್ತಾಯಿಸಿದರು. "ಡ್ರಗ್ಸ್ ಬೇಡ ಎಂದು ಹೇಳಿ, ನಿಮ್ಮ ಕುಟುಂಬ ಮತ್ತು ಸಮಾಜದ ಕಡೆಗೆ ಗಮನ ಹರಿಸಿರಿ ಎಂದರು. ತಮ್ಮ ಕಾಲೇಜು ದಿನಗಳ ಬಗ್ಗೆ ಸ್ಮರಿಸಿದ ಶಿವಣ್ಣ ತಮ್ಮ ಚೊಚ್ಚಲ ಆನಂದ್ ಸಿನಿಮಾದ 25 ನೇ ದಿನದ ಸಂಭ್ರಮಾಚರಣೆಯಲ್ಲಿ ಇಲ್ಲಿಗೆ ಭೇಟಿ ನೀಡಿದ ಬಗ್ಗೆ ನೆನಪಿಸಿಕೊಂಡರು. ಇಲ್ಲಿಗೆ ಬರುವುದು ಯಾವಾಗಲೂ ನನ್ನ ವಿದ್ಯಾರ್ಥಿ ಜೀವನವನ್ನು ನೆನಪಿಸುತ್ತದೆ, ಎಂದು ಅವರು ಉತ್ಸಾಹದಿಂದ ಹೇಳಿದರು. ಡ್ರಗ್ಸ್ ಮಾರುವ ಕಿಡಿಗೇಡಿಗಳ ಬಗ್ಗೆ ಅಧಿಕಾರಿಗಳಿಗೆ ವರದಿ ಮಾಡುವ ಮೂಲಕ ಮಾದಕ ದ್ರವ್ಯಗಳ ಹಾವಳಿಯನ್ನು ಸಕ್ರಿಯವಾಗಿ ಎದುರಿಸಲು ಶಿವಣ್ಣ ವಿದ್ಯಾರ್ಥಿಗಳಿಗೆ ಕರೆ ನೀಡಿದರು. “ನಮಗಿಂತ ಹೆಚ್ಚಾಗಿ, ನೀವು ಈ ಬೆದರಿಕೆಯನ್ನು ಎದುರಿಸಬಹುದು. ಹಾನಿಕಾರಕ ವಸ್ತುಗಳನ್ನು ಮಾರಾಟ ಮಾಡಲು ಪ್ರಯತ್ನಿಸುವ ಯಾರೇ ಆದರೂ ಚಿಂತೆಯಿಲ್ಲ, ಅವರ ವಿರುದ್ಧ ನಿಲ್ಲಿರಿ ಎಂದರು. ಆರೋಗ್ಯವಂತ ಸಮಾಜವನ್ನು ರಚಿಸುವಲ್ಲಿ ಯುವಕರ ಜವಾಬ್ದಾರಿಯನ್ನು ನಟ ಒತ್ತಿ ಹೇಳಿದರು. ಯಾರಾದರೂ ಡ್ರಗ್ಸ್‌ಗೆ ಬಲಿಯಾದರೆ, ಜೀವನದ ಸೌಂದರ್ಯವು ಮಸುಕಾಗಲು ಪ್ರಾರಂಭಿಸುತ್ತದೆ ಎಂದು ಅವರು ಹೇಳಿದರು.
Advertisement