
ನವದೆಹಲಿ: ಕನ್ನಡ ಸೇರಿದಂತೆ ಹಲವು ಭಾಷೆಗಳ ಜನಪ್ರಿಯ ಹಾಡುಗಳಿಗೆ ಧ್ವನಿ ನೀಡಿರುವ ಗಾಯಕ ಅರ್ಮಾನ್ ಮಲಿಕ್ ತಮ್ಮ ಬಹುಕಾಲದ ಗೆಳತಿ ಆಶ್ನಾ ಶ್ರಾಫ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ದಂಪತಿ ಸಾಮಾಜಿಕ ಮಾಧ್ಯಮದಲ್ಲಿ ಈ ವಿಚಾರವನ್ನು ಗುರುವಾರ ಘೋಷಿಸಿದ್ದಾರೆ.
29 ವರ್ಷದ ಮಲಿಕ್ ಮತ್ತು ಶ್ರಾಫ್ ಆಪ್ತರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಾವು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಫೋಟೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
'ತು ಹಿ ಮೇರಾ ಘರ್' ಎಂದು ಅವರು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಪೀಚ್-ಬಣ್ಣದ ಉಡುಪಿನಲ್ಲಿ ಮಲಿಕ್ ಕಂಗೊಳಿಸಿದರೆ, ಕಿತ್ತಳೆ ಬಣ್ಣದ ಲೆಹೆಂಗಾದಲ್ಲಿ ಶ್ರಾಫ್ ಮಿಂಚಿದ್ದಾರೆ.
ಫ್ಯಾಷನ್ ಇನ್ಫ್ಲೂಯನ್ಸರ್ ಆಗಿರುವ ಶ್ರಾಫ್ ಮತ್ತು ಮಲಿಕ್ 2017 ರಲ್ಲಿ ಡೇಟಿಂಗ್ ಪ್ರಾರಂಭಿಸಿದರು. 2023ರ ಆಗಸ್ಟ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆ ಸಮಯದಲ್ಲಿ, ಶ್ರಾಫ್‌ಗಾಗಿ ಮಲಿಕ್ ಅವರು 'ಕಸಂ ಸೆ: ದಿ ಪ್ರಪೋಸಲ್' ಎಂಬ ಶೀರ್ಷಿಕೆಯ ಮ್ಯೂಸಿಕ್ ವಿಡಿಯೊವನ್ನು ಬಿಡುಗಡೆ ಮಾಡಿದ್ದರು.
Advertisement