'ನಾನು ಸಿಎಂ ಅಲ್ಲ.. ಪಿಎಂ ಅಲ್ಲ.. ಹೋಗಿ ಅಲ್ಲಿ ಪ್ರತಿಭಟನೆ ಮಾಡಿ': Rummy ಕುರಿತ ಪ್ರಶ್ನೆಗೆ ನಟ ಕಿಚ್ಚಾ ಸುದೀಪ್ ಗರಂ!

ಬಿಗ್ ಬಾಸ್ ಸೀಸನ್ 11 ಪ್ಟೆಂಬರ್ 29ರಂದು ಗ್ರ್ಯಾಂಡ್ ಓಪನಿಂಗ್ ನಡೆಯಲಿದ್ದು ಈ ಸಂಬಂಧ ನಡೆದ ಸುದ್ದಿಗೋಷ್ಠಿಯಲ್ಲಿ ರಮ್ಮಿ ಜೊತೆ ಬ್ಯುಸಿಸೆನ್‌ ಪಾರ್ಟನರ್ ಆಗಿರುವುದು ಯಾಕೆ? ಎಂದು ಪ್ರಶ್ನಿಸಿದ ಪತ್ರಕರ್ತನಿಗೆ ನಟ ಕಿಚ್ಚ ಸುದೀಪ್‌ ಅವರು ಖಡಕ್ ಉತ್ತರ ಕೊಟ್ಟಿದ್ದಾರೆ.
Actor Kichcha Sudeep on Rummy game
ನಟ ಕಿಚ್ಚಾ ಸುದೀಪ್
Updated on

ಬೆಂಗಳೂರು: 'ನಾನು ಸಿಎಂ ಅಲ್ಲ.. ಪಿಎಂ ಅಲ್ಲ.. ಹೋಗಿ ಅಲ್ಲಿ ಪ್ರತಿಭಟನೆ ಮಾಡಿ' ಎಂದು ಪತ್ರಕರ್ತರ ಪ್ರಶ್ನೆಗೆ ನಟ ಕಿಚ್ಚಾ ಸುದೀಪ್ ಕಿಡಿಕಾರಿದ್ದಾರೆ.

ಬಿಗ್ ಬಾಸ್ ಸೀಸನ್ 11 ಪ್ಟೆಂಬರ್ 29ರಂದು ಗ್ರ್ಯಾಂಡ್ ಓಪನಿಂಗ್ ನಡೆಯಲಿದ್ದು ಈ ಸಂಬಂಧ ನಡೆದ ಸುದ್ದಿಗೋಷ್ಠಿಯಲ್ಲಿ ರಮ್ಮಿ ಜೊತೆ ಬ್ಯುಸಿಸೆನ್‌ ಪಾರ್ಟನರ್ ಆಗಿರುವುದು ಯಾಕೆ? ಎಂದು ಪ್ರಶ್ನಿಸಿದ ಪತ್ರಕರ್ತನಿಗೆ ನಟ ಕಿಚ್ಚ ಸುದೀಪ್‌ ಅವರು ಖಡಕ್ ಉತ್ತರ ಕೊಟ್ಟಿದ್ದು, ಮೋದಿ ಅವರ ನಿವಾಸಕ್ಕೆ ಹೋಗಿ ಇಲ್ಲ ಸಿದ್ಧರಾಮಯ್ಯ ಅವರ ನಿವಾಸಕ್ಕೆ ಹೋಗಿ ಅಲ್ಲಿ ಸ್ಟ್ರೈಕ್ ಮಾಡಿ ಎಂದು ಸುದೀಪ್ ಗರಂ ಆಗಿ ಉತ್ತರಿಸಿದ್ದಾರೆ.

ಈ ಬಾರಿಯ ಬಿಗ್ ಬಾಸ್ ಸ್ವರ್ಗ ಮತ್ತು ನರಕದ ಕಾನ್ಸೆಪ್ಟ್‌ ಎಂದು ಅನೌನ್ಸ್ ಮಾಡಿದ ದಿನದಿಂದಲೂ ಜನರಲ್ಲಿ ಸಾಕಷ್ಟು ಗೊಂದಲವಿತ್ತು ಅದಕ್ಕೆ ಫುಲ್ ಕ್ಲಾರಿಟಿ ನೀಡಿದ್ದಾರೆ. ಆದರೆ ಜನರಿಗೆ ಬೇಸರ ಆಗಿರುವುದು ಏನೆಂದರೆ ಸುದೀಪ್ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಯಾಕೆ ರಮ್ಮಿ ಕಂಪನಿ ಬ್ಯುಸಿನೆಸ್ ಪಾರ್ಟನರ್ ಆಗಿದೆ. ಈ ನಿಟ್ಟಿನಲ್ಲಿ ವೇದಿಕೆ ಮೇಲಿದ್ದ ಬಿಗ್‌ ಬಾಸ್‌ ತಂಡಕ್ಕೆ ನಟ ಸುದೀಪ್‌ ಗರಂ ಆಗಿ ಉತ್ತರಿಸಿದ್ದಾರೆ.

Actor Kichcha Sudeep on Rummy game
Bigg Boss Kannada Season 11: ಈ ಬಾರಿ ಆರಂಭಕ್ಕೂ ಮೊದಲೇ ಕೆಲ ಸ್ಪರ್ಧಿಗಳ ಹೆಸರು ಘೋಷಣೆ!

ಹೆಚ್ಚು ತಿಳುವಳಿಕೆ ಇರುವಂತ ಸಮಾಜ ನಮದು. ಬುದ್ಧಿವಂತಿಕೆ ಇರುವ ಸಮಾಜ ಇದು. ಇಲ್ಲಿ ಸಿಗರೇಟ್ ಇದೆ. ಕುಡಿತ ಇದೆ ಸಾಕಷ್ಟಿದೆ. ಎಲ್ಲದ್ದಕ್ಕಿಂತ ಹೆಚ್ಚಾಗಿ ಮನೆಯಲ್ಲಿ ತಂದೆ ತಾಯಿ ಇದ್ದಾರೆ. ನಮಗೆ ಏನು ಬೇಕು ನಾವು ಏನು ಆಯ್ಕೆ ಮಾಡಬೇಕು. ಸರ್ಕಾರ ನಮ್ಮಿಂದ ತುಂಬಾ ಟ್ಯಾಕ್ಸ್ ತೆಗೆದುಕೊಳ್ಳುತ್ತಿದ್ದಾರೆ ತುಂಬಾ ದುಡ್ಡು ವಸೂಲಿ ಮಾಡುತ್ತಿದ್ದಾರೆ ಅನಿಸುತ್ತದೆ.

ಆದರೆ ದೇಶ ನಡೆಸುವುದಕ್ಕೆ ಸರ್ಕಾರ ಏನು ಮಾಡಬೇಕು ಅದನ್ನು ಮಾಡಲೇ ಬೇಕು. ಈ ರೀತಿ ದೊಡ್ಡ ಶೋ ನಡೆಸುವುದಕ್ಕೆ ಬಿಗ್ ಬಾಸ್‌ ತಂಡದವರು ಕೂಡ ಅವರ ಕೆಲಸ ಮಾಡಬೇಕು. ಏಕೆಂದರೆ ಒಂದು ದೊಡ್ಡ ಶೋ ಮಾಡಲು ಅಷ್ಟೇ ಖರ್ಚಾಗುತ್ತದೆ ಎಂದು ಹೇಳಿದರು.

ಬಿಗ್ ಬಾಸ್ ಕಾರ್ಯಕ್ರಮದಿಂದ ಎಷ್ಟು ಮನೆಗಳು ಉದ್ದಾರ ಅಯ್ತು.. ಎಷ್ಟು ವ್ಯಕ್ತಿತ್ವಗಳು ಉದ್ದಾರ ಆಯ್ತು.. ಎಷ್ಟು ಜನರಿಗೆ ಕೆಲಸ ಸಿಗ್ತು.. ಇಲ್ಲಿ ಕೆಲಸ ಗಿಟ್ಟಿಸಿಕೊಂಡವರು A23 ರಮ್ಮಿಯನ್ನು ಆಯ್ಕೆ ಮಾಡಿಕೊಂಡ್ರಾ.. ಇಲ್ಲ ಏನು ಕೆಲಸ ಮಾಡಿದ್ದರು ಅದರಿಂದ ಏನು ಕಲಿತರು ಹೀಗೆ ನಾನು ದೊಡ್ಡದಾಗಿ ಯೋಚನೆ ಮಾಡಲು ಇಷ್ಟ ಪಡುತ್ತೀನಿ.

ನನ್ನ ಪ್ರಕಾರ ಸಮಾಜದಲ್ಲಿ ಇರುವ ಪ್ರತಿಯೊಬ್ಬರು ತಿಳುವಳಿಕೆ ಇರುವವರು ಸರಿಯಾಗಿರುವ ಒಳ್ಳೆಯದನ್ನು ಆಯ್ಕೆ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ನಮಗೆ ಒಂದು ಕುಟುಂಬ, ಒಬ್ಬಳೆ ಹೆಂಡತಿ ಮತ್ತು ಒಬ್ಬರೆ ತಂದೆ ತಾಯಿ ಇದ್ದಾರೆ. ನಿಮಗೆ ತಕರಾರು ಇದ್ದರೆ ಮೋದಿ ಅವರ ನಿವಾಸಕ್ಕೆ ಹೋಗಿ ಇಲ್ಲ ಸಿದ್ಧರಾಮಯ್ಯ ಅವರ ನಿವಾಸಕ್ಕೆ ಹೋಗಿ ಅಲ್ಲಿ ಸ್ಟ್ರೈಕ್ ಮಾಡಿ' ಎಂದು ಸುದೀಪ್ ಗರಂ ಆಗಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com