ಕನ್ನಡತಿ ಧಾರಾವಾಹಿ ಮೂಲಕ ಇಡೀ ಕರುನಾಡ ಮನೆ ಹಾಗೂ ಮನವನ್ನು ತಲುಪಿದ ಕಿರಣ್ ರಾಜ್ ಕಾರು ಭೀಕರ ಅಪಘಾತಕ್ಕೊಳಗಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ರಾನಿ ಚಿತ್ರದ ನಾಯಕ ಕಿರಣ್ ರಾಜ್ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೆ ಒಳಗಾಗಿದೆ. ಅಪಘಾತದಲ್ಲಿ ಕಾರು ಫುಲ್ ಜಖಂ ಆಗಿದ್ದು, ಘಟನೆಯಲ್ಲಿ ಕಿರಣ್ ರಾಜ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ನಟ ಕಿರಣ್ ರಾಜ್ ಗೆ ಚಿಕಿತ್ಸೆ ಮುಂದುವರೆದಿದ್ದು, ಕಿರಣ್ ಎದೆ ಭಾಗಕ್ಕೆ ಭಾರೀ ಪೆಟ್ಟು ಬಿದ್ದಿದೆ ಎಂದು ಹೇಳಲಾಗುತ್ತಿದೆ. ಕೆಂಗೇರಿ ಹತ್ತಿರದ ಬೆಂಗಳೂರು ಹಾಸ್ಪಿಟಲ್ ನಲ್ಲಿ ನಟನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ನಟನ ಜೊತೆಯಲ್ಲಿದ್ದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಸೀಟ್ ಬೆಲ್ಟ್ ನಿಂದಾಗಿ ಸೇಫ್ ಆಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕಿರುತೆರೆಯಿಂದ ಸ್ಯಾಂಡಲ್ವುಡ್ಗೂ ಎಂಟ್ರಿ ಕೊಟ್ಟಿದ್ದ ನಟ ಕಿರಣ್ ರಾಜ್ ಅವರ ಸಿನಿಮಾ ರಾನಿ ನಾಳೆ ರಿಲೀಸ್ ಆಗಲಿದೆ. ಸಿನಿಮಾದ ಬಗ್ಗೆ ಸಾಕಷ್ಟು ಆಸೆ ಕನಸ್ಸುಗಳನ್ನು ಇಟ್ಟುಕೊಂಡಿದ್ದ ನಟ ಕಿರಣ್ ರಾಜ್ ಆಸ್ಪತ್ರೆಗೆ ದಾಖಲಾಗಿದ್ದು ಅಭಿಮಾನಿಗಳಿಗೆ ನೋವಿನ ಸಂಗತಿಯಾಗಿದೆ.
ಸೆಪ್ಟೆಂಬರ್ 10ರಂದು ಮಧ್ಯಾಹ್ನ ಕಿರಣ್ ರಾಜ್ ಅವರ ‘ರಾನಿ’ ಸಿನಿಮಾದ ಪ್ರದರ್ಶನ ಇತ್ತು. ಅದರಲ್ಲಿ ಭಾಗಿಯಾಗಿದ್ದ ಕಿರಣ್ ರಾಜ್ ಅವರು ರಾತ್ರಿ ವೃದ್ಧಾಶ್ರಮವೊಂದಕ್ಕೆ ಭೇಟಿ ನೀಡಿದ್ದರು. ಸಾಮಾಜಿಕ ಕೆಲಸದಲ್ಲಿಯೂ ಪಾಲ್ಗೊಳ್ಳುವ ಅವರು ವೃದ್ಧಾಶ್ರಮವೊಂದಕ್ಕೆ ಭೇಟಿ ನೀಡಿ, ಅಲ್ಲಿರುವವರ ಆಶೀರ್ವಾದ ಪಡೆದಿದ್ದಾರೆ. ಇದಾದ ನಂತರ ಅವರಿಗೆ ಅಪಘಾತ ಆಗಿದೆ.
Advertisement