
ಬಿಚ್ಚುಗತ್ತಿ: ಅಧ್ಯಾಯ 1- ದಳವಾಯಿ ದಂಗೆ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿರುವ ನಟ ರಾಜವರ್ಧನ್ ಇದೀಗ ತಮ್ಮ ಮೂರನೇ ಸಿನಿಮಾ 'ಗಜರಾಮ' ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. 2024ರ ಕೊನೆಯಲ್ಲಿಯೇ ತೆರೆಕಾಣಬೇಕಿದ್ದ ಚಿತ್ರದ ಬಿಡುಗಡೆಯನ್ನು ಕಾರಣಾಂತರಗಳಿಂದ ಮುಂದೂಡಲಾಗಿತ್ತು. ಇದೀಗ ಚಿತ್ರ ಬಿಡುಗಡೆಯ ದಿನಾಂಕವನ್ನು ಫೆಬ್ರುವರಿ 7ಕ್ಕೆ ನಿಗದಿ ಮಾಡಲಾಗಿದೆ.
ಸುನೀಲ್ ಕುಮಾರ್ ವಿಎ ನಿರ್ದೇಶಿಸಿರುವ 'ಗಜರಾಮ' ಚಿತ್ರ ರಾಜವರ್ಧನ್ ಅವರ ಪೂರ್ಣ ಪ್ರಮಾಣದ ಚೊಚ್ಚಲ ಆ್ಯಕ್ಷನ್ ಸಿನಿಮಾ ಆಗಿದೆ. ರಾಜವರ್ಧನ್ ಅವರಿಗೆ ಜೋಡಿಯಾಗಿ ತಪಸ್ವಿನಿ ಪೂಣಚ್ಚ ನಟಿಸಿದ್ದಾರೆ.
ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಶಿಷ್ಯ ದೀಪಕ್ ಮತ್ತು ಖಳನಾಯಕನಾಗಿ ಕಬೀರ್ ಸಿಂಗ್ ಕಾಣಿಸಿಕೊಂಡಿದ್ದಾರೆ. ಹೆಚ್ಚುವರಿಯಾಗಿ, ನಟಿ ರಾಗಿಣಿ ದ್ವಿವೇದಿ ಜನಪ್ರಿಯ ಹಾಡು 'ಸಾರಾಯಿ ಶಾಂತಮ್ಮ'ದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರಕ್ಕೆ ಕೆಎಸ್ ಚಂದ್ರಶೇಖರ್ ಅವರ ಛಾಯಾಗ್ರಹಣ ಮತ್ತು ಜ್ಞಾನೇಶ್ ಬಿ ಮಠದ್ ಅವರ ಸಂಕಲನವಿದೆ. ಲೈಫ್ ಲೈನ್ ಫಿಲ್ಮ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಗಜರಾಮ ಚಿತ್ರವನ್ನು ನರಸಿಂಹ ಮೂರ್ತಿ, ಮಲ್ಲಿಕಾರ್ಜುನ ಕಾಶಿ ಮತ್ತು ಕ್ಸೇವಿಯರ್ ಫರ್ನಾಂಡಿಸ್ ನಿರ್ಮಿಸುತ್ತಿದ್ದಾರೆ.
Advertisement