ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜೊತೆ ಧನ್ಯಾ ರಾಮ್‌ ಕುಮಾರ್: ಫೋಟೋ ವೈರಲ್; ಸೀಕ್ರೆಟ್ ರಿವೀಲ್!

ವೈರಲ್ ಆಗಿರುವ ಫೋಟೋದಲ್ಲಿ ಧನ್ಯಾ ರಾಮ್​ಕುಮಾರ್ ಅವರು ಆರ್ಯನ್ ಖಾನ್ ಪಕ್ಕದಲ್ಲಿ ನಿಂತು ಫೋಟೋಗೆ ಪೋಸ್ ಕೊಟ್ಟಿರುವುದು ಕಂಡು ಬಂದಿದೆ.
ಶಾರುಖ್ ಖಾನ್ ಪುತ್ರನ ಜೊತೆ ಧನ್ಯಾ ರಾಮ್‌ ಕುಮಾರ್
ಶಾರುಖ್ ಖಾನ್ ಪುತ್ರನ ಜೊತೆ ಧನ್ಯಾ ರಾಮ್‌ ಕುಮಾರ್
Updated on

ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜೊತೆಗೆ ದೊಡ್ಮನೆ ಕುಟುಂಬದ ಕುಡಿ ಧನ್ಯಾ ರಾಮ್​ಕುಮಾರ್ ಅವರು ಕಾಣಿಸಿಕೊಂಡಿದ್ದು, ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ವೈರಲ್ ಆಗಿರುವ ಫೋಟೋದಲ್ಲಿ ಧನ್ಯಾ ರಾಮ್​ಕುಮಾರ್ ಅವರು ಆರ್ಯನ್ ಖಾನ್ ಪಕ್ಕದಲ್ಲಿ ನಿಂತು ಫೋಟೋಗೆ ಪೋಸ್ ಕೊಟ್ಟಿರುವುದು ಕಂಡು ಬಂದಿದೆ.

ಈ ಫೋಟೋವನ್ನ ಥಟ್ ಅಂತ ನೋಡಿದ್ರೆ ಆರ್ಯನ್ ಖಾನ್ ಜೊತೆ ಧನ್ಯಾ ಸಿನಿಮಾ ಮಾಡ್ತಿದ್ದಾರಾ ಎನ್ನುವ ಪ್ರಶ್ನೆ ಮೂಡುತ್ತಿದೆ. ಆದರೆ. ಬೆಂಗಳೂರಿಗೆ ಕಾರ್ಯಕ್ರಮದಲ್ಲಿ ಬಂದಿದ್ದ ವೇಳೆ ಧನ್ಯಾ, ಆರ್ಯನ್ ಖಾನ್‌ರನ್ನ ಭೇಟಿಯಾಗಿದ್ದು ಈ ವೇಳೆ ಫೋಟೋ ತೆಗೆಸಿಕೊಂಡಿದ್ದಾರೆಂದು ತಿಳಿದುಬಂದಿದೆ.

ವೆಬ್ ಸಿರೀಸ್ ನಿರ್ದೇಶಕ ಆಗಿರುವ ಆರ್ಯನ್ ಖಾನ್ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ಬಂದಿದ್ದರು.

ಈ ವೇಳೆ ನಟಿ ಧನ್ಯಾ ರಾಮ್‌ಕುಮಾರ್‌ ಅವರು ಆರ್ಯನ್‌ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ಕನ್ನಡ ಸಿನಿಮಾ ನಟಿಯಾಗಿರುವ ಡಾ.ರಾಜ್‌ಕುಮಾರ್ ಮೊಮ್ಮಗಳು ಧನ್ಯಾ ಅವರು ಆರ್ಯನ್ ಖಾನ್ ಜೊತೆ ಕಾಣಿಸಿಕೊಂಡಿರುವ ಫೋಟೋಗಳು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಶಾರುಖ್ ಖಾನ್ ಪುತ್ರನ ಜೊತೆ ಧನ್ಯಾ ರಾಮ್‌ ಕುಮಾರ್
30 ವರ್ಷಗಳ ನಂತರ ಮತ್ತೆ ಬೆಳ್ಳಿತೆರೆಗೆ 'ಬೆಳ್ಳಿ ಕಾಲುಂಗುರ'; ಧನ್ಯಾ ರಾಮ್ ಕುಮಾರ್ ನಾಯಕಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com