ಎಆರ್ ವಿಖ್ಯಾತ್ ನಿರ್ದೇಶನದ 'Yours Sincerely ರಾಮ್' ಚಿತ್ರಕ್ಕೆ ನಟಿ ಭಾವನಾ ಎಂಟ್ರಿ; ರಮೇಶ್ ಅರವಿಂದ್‌ಗೆ ಜೋಡಿ?

ಬಹು ಭಾಷೆಗಳಲ್ಲಿ ಕೆಲಸ ಮಾಡಿರುವ ಭಾವನಾ, ಕನ್ನಡ ಚಿತ್ರರಂಗದಲ್ಲಿ ಜನಪ್ರಿಯರಾಗಿದ್ದಾರೆ. ಪುನೀತ್ ರಾಜ್‌ಕುಮಾರ್ ಅಭಿನಯದ ಜಾಕಿ (2010) ಚಿತ್ರದ ಮೂಲಕ ಅವರು ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದರು.
'Yours Sincerely ರಾಮ್' ಚಿತ್ರದ ಪೋಸ್ಟರ್ - ನಟಿ ಭಾವನಾ
'Yours Sincerely ರಾಮ್' ಚಿತ್ರದ ಪೋಸ್ಟರ್ - ನಟಿ ಭಾವನಾ
Updated on

ಇದೇ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳುತ್ತಿರುವ ಎಆರ್ ವಿಖ್ಯಾತ್ ಅವರ 'Your’s Sincerely ರಾಮ್' ಚಿತ್ರದಲ್ಲಿ ನಟ ರಮೇಶ್ ಅರವಿಂದ್ ಮತ್ತು ಗಣೇಶ್ ಒಟ್ಟಾಗಿ ನಟಿಸಿದ್ದು, ತೀವ್ರ ಕುತೂಹಲ ಹುಟ್ಟುಹಾಕಿದೆ. ಚಿತ್ರವು 1990ರ ದಶಕದ ಭಾವನಾತ್ಮಕ ತಿರುಳನ್ನು ಒಳಗೊಂಡಿದೆ. ರಾಯಲ ಸ್ಟುಡಿಯೋಸ್ ಅಡಿಯಲ್ಲಿ ಸತ್ಯ ರಾಯಲ ನಿರ್ಮಿಸಿರುವ ಈ ಚಿತ್ರವು ದಿನದಿಂದ ದಿನಕ್ಕೆ ನಿರೀಕ್ಷೆಯನ್ನು ಹೆಚ್ಚಿಸುತ್ತಿದೆ.

ಈ ಹಿಂದೆ ಚಿತ್ರತಂಡವು ಮೀರಾ ಜಾಸ್ಮಿನ್ ಅವರ ಪಾತ್ರದ ಬಗ್ಗೆ ಆರಂಭಿಕ ಚರ್ಚೆಗಳನ್ನು ನಡೆಸಿದೆ ಮತ್ತು ಅವರನ್ನು ಕನ್ನಡ ಚಿತ್ರರಂಗಕ್ಕೆ ಮರಳಿ ಕರೆತರುವ ಕೆಲಸ ಮಾಡುತ್ತಿದೆ ಎಂದು ವರದಿಯಾಗಿತ್ತು. ಇದೀಗ ಚಿತ್ರದ ಇಬ್ಬರು ನಾಯಕಿಯರ ಪೈಕಿ ಒಂದು ಪಾತ್ರಕ್ಕೆ ಭಾವನಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮೂಲವೊಂದು ದೃಢಪಡಿಸಿದೆ.

ಬಹು ಭಾಷೆಗಳಲ್ಲಿ ಕೆಲಸ ಮಾಡಿರುವ ಭಾವನಾ, ಕನ್ನಡ ಚಿತ್ರರಂಗದಲ್ಲಿ ಜನಪ್ರಿಯರಾಗಿದ್ದಾರೆ. ಪುನೀತ್ ರಾಜ್‌ಕುಮಾರ್ ಅಭಿನಯದ ಜಾಕಿ (2010) ಚಿತ್ರದ ಮೂಲಕ ಅವರು ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದರು. ನಂತರ ಗಣೇಶ್ ಅವರೊಂದಿಗೆ ರೋಮಿಯೋ (2012) ಚಿತ್ರದಲ್ಲಿ ತೆರೆ ಹಂಚಿಕೊಂಡರು. ಇದಲ್ಲದೆ ಉಪೇಂದ್ರ ಅವರೊಂದಿಗೂ ನಟಿಸಿದ್ದಾರೆ. ವಿಖ್ಯಾತ್ ನಿರ್ಮಾಣದ ಇನ್ಸ್‌ಪೆಕ್ಟರ್ ವಿಕ್ರಮ್ (2021) ಚಿತ್ರದಲ್ಲಿ ನಟ ಪ್ರಜ್ವಲ್ ದೇವರಾಜ್ ಜೊತೆಗೆ ನಟಿಸಿದ್ದಾರೆ. ಇದೀಗ 'Yours Sincerely ರಾಮ್' ಚಿತ್ರದ ಮೂಲಕ ಮೊದಲ ಬಾರಿಗೆ ರಮೇಶ್ ಅರವಿಂದ್ ಅವರಿಗೆ ಜೋಡಿಯಾಗಿದ್ದಾರೆ.

'Yours Sincerely ರಾಮ್' ಚಿತ್ರದ ಪೋಸ್ಟರ್ - ನಟಿ ಭಾವನಾ
'Yours Sincerely ರಾಮ್' ಚಿತ್ರದಲ್ಲಿ ಗಣೇಶ್ ಜೊತೆಗೆ ಮೀರಾ ಜಾಸ್ಮಿನ್: ಕನ್ನಡಕ್ಕೆ ಮತ್ತೆ ಕರೆತರಲಿದ್ದಾರಾ ವಿಖ್ಯಾತ್?

ಚಿತ್ರತಂಡದೊಂದಿಗೆ ನಡೆದ ಚರ್ಚೆಯ ನಂತರ ಭಾವನಾ ಚಿತ್ರದಲ್ಲಿ ನಟಿಸಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ. ಚಿತ್ರದ ತಾರಾಗಣ ಅಂತಿಮವಾದ ಬಳಿಕ ಅವರ ಹೆಸರುಗಳನ್ನು ಘೋಷಿಸಲು ನಿರ್ಮಾಪಕರು ಯೋಜಿಸುತ್ತಿದ್ದಾರೆ.

ಚಿತ್ರತಂಡ ಈಗಾಗಲೇ ರಮೇಶ್ ಅರವಿಂದ್ ಮತ್ತು ಗಣೇಶ್ ಅವರನ್ನು ಒಳಗೊಂಡ ಕೆಲವು ಪ್ರಮುಖ ಭಾಗಗಳ ಚಿತ್ರೀಕರಣವನ್ನು ಮುಗಿಸಿದೆ ಮತ್ತು ಮುಂದಿನ ಭಾಗದ ಚಿತ್ರೀಕರಣಕ್ಕೆ ತಂಡವು ಸಜ್ಜಾಗುತ್ತಿದೆ. ಚಿತ್ರಕ್ಕೆ ನವೀನ್ ಕುಮಾರ್ ಅವರ ಛಾಯಾಗ್ರಹಣ, ಜೆ ಅನೂಪ್ ಸೀಳಿನ್ ಅವರ ಸಂಗೀತ ಸಂಯೋಜನೆ ಇದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com