
ಬೆಂಗಳೂರು: ಬಿಗ್ ಬಾಸ್ ಕನ್ನಡ ಕಾರ್ಯಕ್ರಮದಲ್ಲಿ ಜಗದೀಶ್ ಮೇಲೆ ಹಲ್ಲೆ ಮಾಡಿದ ಆರೋಪದ ಮೇರೆಗೆ ಹೊರಬಂದಿದ್ದ ಸ್ಪರ್ಧಿ ರಂಜಿತ್, ಮಾಧ್ಯಮಗಳಿಗೆ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ರಂಜಿತ್, 'ಜಗದೀಶ್ ಮೇಲೆ ನಾನು ಹಲ್ಲೆ ಮಾಡಿಲ್ಲ. ಹೆಣ್ಣುಮಕ್ಕಳ ಗೌರವಕ್ಕೆ ಧಕ್ಕೆಯಾದಾಗ ರಕ್ಷಣೆಗೆ ನಿಂತೆ ಅಷ್ಟೇ ಎಂದು ತಮ್ಮ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಅಂತೆಯೇ ತಮ್ಮನ್ನು ಬಿಗ್ ಬಾಸ್ ಮನೆಯಿಂದ ಹೊರಹಾಕುವ ನಿರ್ಧಾರದಿಂದ ನಾನು ಆಘಾತಕ್ಕೊಳಗಾಗಿದ್ದೇನೆ. ಆದರೆ ಅಲ್ಲಿ ನಾನು ಯಾರ ಮೇಲೂ ಹಲ್ಲೆ ಮಾಡಿಲ್ಲ. ಆದರೆ ಹೆಣ್ಣುಮಕ್ಕಳ ಗೌರವಕ್ಕೆ ಧಕ್ಕೆಯಾದಾಗ ರಕ್ಷಣೆಗೆ ನಿಂತಿದ್ದೆ. ಹಾಗೆ ನೋಡಿದರೆ ಜಗದೀಶ್ ಅವರೇ ಮನೆಯೊಳಗೆ ನಮ್ಮೆಲ್ಲರಿಗೂ ಕಾಟ ನೀಡಿದ್ದಾರೆ.
ನಮ್ಮ ತಾಳ್ಮೆಯನ್ನು ತಮ್ಮ ನಡವಳಿಕೆಯಿಂದ ಕೆಣಕಿದ್ದಾರೆ. ಮಾನಸಿಕವಾಗಿ ಕಿರುಕುಳ ನೀಡಿ ಮಾನಸಿಕ ಹಲ್ಲೆ ನೀಡುತ್ತಿದ್ದಾರೆ. ಆದರೂ ನಾವು ತುಂಬಾ ಕಂಟ್ರೋಲ್ ನಲ್ಲಿದ್ದೆವು ಎಂದು ಹೇಳಿದ್ದಾರೆ.
ಅಂತೆಯೇ ಹೆಣ್ಣುಮಕ್ಕಳ ವಿಚಾರವಾಗಿಯೇ ಮೊದಲು ಜಗಳ ಆರಂಭವಾಗಿದ್ದು.. ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದರು. ಹೆಣ್ಣು ಮಕ್ಕಳ ಅವರ ಗೌರವಕ್ಕೆ ಧಕ್ಕೆಯಾಗುತ್ತಿದೆ ಎಂದಾಗ ಮಾತ್ರ ನಾನು ಮಧ್ಯಪ್ರವೇಶಿಸಿದ್ದೆ. ಆಗ ಎಲ್ಲರೂ ಧನಿಯತ್ತಿದ್ದರು. ಹೆಣ್ಣುಮಕ್ಕಳ ಮೇಲೆ ಹೋದಾಗ ಅವರನ್ನು ನಾನು ತಳ್ಳಿದೆ ಅಷ್ಟೇ.. ಆದರೆ ಹಲ್ಲೆ ಮಾಡಿಲ್ಲ ಎಂದು ರಂಜಿತ್ ಹೇಳಿದ್ದಾರೆ.
Advertisement