ಮಂಗಳೂರು: 'ಕಣ್ಣೀರಿಡಬೇಡ ನಾನಿದ್ದೇನೆ'; ಅನಾರೋಗ್ಯ ಹಿನ್ನೆಲೆ ದೈವದ ಮೊರೆ ಹೋದ ತಮಿಳು ನಟ ವಿಶಾಲ್‌ಗೆ ಅಭಯ!

ಮಂಗಳೂರಿನ ಮುಲ್ಕಿ ತಾಲೂಕಿನ ಹರಿಪಾದದಲ್ಲಿನ ಜಾರಂದಾಯ ದೇವಾಲಯಕ್ಕೆ ಭೇಟಿ ನೀಡಿದ್ದ ವಿಶಾಲ್ ಆರೋಗ್ಯ ಸಮಸ್ಯೆಯನ್ನು ನಿವಾರಿಸುವಂತೆ ದೈವಕ್ಕೆ ಮಲ್ಲಿಗೆ ಹೂವು ಅರ್ಪಿಸಿ ಬೇಡಿಕೊಂಡರು.
ತಮಿಳು ನಟ ವಿಶಾಲ್
ತಮಿಳು ನಟ ವಿಶಾಲ್
Updated on

ಮಂಗಳೂರು: ಮದಗಜರಾಜ ಚಿತ್ರದ ಬಿಡುಗಡೆ ಸಮಾರಂಭದ ವೇಳೆ ವೇದಿಕೆ ಮೇಲೆ ತಮಿಳಿನ ಖ್ಯಾತ ನಟ ವಿಶಾಲ್ ತೊದಲುತ್ತ ಮಾಡನಾಡಿದ್ದು ಕೈಗಳು ನಡುಗುತ್ತಿದ್ದ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಅಲ್ಲದೆ ನಟನ ಆರೋಗ್ಯದ ಕುರಿತಂತೆ ತೀವ್ರ ಕಳವಳ ವ್ಯಕ್ತವಾಗಿತ್ತು. ಇದೀಗ ನಟ ವಿಶಾಲ್ ತುಳುನಾಡಿನ ದೈವದ ಮೊರೆ ಹೋಗಿದ್ದಾರೆ.

ಮಂಗಳೂರಿನ ಮುಲ್ಕಿ ತಾಲೂಕಿನ ಹರಿಪಾದದಲ್ಲಿನ ಜಾರಂದಾಯ ದೇವಾಲಯಕ್ಕೆ ಭೇಟಿ ನೀಡಿದ್ದ ವಿಶಾಲ್ ಆರೋಗ್ಯ ಸಮಸ್ಯೆಯನ್ನು ನಿವಾರಿಸುವಂತೆ ದೈವಕ್ಕೆ ಮಲ್ಲಿಗೆ ಹೂವು ಅರ್ಪಿಸಿ ಬೇಡಿಕೊಂಡರು. ಈ ವೇಳೆ ತುಳುನಾಡಿನ ದೈವ ಅಭಯ ನೀಡಿದ್ದು ಕಣ್ಣೀರು ಹಾಕಬೇಡ, ನಾನಿದ್ದೇನೆ. ನಿನ್ನ ಆರೋಗ್ಯ ಸರಿಯಾಗಲಿದೆ. ಗುಣಮುಖನಾಗಿ ಬಂದು ತುಲಾಭಾರ ಸೇವೆ ಅರ್ಪಿಸು ಎಂದು ದೈವ ಅಭಯ ನೀಡಿದೆ.

2012ರಲ್ಲಿ ನಿರ್ಮಾಣವಾಗಿದ್ದ ಮದಗಜರಾಜ ಚಿತ್ರ ಸುದೀರ್ಘ ವರ್ಷಗಳ ಬಳಿಕ ಇದೇ ವರ್ಷ ಬಿಡುಗಡೆಯಾಗಿದ್ದು ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿದೆ. 15 ಕೋಟಿ ರೂಪಾಯಿಯಲ್ಲಿ ನಿರ್ಮಾಣವಾಗಿದ್ದ ಚಿತ್ರ ಬರೋಬ್ಬರಿ 56 ಕೋಟಿ ಕಲೆಕ್ಷನ್ ಮಾಡಿದೆ.

ತಮಿಳು ನಟ ವಿಶಾಲ್
ಮನೆ ತುಂಬ ಹೆಣ್ಣು ಮಕ್ಕಳೇ ತುಂಬಿದ್ದಾರೆ; ವಂಶೋದ್ಧಾರಕ ಬೇಕಿತ್ತು: ನಟ ಚಿರಂಜೀವಿ ಹೇಳಿಕೆಗೆ ಆಕ್ರೋಶ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com