

ಸ್ಯಾಂಡಲ್ವುಡ್ ಬಾದ್ ಷಾ ಕಿಚ್ಚ ಸುದೀಪ್ ಮನೆಯಲ್ಲಿ ಮದುವೆ ಸಂಭ್ರಮ ಶುರುವಾಗಿದ್ದು, ಮದುವೆಯ ಅರಿಶಿನ ಶಾಸ್ತ್ರದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸುದೀಪ್ ಅವರ ಅಕ್ಕನ ಮಗನ ಮದುವೆ ಶ್ರೀಲಂಕಾದಲ್ಲಿ ನಡೆದಿದ್ದು. ಆಪ್ತರು ಹಾಗೂ ಕುಟುಂಬಸ್ಥರ ಮಧ್ಯೆ ಅದ್ಧೂರಿಯಾಗಿ ನಡೆದಿದೆ.
ಸುದೀಪ್ ಅಕ್ಕನ ಮಗನ (ಸೋದರಳಿಯ) ಮದುವೆ ಶಾಸ್ತ್ರದಲ್ಲಿ ಸುದೀಪ್ ಕುಟುಂಬ ಭಾಗಿಯಾಗಿದೆ. ಅರಿಶಿನ ಶಾಸ್ತ್ರದಲ್ಲಿ ನವಜೋಡಿ ಜೊತೆ ತಮ್ಮ ಪ್ರೀತಿಯ ಮಗಳಿಗೂ ಸುದೀಪ್ ಮತ್ತು ಪ್ರಿಯಾ ಸುದೀಪ್ ಅರಿಶಿಣ ಹಚ್ಚಿದ್ದಾರೆ. ಅರಿಶಿನ ಶಾಸ್ತ್ರದ ಫೋಟೋಗಳನ್ನು ಸಾನ್ವಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಈ ಫೋಟೋಗಳು ವೈರಲ್ ಆಗಿದೆ.
Advertisement