KVN ಬ್ಯಾನರ್‌ನಲ್ಲಿ ಝೈದ್ ಖಾನ್ ಅಭಿನಯದ 'ಕಲ್ಟ್'

ಟಾಕ್ಸಿಕ್, ಜನ ನಾಯಗನ್ ಸಿನಿಮಾಗಳನ್ನು ನಿರ್ಮಿಸುತ್ತಿರುವ ಕೆವಿಎನ್ ಪ್ರೊಡಕ್ಷನ್ಸ್ ಕಲ್ಟ್ ಸಿನಿಮಾ ಅರ್ಪಿಸುತ್ತಿದೆ.
ಚಿತ್ರದ ಸ್ಟಿಲ್.
ಚಿತ್ರದ ಸ್ಟಿಲ್.
Updated on

ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಝೈದ್ ಖಾನ್, ರಚಿತಾ ರಾಮ್ ಹಾಗೂ ಮಲೈಕಾ ವಸುಪಾಲ್ ನಟನೆಯ ಕಲ್ಟ್ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಈ ನಡುವೆ ಚಿತ್ರದ ಕುರಿದು ಬಿಗ್ ಅಪ್‌ಡೇಟ್ ವೊಂದು ಹೊರಬಂದಿದೆ.

ಲೋಕಿ ಸಿನಿಮಾಸ್ ಲಾಂಛನದಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಇದೀಗ ಕೆವಿಎನ್ ಸಂಸ್ಥೆ ಕಲ್ಟ್ ಸಿನಿಮಾದ ಭಾಗವಾಗಿದೆ. ಟಾಕ್ಸಿಕ್, ಜನ ನಾಯಗನ್ ಸಿನಿಮಾಗಳನ್ನು ನಿರ್ಮಿಸುತ್ತಿರುವ ಕೆವಿಎನ್ ಪ್ರೊಡಕ್ಷನ್ಸ್ ಕಲ್ಟ್ ಸಿನಿಮಾ ಅರ್ಪಿಸುತ್ತಿದೆ.

ಈ ನಡುವೆ ಫೆಬ್ರವರಿ 11 ರಂದು ನಾಯಕ ಝೈದ್‌ಖಾನ್‌ ಹುಟ್ಟು ಹಬ್ಬವಾಗಿದ್ದು, ಅದೇ ದಿನದಂದು ಕಲ್ಟ್ ಚಿತ್ರದ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಜೂನ್ ತಿಂಗಳಿನಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ಅನಿಲ್ ಕುಮಾರ್ ನಿರ್ದೇಶನವಿರುವ ‘ಕಲ್ಟ್’ ಚಿತ್ರ, ಆ್ಯಕ್ಷನ್-ರೊಮ್ಯಾಂಟಿಕ್ ಜಾನರ್ ಚಿತ್ರವಾಗಿದ್ದು, ಚಿತ್ರವು ಸಾಷ್ಟು ನಿರೀಕ್ಷೆ ಹುಟ್ಟಿಸಿದೆ.

ಝೈದ್ ಖಾನ್ ನಾಯಕರಾಗಿ ನಟಿಸುತ್ತಿರುವ ಎರಡನೇ ಚಿತ್ರ ಇದಾಗಿದ್ದು, ಮಾಸ್ ಹಾಗೂ ರಗಡ್ ಆಗಿ ಮೂಡಿಬಂದಿದೆ.

ಲೋಕಿ ಸಿನಿಮಾಸ್ ಲಾಂಛನದಲ್ಲಿ ಈ ಸಿನಿಮಾ ನಿರ್ಮಾಣವಾಗಲಿದ್ದು, ರಚನೆ ಹಾಗೂ ನಿರ್ದೇಶನವನ್ನು ಅನಿಲ್ ಕುಮಾರ್ ನಿರ್ವಹಿಸಲಿದ್ದಾರೆ. ಜೆ.ಎಸ್.ವಾಲಿ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ಸಂಯೋಜನೆ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಚಿತ್ರದ ಸ್ಟಿಲ್.
ಜಮೀರ್ ಪುತ್ರನ ಚಿತ್ರಕ್ಕೆ ಸರ್ಕಾರ ಶಾಕ್: ಕಲ್ಟ್ ಸಿನಿಮಾ ಚಿತ್ರೀಕರಣಕ್ಕೆ ತಡೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com