ಬಾಲಯ್ಯ
ಸಿನಿಮಾ ಸುದ್ದಿ
ಅಖಂಡ 2: ಕನ್ನಡ ಹೊಗಳುವ ಭರದಲ್ಲಿ ಎಡವಟ್ಟು; ತೆಲುಗಿನ ನಟ ಬಾಲಯ್ಯ ಸಖತ್ ಟ್ರೋಲ್! Video
ಡೈಲಾಗ್ ಹೇಳುವ ಬರದಲ್ಲಿ ಕನ್ನಡ ಉಚ್ಚಾರಣೆಯನ್ನು ತಪ್ಪಾಗಿ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುವ ಮೂಲಕ ಸಖತ್ ಟ್ರೋಲ್ ಆಗ್ತಿದ್ದಾರೆ.
ಡಿಸೆಂಬರ್ 12 ರಂದು ಬಿಡುಗಡೆಯಾದ ತೆಲುಗಿನ 'ಅಖಂಡ 2' ಚಿತ್ರದಲ್ಲಿ ಹಿರಿಯ ನಟ ಬಾಲಯ್ಯ ಕನ್ನಡದ ಮೇಲಿರುವ ತಮ್ಮ ಪ್ರೀತಿ ಹಾಗೂ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.
ಆದರೆ ಡೈಲಾಗ್ ಹೇಳುವ ಬರದಲ್ಲಿ ಕನ್ನಡ ಉಚ್ಚಾರಣೆಯನ್ನು ತಪ್ಪಾಗಿ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುವ ಮೂಲಕ ಸಖತ್ ಟ್ರೋಲ್ ಆಗ್ತಿದ್ದಾರೆ.
ಏನಿದು ಎಡವಟ್ಟು?
ಅಂದಹಾಗೆ, ವೈರಲ್ ಆಗಿರುವ ವಿಡಿಯೋದಲ್ಲಿ ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಅಂತ ಹೇಳುವ ಬದಲು ತಪ್ಪು ತಪ್ಪಾಗಿ ಕನ್ನಡವೇ ಸಚ್ಚ, ಕನ್ನಡವೇ ನಿಚ್ಚ ಎಂದಿದ್ದಾರೆ. ಈ ವಿಡಿಯೋವನ್ನು ಇಟ್ಟುಕೊಂಡು ಟ್ರೋಲ್ ಮಾಡಲಾಗುತ್ತಿದೆ.
ಕನ್ನಡದ ಮೇಲೆ ಅಷ್ಟು ಅಭಿಮಾನ ಉಳ್ಳವರು ಕನ್ನಡವನ್ನು ತಪ್ಪು ತಪ್ಪಾಗಿ ಉಚ್ಚಾರಣೆ ಮಾಡಿದ್ದು, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಡಬ್ಬಿಂಗ್ ನಲ್ಲಾದರೂ ಸರಿ ಮಾಡಬಹುದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

