
ಬೆಂಗಳೂರು: ಸ್ಯಾಂಡಲ್‌ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಬಿಲ್ಲ ರಂಗ ಬಾಷ ಚಿತ್ರದ ಚಿತ್ರೀಕರಣ ಬುಧವಾರದಿಂದ (ಏಪ್ರಿಲ್ 16) ಆರಂಭವಾಗಿದೆ.
ಚಿತ್ರ ತಂಡ ಚಿತ್ರದ ಚಿತ್ರೀಕರಣ ಆರಂಭದ ಜೊತೆಗೆ ಸುದೀಪ್ ಅವರ ಫಸ್ಟ್ ಲುಕ್'ನ್ನೂ ಬಿಡುಗಡೆ ಮಾಡಿದೆ. ಚಿತ್ರದಲ್ಲಿ ಕಿಚ್ಚನ ಫಸ್ಟ್ ಲುಕ್ ಸೂಪರ್ ಆಗಿದ್ದು, ಹಿಮದ ನಡುವೆ ಸುದೀಪ್ ಕಾಣಿಸಿಕೊಂಡಿದ್ದಾರೆ. ಕನ್ನಡಕ ಹಾಕಿಕೊಂಡು ಕಾಣಿಸಿಕೊಂಡಿದ್ದಾರೆ.
ಇದರಲ್ಲಿ ಹಿಮದ ನಡುವೆ ದೊಡ್ಡ ಅರಮನೆ ಇದ್ದು, ಕಿಚ್ಚನ ಕನ್ನಡಕದಲ್ಲಿ ಹೊತ್ತಿ ಉರಿಯುತ್ತಿರುವ ಹಡಗಿನ ಚಿತ್ರವೊಂದು ಕಾಣಿಸಿಕೊಂಡಿದೆ.
ಸುದೀಪ್ ಹಿಂಭಾಗದಲ್ಲಿ ಕಟ್ಟವೊಂದು ಇದ್ದು, ಸುದೀಪ್ ಮುಖದ ಮೇಲೆಲ್ಲಾ ಹಿಮಗಳು ಇರುವುದು ಕಂಡು ಬಂದಿದೆ. ಹಿಮ ತುಂಬಿರುವ ಬೆಟ್ಟಗಳ ಊರಿನಲ್ಲಿ ಸುದೀಪ್ ಯಾತ್ರೆಗೆ ಹೊರಟ ಸಾಹಸಿಗನಂತೆ ಪೋಸ್ಟರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್ ಸಾಕಷ್ಟು ಕುತೂಹಲವನ್ನು ಮೂಡಿಸಿದೆ.
ಬಿಲ್ಲ ರಂಗ ಬಾಷ ದೊಡ್ಡ ಬಜೆಟ್‌ನೊಂದಿಗೆ ಕನ್ನಡ, ತೆಲುಗು, ಹಿಂದಿ ಮೊದಲಾದ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರವನ್ನು ಅನೂಪ್ ಭಂಡಾರಿ ನಿರ್ದೇಶಿಸುತ್ತಿದ್ದು, ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ ಮತ್ತು ಕೆಎಸ್‌ಕೆ ಶೋ ರೀಲ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಿಸಲಾಗುತ್ತಿದೆ.
ಬಿಲ್ಲ ರಂಗ ಬಾಷ ಸಿನಿಮಾಕ್ಕಾಗಿಯೇ ಸುದೀಪ್ ತಮ್ಮ ದೇಹವನ್ನ ದಂಡಿಸಿದ್ದಾರೆ. ಈ ಚಿತ್ರಕ್ಕಾಗಿ ಈಗಾಗಲೇ ಸೆಟ್ ಕೆಲಸ ಮುಕ್ತಾಯವಾಗಿದ್ದು, ಬಹುತೇಕ ಸಿನಿಮಾ ಗ್ರಾಫಿಕ್ಸ್‌ನಲ್ಲಿಯೇ ಇರುವ ಸಾಧ್ಯತೆ ಹೆಚ್ಚಿದೆ
Advertisement