ಗ್ಲಾಮರಸ್ ಫೋಟೊಗಳ ಮೂಲಕ ನಾನು ಎಲ್ಲರ ಗಮನ ಸೆಳೆಯಲು ಬಯಸಲ್ಲ: 'ಗಜರಾಮ' ನಟಿ ತಪಸ್ವಿನಿ ಪೂಣಚ್ಚ

ಚಿತ್ರದಲ್ಲಿ ರಾಜವರ್ದನ್ ಮತ್ತು ದೀಪಕ್ ನಾಯಕರಾಗಿ ಕಾಣಿಸಿಕೊಂಡಿದ್ದು, ಕಬೀರ್ ಸಿಂಗ್ ದುಹಾನ್ ಖಳನಾಯಕನಾಗಿ ನಟಿಸಿದ್ದಾರೆ.
ತಪಸ್ವಿನಿ ಪೂಣಚ್ಚ
ತಪಸ್ವಿನಿ ಪೂಣಚ್ಚ
Updated on

ನಟ, ನಿರ್ದೇಶಕ ರಿಷಬ್ ಶೆಟ್ಟಿ ಜೊತೆಗೆ ಹರಿಕಥೆ ಅಲ್ಲ ಗಿರಿಕಥೆ (2022) ಚಿತ್ರದ ಮೂಲಕ ತಮ್ಮ ಛಾಪು ಮೂಡಿಸಿದ ತಪಸ್ವಿನಿ ಪೂಣಚ್ಚ ಇದೀಗ ತಮ್ಮ ಎರಡನೇ ಚಿತ್ರ 'ಗಜರಾಮ' ಮೂಲಕ ತೆರೆಮೇಲೆ ಮಿಂಚಲು ಸಿದ್ಧರಾಗಿದ್ದಾರೆ.

ಚಿತ್ರದ ಕುರಿತು ಮಾತನಾಡುತ್ತಾ, 'ಗಜರಾಮ ನಾನು ಎರಡು ವರ್ಷಗಳ ಹಿಂದೆ ಪೂರ್ಣಗೊಳಿಸಿದ ಯೋಜನೆಯಾಗಿದೆ. ಆದರೆ ಅನಿರೀಕ್ಷಿತ ವಿಳಂಬದಿಂದಾಗಿ, ಅದು ಅಂತಿಮವಾಗಿ ಈಗ ಬಿಡುಗಡೆಯಾಗುತ್ತಿದೆ. ಸದ್ಯ ನಾನು ಗುರುನಂದನ್ ನಟಿಸಿರುವ ಮಿಸ್ಟರ್ ಜಾಕ್ ಚಿತ್ರ ಸೇರಿದಂತೆ ಹಲವಾರು ಇತರ ಪ್ರಾಜೆಕ್ಟ್‌ಗಳಲ್ಲಿ ನಟಿಸುತ್ತಿದ್ದೇನೆ' ಎಂದು ಹೇಳುತ್ತಾರೆ.

ನರಸಿಂಹ ಮೂರ್ತಿ ನಿರ್ಮಾಣದ ಮತ್ತು ಸುನೀಲ್ ಕುಮಾರ್ ವಿಎ ನಿರ್ದೇಶನದ 'ಗಜರಾಮ' ಈ ವಾರ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ರಾಜವರ್ದನ್ ಮತ್ತು ದೀಪಕ್ ನಾಯಕರಾಗಿ ಕಾಣಿಸಿಕೊಂಡಿದ್ದು, ಕಬೀರ್ ಸಿಂಗ್ ದುಹಾನ್ ಖಳನಾಯಕನಾಗಿ ನಟಿಸಿದ್ದಾರೆ.

'ಗಜರಾಮ' ಚಿತ್ರದಲ್ಲಿ ತಪಸ್ವಿನಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ನಗರಕ್ಕೆ ತೆರಳಿದ ನಂತರ ಗಮನಾರ್ಹ ರೂಪಾಂತರಕ್ಕೆ ಒಳಗಾಗುವ ಹಳ್ಳಿ ಹುಡುಗಿಯ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. 'ಇದು ಕ್ರೀಡಾ ಕೇಂದ್ರಿತ ಚಿತ್ರವಾಗಿದ್ದು, ಕುಸ್ತಿಯನ್ನು ಪ್ರಮುಖ ವಿಷಯವಾಗಿ ಹೊಂದಿದೆ. ನನ್ನ ಪಾತ್ರವೂ ಸೇರಿದಂತೆ ಪ್ರತಿಯೊಂದು ಪಾತ್ರವೂ ಕಥೆಗೆ ನಿರ್ಣಾಯಕವಾಗಿದೆ' ಎಂದು ಅವರು ವಿವರಿಸುತ್ತಾರೆ.

ತಪಸ್ವಿನಿ ಪೂಣಚ್ಚ
ರಾಜವರ್ಧನ್ ಅಭಿನಯದ 'ಗಜರಾಮ' ಚಿತ್ರ ಫೆಬ್ರುವರಿ 7ಕ್ಕೆ ಬಿಡುಗಡೆ

ತಪಸ್ವಿನಿ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುವ ಫೋಟೊಗಳಿಗೆ ಲಕ್ಷಾಂತರ ವೀಕ್ಷಣೆಗಳು ಲಭ್ಯವಾಗುತ್ತವೆ. 'ಬಾಲ್ಯದಿಂದಲೂ, ನಾನು ಯಾವಾಗಲೂ ಸಾಂಪ್ರದಾಯಿಕ ಮತ್ತು ಗ್ಲಾಮರಸ್ ಶೈಲಿಗಳಲ್ಲಿ ಡ್ರೆಸ್ಸಿಂಗ್ ಮಾಡುವುದನ್ನು ಇಷ್ಟಪಡುತ್ತೇನೆ. ಇದು ನಾನು ಯಾರು ಎಂಬುದರ ಭಾಗವಾಗಿದೆ. ಗ್ಲಾಮರಸ್ ಚಿತ್ರಗಳ ಮೂಲಕ ನಾನು ಎಲ್ಲರ ಗಮನ ಸೆಳೆಯಲು ಬಯಸುವುದಿಲ್ಲ. ಬದಲಿಗೆ ನಾನು ನನ್ನ ಕೆಲಸದ ಬಗ್ಗೆ ಮಾತ್ರ ಗಮನದಲ್ಲಿಟ್ಟುಕೊಂಡಿರುತ್ತೇನೆ' ಎಂದು ಹೇಳುತ್ತಾರೆ ತಪಸ್ವಿನಿ.

ಪ್ರಮಾಣೀಕೃತ ಬ್ರೂವರ್ ಮತ್ತು ಕೆಫೆ ಮಾಲೀಕರಾಗಿರುವ ತಪಸ್ವಿನಿ ಅವರು ತಮ್ಮ ನಟನೆಯ ಜೊತೆಗೆ ಉದ್ಯಮದ ಕಡೆಗೂ ಗಮನಹರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com