
ರೋಮ್ಯಾನ್ಸ್, ಆಕ್ಷನ್ ಮತ್ತು ಸಾವಯವ ಕೃಷಿ ವಿಷಯಗಳನ್ನು ಹೊಂದಿರುವ ಗೋಪಿಲೋಲ ಚಿತ್ರ ಆಕ್ಟೋಬರ್ 4 ರಂದು ತೆರೆಗೆ ಬರುತ್ತಿದೆ.
ಸುಕೃತಿ ಚಿತ್ರಾಲಯ’ ಸಂಸ್ಥೆಯ ಮೂಲಕ ಎಸ್ಆರ್ ಸನತ್ ಕುಮಾರ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದು, ಮಂಜುನಾಥ್ ಅರಸು ಸಹ-ನಿರ್ಮಾಣ ಮಾಡಿದ್ದಾರೆ. ಆರ್. ರವೀಂದ್ರ ಅವರು ‘ಗೋಪಿಲೋಲ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.
ಬಿಡುಗಡೆ ಸಜ್ಜಾಗಿರುವ ಚಿತ್ರದ ಟ್ರೇಲರ್ ರಿಲೀಸ್ ಈವೆಂಟ್ ಇತ್ತೀಚೆಗಷ್ಟೇ ಅದ್ದೂರಿಯಾಗಿ ನೆರವೇರಿದ್ದು ಎಸ್.ವಿ.ರಾಜೇಂದ್ರಸಿಂಗ್ ಬಾಬು, ಜೋಸೈಮನ್, ದೊಡ್ಡಣ್ಣ, ಶ್ರೀನಗರ ಕಿಟ್ಟಿ, ಕೆ.ಮಂಜು, ಎಂ.ಜಿ.ರಾಮಮೂರ್ತಿ, ಕೃಷ್ಣೇಗೌಡ, ಪಿ.ಸಿ.ಶೇಖರ್ ಸೇರಿದಂತೆ ಹಲವರು ಗೋಪಿಲೋಲ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ, ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ತಮ್ಮ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡರು.
ಸಾವಯವ ಕೃಷಿ ವಿಷಯವನ್ನು ಗೋಪಿಲೋಲ ಚಿತ್ರ ಹೊಂದಿದ್ದು, ಪ್ರೇಕ್ಷರನ್ನು ರಂಜಿಸುವ ವಿಶ್ವಾಸವಿದೆ. ಗೋಪಿಲೋಲ ಚಿತ್ರ ಕೇವಲ ಕೃಷಿ ಅಷ್ಟೇ ಅಲ್ಲ, ಮಹತ್ವದ ಸಂದೇಶ ಹೊಂದಿರುವ ಪ್ರೇಮಕಥೆಯನ್ನೂ ಹೊಂದಿದೆ ಎಂದು ನಿರ್ದೇಶಕ ಆರ್.ರವೀಂದ್ರ ಹೇಳಿದ್ದಾರೆ.
ನಾನೇ ಚಿತ್ರದ ಕಥೆಯನ್ನು ಬರೆದಿದ್ದೇನೆ. ನಮ್ಮದು ಹಿಂದೆ ಕೃಷಿ ಕುಟುಂಬ. ನೈಸರ್ಗಿಕ ಕೃಷಿಗೆ ಸಂಬಂಧಿಸಿದ ಚಿತ್ರ ಮಾಡಿದ ಸಂತೋಷವಿದೆ. ಮಿಥುನ್ ಅಶೊಕನ್ ಅವರ ಸಂಗೀತ ಸಂಯೋಜನೆಯಲ್ಲಿ ಆರು ಹಾಡುಗಳು ಸುಂದರವಾಗಿ ಮೂಡಿಬಂದಿದೆ ಎಂದರು.
ಮಂಜುನಾಥ್ ಅರಸ್ ಈ ಚಿತ್ರದ ನಿರ್ಮಾಣದಲ್ಲಿ ಸಾಥ್ ನೀಡುವ ಜೊತೆಗೆ ನಾಯಕರಾಗಿಯೂ ನಟಿಸಿದ್ದಾರೆ. ಇದು ನಾಯಕನಾಗಿ ನನ್ನ ಮೊದಲ ಚಿತ್ರ. ನನ್ನ ಪಾತ್ರ ಚೆನ್ನಾಗಿದೆ. ಆ್ಯಕ್ಷನ್, ಲವ್, ಸಸ್ಪೆನ್ಸ್ ಹೀಗೆ ನೋಡುಗನಿಗೆ ಬೇಕಾದ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಒಳ್ಳೆಯ ಕಂಟೆಂಟ್ ಇದೆ. ಅದೇ ನಮ್ಮ ಚಿತ್ರದ ಹೀರೋ’ ಎಂದರು.
Advertisement