

ಹೈದರಾಬಾದ್: ಇತ್ತೀಚೆಗಷ್ಟೇ ಹೆಣ್ಣುಮಕ್ಕಳ ಉಡುಗೆ ಕುರಿತು ಮಾತನಾಡಿ ವಿವಾದಕ್ಕೀಡಾಗಿದ್ದ ತೆಲುಗು ನಟ ಶಿವಾಜಿ ಇದೀಗ ಅಂತಹುದೇ ಮತ್ತೊಂದು ಹೇಳಿಕೆ ನೀಡಿ ಸುದ್ದಿಗೆ ಗ್ರಾಸವಾಗಿದ್ದಾರೆ.
ಹೈದರಾಬಾದ್ ಮಾಲ್ ಕಾರ್ಯಕ್ರಮದಲ್ಲಿ ನಟಿ ನಿಧಿ ಅಗರ್ವಾಲ್ ಅವರಿಗೆ ಆದ ಅನುಭವದ ಬಗ್ಗೆ ತೆಲುಗು ನಟ ಶಿವಾಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಟಿಯ ಉಡುಗೆಯೇ ಜನರನ್ನು ಕೆರಳಿಸಿತು ಎಂದು ಶಿವಾಜಿ ಆರೋಪಿಸಿದ್ದಾರೆ.
ಡಿಸೆಂಬರ್ 17 ರಂದು ಹೈದರಾಬಾದ್‌ನ ಲುಲು ಮಾಲ್‌ನಲ್ಲಿ ರಾಜಾ ಸಾಬ್‌ನ ಹಾಡಿನ ಬಿಡುಗಡೆ ಸಮಾರಂಭದಲ್ಲಿ ನಿಧಿ ಚಿತ್ರತಂಡದೊಂದಿಗೆ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಊಹೆಗೂ ಮೀರಿದ ಸಂಖ್ಯೆಯಲ್ಲಿ ಜನರು ಸೇರಿದ್ದರು.ಈವೆಂಟ್ ಮುಗಿದ ಬಳಿಕ ನಟಿ ಅಲ್ಲಿಂದ ಹೊರ ಬರಲು ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ಸಾಕಷ್ಟು ಜನರು ಅವರ ದೇಹವನ್ನು ಟಚ್ ಮಾಡಿದ್ದರು. ಈ ಸಂಬಂಧ ಕೇಸ್ ಕೂಡ ದಾಖಲಾಗಿತ್ತು.
ಇದೀಗ ಇದೇ ವಿಚಾರವಾಗಿ ನಟ ಶಿವಾಜಿ ಮಾತನಾಡಿದ್ದು, ಹೈದರಾಬಾದ್ ಮಾಲ್‌ನಲ್ಲಿ ನಡೆದ ‘ರಾಜಾ ಸಾಬ್’ ಸಾಂಗ್ ರಿಲೀಸ್ ಕಾರ್ಯಕ್ರಮದಲ್ಲಿ ನಟಿ ನಿಧಿ ಅಗರ್ವಾಲ್ ಭಾಗಿ ಆಗಿದ್ದರು. ಈ ವೇಳೆ ನಟಿಯ ಮೇಲೆ ಅಲ್ಲಿದ್ದ ಜನರು ಮುಗಿಬಿದ್ದಿದ್ದರು.ಇದು ಸಾಕಷ್ಟು ಚರ್ಚೆಗೆ ಕಾರಣ ಆಗಿತ್ತು.
ನಟಿ ಇದರಿಂದ ಸಾಕಷ್ಟು ತೊಂದರೆ ಅನುಭವಿಸಿದ್ದರು. ಒಂದು ವೇಳೆ ಆ ನೂಕು ನುಗ್ಗಲಾಟದಲ್ಲಿ ನಿಧಿ ಅವರ ಉಡುಗೆಯ ಒಂದು ಸಣ್ಣ ತುಂಡು ಹರಿದಿದ್ದರೂ ಅವರು ಜೀವನ ಪೂರ್ತಿ ಅಳುತ್ತಿದ್ದರು. ಅದು ಅವರ ಜೀವನದ ಅತ್ಯಂತ ಮರೆಯಲಾದ ದುಃಸ್ವಪ್ನವಾಗಿರುತ್ತಿತ್ತು. ನಟಿಯರು ಸಾಧಾರಣ ಉಡುಗೆ ತೊಡಬೇಕು' ಎಂದಿದ್ದಾರೆ.
'ನಿಧಿಯ ಉಡುಗೆ ಜನಸಮೂಹವನ್ನು ಕೆರಳಿಸಿತು’ ಎಂದು ನೇರವಾಗಿ ಅವರ ಉಡುಗೆ ಬಗ್ಗೆ ಆರೋಪ ಮಾಡಿದ್ದಾರೆ. ‘ಸಾಯಿ ಪಲ್ಲವಿ, ಅನುಷ್ಕಾ, ಸೌಂದರ್ಯ, ಭೂಮಿಕಾ ಮೊದಲಾದವರನ್ನು ಯಾರಾದರೂ ಟಚ್ ಮಾಡಿದ್ದಾರಾ? ಏಕೆಂದರೆ ಅವರು ಸರಿಯಾಗಿ ಬಟ್ಟೆ ಹಾಕುತ್ತಾರೆ.
ಯಾರೂ ಪ್ರಚೋದಿಸಬೇಡಿ. ನೀವು ಹಾಗೆ ಮಾಡಿದಾಗ ಪುರುಷರು ನಿಮ್ಮನ್ನು ಮುಟ್ಟಬಹುದು ಎಂದು ಭಾವಿಸುತ್ತಾರೆ. ನಿಮಗೆ ಹೇಗೆ ಅನಿಸುತ್ತದೆಯೋ ಹಾಗೆ ಉಡುಗೆ ಧರಿಸಿ. ಆದರೆ,ನಾನು ನಿಜವನ್ನು ಹೇಳುತ್ತಿದ್ದೇನೆ' ಎಂದು ನಟ ಶಿವಾಜಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ನಟಿ ಹೇಳಿದ್ದೇನು?
ಇನ್ನು ನಟ ಶಿವಾಜಿ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ನಟಿ ನಿಧಿ ಅಗರ್ವಾಲ್, 'ಸಂತ್ರಸ್ತೆಯನ್ನು ದೂಷಿಸುವುದು ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಲುಲು ಮಾಲ್ ಕಾರ್ಯಕ್ರಮದ ಫೋಟೋವನ್ನು ಹಂಚಿಕೊಂಡು, ‘ಸಂತ್ರಸ್ತೆಯನ್ನು ದೂಷಿಸುವುದು ತಪ್ಪು’ ಎಂಬರ್ಥದಲ್ಲಿ ಪೋಸ್ಟ್ ಮಾಡಿದ್ದಾರೆ.
Advertisement