2018ರ ನೈಜ ಘಟನೆ ಆಧರಿತ ಸಿನಿಮಾ 'ನೋಡಿದ್ದು ಸುಳ್ಳಾಗಬಹುದು'; ಕನ್ನಡ ಮತ್ತು ತೆಲುಗಿನಲ್ಲಿ ನಿರ್ಮಾಣ

ಚಿತ್ರದ ಮೊದಲ ಹಾಡು 'ಕನಸುಗಳ ಮೆರವಣಿಗೆ' ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಅನಿರುದ್ಧ್ ಶಾಸ್ತ್ರಿ ಅವರು ಬರೆದಿರುವ ಈ ಹಾಡಿಗೆ ಗುಮ್ಮಿನೆನಿ ವಿಜಯ್ ಸಂಗೀತ ಸಂಯೋಜಿಸಿದ್ದಾರೆ.
A still from Nodiddu Sullagabahudu
ನೋಡಿದ್ದು ಸುಳ್ಳಾಗಬಹುದು ಚಿತ್ರದ ಸ್ಟಿಲ್
Updated on

ಬಹುತೇಕ ಹೊಸಬರೇ ನಿರ್ಮಿಸಿರುವ ಚಿತ್ರ 'ನೋಡಿದ್ದು ಸುಳ್ಳಾಗಬಹುದು' ಮೂಲಕ ಅನಿಲ್ ಕುಮಾರ್ ಕೆಆರ್ ಇದೀಗ ಸಿನಿಮಾ ರಂಗಕ್ಕೆ ಕಾಲಿಡುತ್ತಿದ್ದಾರೆ. ಈ ಚಿತ್ರಕ್ಕೆ ಬಂಡವಾಳ ಹೂಡಿರುವ ಅವರೇ ನಾಯಕನಾಗಿಯೂ ನಟಿಸಿದ್ದಾರೆ. ಚಿತ್ರದಲ್ಲಿ ಅನಿಲ್ ಪೊಲೀಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರಕ್ಕೆ ವಿಜಯ್ ಚಲಪತಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರವು ಆಳವಾದ ಭಾವನಾತ್ಮಕ ಮೌಲ್ಯವನ್ನು ಹೊಂದಿದೆ ಮತ್ತು ಅದರ ಶೀರ್ಷಿಕೆಯು ಶಕ್ತಿಯುತ ಮತ್ತು ಅರ್ಥಪೂರ್ಣವಾಗಿದೆ ಎಂದು ಅನಿಲ್ ಭಾವಿಸುತ್ತಾರೆ.

'ನಾನು ಚಿಕ್ಕಬಳ್ಳಾಪುರದವನು ಮತ್ತು ನಟನೆಯ ಬಗ್ಗೆ ಯಾವಾಗಲೂ ಉತ್ಸಾಹ ಹೊಂದಿದ್ದೇನೆ. ನಾನು ಉಷಾ ಭಂಡಾರಿ ಅವರ ನಟನಾ ಶಾಲೆಯಲ್ಲಿ ತರಬೇತಿ ಪಡೆದಿದ್ದೇನೆ ಮತ್ತು ನನ್ನ ಸ್ನೇಹಿತ ಅಕ್ಷಯ್ ಮೂಲಕ ನಿರ್ದೇಶಕ ವಿಜಯ್ ಸರ್ ಅವರನ್ನು ಭೇಟಿಯಾದೆ. ಕಥೆ ಮತ್ತು ಶೀರ್ಷಿಕೆ ಎರಡರಿಂದಲೂ ನಾನು ಆಕರ್ಷಿತನಾದೆ. ಪ್ರಮುಖ ಪಾತ್ರದಲ್ಲಿ ನಟಿಸುವುದರ ಜೊತೆಗೆ, ನಾನು ಚಿತ್ರವನ್ನು ನಿರ್ಮಿಸಿದ್ದೇನೆ. ಕ್ಲೈಮ್ಯಾಕ್ಸ್ ಒಂದು ಪ್ರಮುಖ ಹೈಲೈಟ್ ಆಗಿರುತ್ತದೆ. ಚಿತ್ರವು ತನ್ನದೇ ಆದ ಕಮರ್ಷಿಯಲ್ ಅಂಶಗಳನ್ನು ಹೊಂದಿದೆ. ಆದರೆ, ಪೋಷಕರು ಮತ್ತು ಮಕ್ಕಳ ನಡುವಿನ ಬಾಂಧವ್ಯದ ಮೇಲೆ ಕೇಂದ್ರೀಕರಿಸುತ್ತದೆ' ಎಂದು ಅನಿಲ್ ಹೇಳುತ್ತಾರೆ.

ಚಿತ್ರದ ಮೊದಲ ಹಾಡು 'ಕನಸುಗಳ ಮೆರವಣಿಗೆ' ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಅನಿರುದ್ಧ್ ಶಾಸ್ತ್ರಿ ಅವರು ಬರೆದಿರುವ ಈ ಹಾಡಿಗೆ ಗುಮ್ಮಿನೆನಿ ವಿಜಯ್ ಸಂಗೀತ ಸಂಯೋಜಿಸಿದ್ದಾರೆ. ಅನಿರುದ್ಧ್ ಶಾಸ್ತ್ರಿ ಮತ್ತು ಪೃಥ್ವಿ ಭಟ್ ಧ್ವನಿ ನೀಡಿದ್ದಾರೆ. 'ನೋಡಿದ್ದು ಸುಳ್ಳಾಗಬಹುದು' 2018ರ ನೈಜ ಘಟನೆಯನ್ನು ಆಧರಿಸಿದೆ ಮತ್ತು ಕನ್ನಡ ಮತ್ತು ತೆಲುಗು ಎರಡರಲ್ಲೂ ನಿರ್ಮಿಸಲಾಗಿದೆ.

'ನನಗೆ ಚಿತ್ರರಂಗದೊಂದಿಗೆ 10 ವರ್ಷಗಳಿಂದ ನಂಟಿದೆ. ಪೊಗರು ಸೇರಿದಂತೆ ಹಲವು ಚಿತ್ರಗಳಲ್ಲಿ ನಿರ್ದೇಶನದ ವಿಭಾಗದಲ್ಲಿ ಕೆಲಸ ಮಾಡಿದ್ದು, ಸ್ವತಂತ್ರ ನಿರ್ದೇಶಕನಾಗಿ ಇದು ನನ್ನ ಮೊದಲ ಚಿತ್ರ. ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಅನಿಲ್ ಕುಮಾರ್ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ. ನೀವು ಚಿತ್ರವನ್ನು ನೋಡಿದಾಗ ನಾವು ಈ ಶೀರ್ಷಿಕೆಯನ್ನು ಏಕೆ ಆರಿಸಿಕೊಂಡಿದ್ದೇವೆಂದು ನಿಮಗೆ ತಿಳಿಯುತ್ತದೆ. ಚಿತ್ರೀಕರಣ ಪೂರ್ಣಗೊಂಡಿದೆ ಮತ್ತು ನಾವು ಈಗ ಪೋಸ್ಟ್-ಪ್ರೊಡಕ್ಷನ್‌ ಹಂತದಲ್ಲಿದ್ದೇವೆ' ಎನ್ನುತ್ತಾರೆ ನಿರ್ದೇಶಕರು.

A still from Nodiddu Sullagabahudu
ರಜಿನಿಕಾಂತ್ ನಟನೆಯ 'ಕೂಲಿ' ಚಿತ್ರದ ಟ್ರೇಲರ್‌ನಲ್ಲಿ ನಟಿ ರಚಿತಾ ರಾಮ್; ತಮಿಳು ಚಿತ್ರರಂಗಕ್ಕೆ ಪದಾರ್ಪಣೆ

'ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಗುಮ್ಮಿನೆನಿ ವಿಜಯ್ ಎರಡು ಹಾಡುಗಳಿಗೆ ಮತ್ತು ಮಿಹಿರಾಮ್ಸ್ ಎರಡು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಕೆವಿ ಕಿರಣ್ ಅವರ ಛಾಯಾಗ್ರಹಣ, ಶ್ರೀನಿವಾಸ್ ಕಲಾಲ್ ಅವರ ಸಂಕಲನ, ಪ್ರಭು ಅವರ ನೃತ್ಯ ಸಂಯೋಜನೆ ಮತ್ತು ಸಾಹಸ ನಿರ್ದೇಶಕರಾಗಿ ನರಸಿಂಹ ಮಾಗಡಿ ಇದ್ದಾರೆ' ಎಂದು ವಿಜಯ್ ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com