ಕಾರು ಅಪಘಾತವಾಗಿರುವುದು.
ಸಿನಿಮಾ ಸುದ್ದಿ
ವಿಷ್ಣುಪ್ರಿಯ ಸಿನಿಮಾ ಪ್ರಚಾರದ ವೇಳೆ ಕಾರು ಅಪಘಾತ: ನಟ ಶ್ರೆಯಸ್ ಮಂಜು ಅಪಾಯದಿಂದ ಪಾರು
‘ವಿಷ್ಣುಪ್ರಿಯಾ’ ಸಿನಿಮಾ ಪ್ರಚಾರಕ್ಕಾಗಿ ಬೆಂಂಗಳೂರಿನಿಂದ ದಾವಣಗೆರೆಗೆ ಬಿಎಂಡಬ್ಲ್ಯೂ ಕಾರಿನಲ್ಲಿ ಶ್ರೇಯಸ್ ತೆರಳುತ್ತಿದ್ದರು.
ಬೆಂಗಳೂರು: ಖ್ಯಾತ ನಿರ್ಮಾಪಕ ಕೆ ಮಂಜು ಅವರ ಪುತ್ರ ಹಾಗೂ ಸ್ಯಾಂಡಲ್‌ವುಡ್ ನಟ ಶ್ರೇಯಸ್ ಕೆ ಮಂಜು ಅವಕ ಕಾರು ಅಪಘಾತಕ್ಕೀಡಾಗಿದೆ.
‘ವಿಷ್ಣುಪ್ರಿಯಾ’ ಸಿನಿಮಾ ಪ್ರಚಾರಕ್ಕಾಗಿ ಬೆಂಂಗಳೂರಿನಿಂದ ದಾವಣಗೆರೆಗೆ ಬಿಎಂಡಬ್ಲ್ಯೂ ಕಾರಿನಲ್ಲಿ ಶ್ರೇಯಸ್ ತೆರಳುತ್ತಿದ್ದರು. ಈ ವೇಳೆ ಶಿರಾ ಬಳಿ ಕಾರು ಮತ್ತು ಲಾರಿ ಮಧ್ಯೆ ಅಪಘಾತ ನಡೆದಿದೆ ಎಂದು ತಿಳಿದುಬಂದಿದೆ.
ಓವರ್ ಟೇಕ್ ಮಾಡಲು ಬಂದ ಲಾರಿ ಶ್ರೇಯಸ್ ಅವರಿದ್ದ ಕಾರಿಗೆ ಗುದ್ದಿಕೊಂಡ ಹೋಗಿದೆ ಎನ್ನಲಾಗಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದ ಶ್ರೇಯಸ್ ಮಂಜು ಅವರಿಗೆ ಯಾವುದೇ ಹಾನಿಯಾಗಿಲ್ಲ.
ನಟ ಶ್ರೇಯಸ್ ಮಂಜು ಮತ್ತು ಪ್ರಿಯಾ ವಾರಿಯರ್ ಅಭಿನಯದ ಬಹು ನಿರೀಕ್ಷಿತ ವಿಷ್ಣುಪ್ರಿಯ ಚಿತ್ರದ ಫೆಬ್ರವರಿ 21 ರಂದು ತೆರೆಗೆ ಬರುತ್ತಿದ್ದು, ಚಿತ್ರಕ್ಕೆ ಮಲಯಾಳಂ ನಿರ್ದೇಶನ ವಿಕೆ ಪ್ರಕಾಶ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕಣ್ಸನ್ನೆ ಚೆಲುವೆ ಪ್ರಿಯಾ ವಾರಿಯರ್ ಈ ಚಿತ್ರದ ಮೂಲಕ ನಾಯಕಿಯಾಗಿ ಸ್ಯಾಂಡಲ್'ವುಡ್'ಗೆ ಪಾದಾರ್ಪಣೆ ಮಾಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ