Arjun Sarja 2ನೇ ಪುತ್ರಿಗೆ 'ಕಂಕಣಭಾಗ್ಯ'; 13 ವರ್ಷಗಳ ಪ್ರೀತಿ, ಹುಡುಗ ಯಾರು ಗೊತ್ತಾ?

ಇಟಲಿಯಲ್ಲಿ ಗೆಳೆಯನ ಜೊತೆ ಅಂಜನಾ ರೊಮ್ಯಾಂಟಿಕ್ ಆಗಿ ಫೋಟೋಶೂಟ್ ಮಾಡಿಸಿದ್ದು, ಅಂಜನಾ ಫೋಟೋಶೂಟ್‌ನಲ್ಲಿ ಅರ್ಜುನ್ ಸರ್ಜಾ ದಂಪತಿ, ಸಹೋದರಿ ಐಶ್ವರ್ಯಾ ದಂಪತಿ ಕೂಡ ಪೋಸ್ ನೀಡಿದ್ದಾರೆ.
Actor Arjun Sarja’s Younger Daughter Anjana Gets Engaged
ಅರ್ಜುನ್ ಸರ್ಜಾ 2ನೇ ಪುತ್ರಿ ಅಂಜನಾ
Updated on

ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟ ಹಾಗೂ ಕನ್ನಡಿಗ ಅರ್ಜುನ್ ಸರ್ಜಾ ಅವರ 2ನೇ ಪುತ್ರಿ ಅಂಜನಾ (Anjana)ಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು, 6 ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗನನ್ನು ವರಿಸುತ್ತಿದ್ದಾರೆ.

ಬಹುಭಾಷಾ ನಟ ಅರ್ಜುನ್ ಸರ್ಜಾ ಮತ್ತು ನಟಿ ನಿವೇದಿತಾ ದಂಪತಿಯ 2ನೇ ಪುತ್ರಿ ಅಂಜನಾ ಅವರ ವಿವಾಹಕ್ಕೆ ಭರ್ಜರಿ ಸಿದ್ಧ ನಡೆಯುತ್ತಿದ್ದು, ಅಂಜನಾ (Anjana Sarja) ಬಹುಕಾಲದ ಗೆಳೆಯನ ಜೊತೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಜೋಡಿ ಪರಸ್ಪರರ ಕೈಗೆ ಉಂಗುರ ಬದಲಿಸಿಕೊಳ್ಳುವ ಮೂಲಕ ಮದುವೆಗೆ ಅಧಿಕೃತ ಮುದ್ರೆ ಒತ್ತಿದ್ದಾರೆ.

ಇಟಲಿಯಲ್ಲಿ ಗೆಳೆಯನ ಜೊತೆ ಅಂಜನಾ ರೊಮ್ಯಾಂಟಿಕ್ ಆಗಿ ಫೋಟೋಶೂಟ್ ಮಾಡಿಸಿದ್ದು, ಅಂಜನಾ ಫೋಟೋಶೂಟ್‌ನಲ್ಲಿ ಅರ್ಜುನ್ ಸರ್ಜಾ ದಂಪತಿ, ಸಹೋದರಿ ಐಶ್ವರ್ಯಾ ದಂಪತಿ ಕೂಡ ಪೋಸ್ ನೀಡಿದ್ದಾರೆ. ಇಟಲಿಯ ಲೇಕ್ ಕೊಮೊದಲ್ಲಿ ಉಂಗುರ ಬದಲಿಸುವ ಕಾರ್ಯಕ್ರಮ ನಡೆದಿದೆ.

Actor Arjun Sarja’s Younger Daughter Anjana Gets Engaged
ಎಆರ್ ವಿಖ್ಯಾತ್ ನಿರ್ದೇಶನದ 'Yours Sincerely ರಾಮ್' ಚಿತ್ರಕ್ಕೆ ನಟಿ ಭಾವನಾ ಎಂಟ್ರಿ; ರಮೇಶ್ ಅರವಿಂದ್‌ಗೆ ಜೋಡಿ?

ಪೋಸ್ಟ್ ಹಂಚಿಕೊಂಡ ಅಂಜನಾ

ಅಂಜನಾ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ, ಗೆಳೆಯನ ಪ್ರೇಮ ನಿವೇದನೆಗೆ ‘ಯೆಸ್‌ ಎನ್ನದೇ ಹೇಗಿರಲಿ’ ಎಂದು ಬರೆದುಕೊಂಡಿದ್ದಾರೆ. ಅದಕ್ಕೆ ಅರ್ಜುನ್ ಸರ್ಜಾ, ನಾನು ಮೊದಲೇ ಊಹಿಸಿದ್ದೆ, ಅವನು ನಿನ್ನ ಪಾರ್ಟ್ನರ್ ಆಗುತ್ತಾನೆಂದು ಅಂತ ಕಾಮೆಂಟ್ ಮಾಡಿದ್ದಾರೆ.

ಯಾರು ಹುಡುಗ?

ಅಂಜನಾ ವರಿಸುತ್ತಿರುವ ಹುಡುಗ ವಿದೇಶಿಗನಾಗಿದ್ದು, ಇವರಿಬ್ಬರದೂ 13 ವರ್ಷಗಳ ಸ್ನೇಹ ಮತ್ತು ಪ್ರೀತಿಯಂತೆ. ಫಾರಿನ್‌ ಹುಡುಗ 'ಐಸೆ'ಯ ಜೊತೆ ಅಂಜನಾ ಎಂಗೇಜ್ ಆಗಿದ್ದು, ಅವರ ಮದುವೆಯ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ. ಅಂಜನಾ ವರಿಸುತ್ತಿರುವ ಹುಡುಗನ ಹೆಸರನ್ನು ಹೊರತುಪಡಿಸಿ ಅವರು ಎಲ್ಲಿಯವರು, ಏನು ಮಾಡಿಕೊಂಡಿದ್ದಾರೆ ಎಂಬಿತ್ಯಾದಿ ವಿವರಗಳು ಇನ್ನೂ ಲಭ್ಯವಾಗಿಲ್ಲ.

ಅಂದಹಾಗೆ ಅರ್ಜುನ್ ಸರ್ಜಾ ಮೊದಲ ಪುತ್ರಿ ಐಶ್ವರ್ಯಾ ಅರ್ಜುನ್‌ ಕಳೆದ ವರ್ಷ ಜೂನ್ 10 ರಂದು ಉಮಾಪತಿ ರಾಮಯ್ಯ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com