ಸಸ್ಪೆನ್ಸ್ ಥ್ರಿಲ್ಲರ್ 'ಸಮುದ್ರ ಮಂಥನ' ಚಿತ್ರಕ್ಕೆ 'ಒಂದು ಶಿಕಾರಿಯ ಕಥೆ' ಖ್ಯಾತಿಯ ಸಚಿನ್ ಶೆಟ್ಟಿ ಆ್ಯಕ್ಷನ್ ಕಟ್!

ಸದ್ಯ ಚಿತ್ರವು ಪ್ರಿ-ಪ್ರೊಡಕ್ಷನ್‌ ಹಂತದಲ್ಲಿದ್ದು, ಚಿತ್ರೀಕರಣ ಆರಂಭಿಸಲು ಸಿದ್ಧತೆ ನಡೆಸಿದೆ.
ಮಂದಾರ ಬಟ್ಟಲಹಳ್ಳಿ - ಯಶವಂತ್ ಕುಮಾರ್
ಮಂದಾರ ಬಟ್ಟಲಹಳ್ಳಿ - ಯಶವಂತ್ ಕುಮಾರ್
Updated on

2020ರಲ್ಲಿ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ 'ಒಂದು ಶಿಕಾರಿಯ ಕಥೆ' ಚಿತ್ರದ ನಿರ್ದೇಶಕ ಸಚಿನ್ ಶೆಟ್ಟಿ ಇದೀಗ 'ಸಮುದ್ರ ಮಂಥನ' ಎಂಬ ಆಸಕ್ತಿದಾಯಕ ಹೊಸ ಚಿತ್ರದೊಂದಿಗೆ ಮರಳಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಆಗಿದ್ದು, ಕಥೆಯಲ್ಲಿ ಹೊಸ ತಿರುವು ತರಲು ನಿರ್ದೇಶಕರು ಯೋಜಿಸಿದ್ದಾರೆ. ವಿಕಿಪೀಡಿಯ ಚಿತ್ರದಲ್ಲಿನ ಪಾತ್ರಕ್ಕೆ ಹೆಸರುವಾಸಿಯಾದ ಯಶವಂತ್ ಕುಮಾರ್ ಮತ್ತು ಕಳೆದ ವರ್ಷ ಬಿಡುಗಡೆಯಾದ 'ಬ್ಲಿಂಕ್‌' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಮಂದಾರ ಬಟ್ಟಲಹಳ್ಳಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮಂದಾರ ಆಚಾರ್ ಅಂಡ್ ಕೋ ಮತ್ತು ಓಲ್ಡ್ ಮಾಂಕ್‌ ಚಿತ್ರಗಳ ಭಾಗವಾಗಿದ್ದರು.

ಸದ್ಯ ಚಿತ್ರವು ಪ್ರಿ-ಪ್ರೊಡಕ್ಷನ್‌ ಹಂತದಲ್ಲಿದ್ದು, ಚಿತ್ರೀಕರಣ ಆರಂಭಿಸಲು ಸಿದ್ಧತೆ ನಡೆಸಿದೆ. ನಿರ್ದೇಶಕ ಮತ್ತು ಬರಹಗಾರ ಸಚಿನ್ ಶೆಟ್ಟಿ ಮಾತನಾಡಿ, 'ಈ ಸಸ್ಪೆನ್ಸ್-ಥ್ರಿಲ್ಲರ್ ಕರಾವಳಿಯ ಹಿನ್ನೆಲೆಯಲ್ಲಿ ನಡೆಯುತ್ತದೆ ಮತ್ತು ವಿಶಿಷ್ಟ ನಿರೂಪಣೆಯಿದೆ. ಮನರಂಜನೆಯು ನಿರಂತರವಾಗಿ ವಿಕಸನಗೊಳ್ಳುತ್ತಿರುವ ಈ ಸಮಯದಲ್ಲಿ, ಪ್ರೇಕ್ಷಕರು ಆಳವಾದ ಮತ್ತು ಉತ್ತಮ ಕಥೆಗಳನ್ನು ಹುಡುಕುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು, ನಾವು ಶ್ರೀಮಂತ ಮತ್ತು ಆಕರ್ಷಕವಾದ ಕಥೆಯನ್ನು ಹೆಣೆಯಲು ವರ್ಷಗಳನ್ನು ತೆಗೆದುಕೊಂಡಿದ್ದೇವೆ ಮತ್ತು ಈಗ ನಾವು ಅದನ್ನು ಜೀವಂತಗೊಳಿಸಲು ಸಿದ್ಧರಿದ್ದೇವೆ' ಎಂದರು.

ನಟ ಯಶವಂತ್ ಮಾತನಾಡಿ, 'ನನ್ನ ಚೊಚ್ಚಲ 'ವಿಕಿಪೀಡಿಯ' ಚಿತ್ರವು ನಾನು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಸಹಾಯ ಮಾಡಿತು. 'ಸಮುದ್ರ ಮಂಥನ' ಚಿತ್ರವು ನನ್ನ ವೃತ್ತಿ ಜೀವನದಲ್ಲಿ ನಿರ್ಣಾಯಕ ಸಿನಿಮಾವಾಗಲಿದೆ ಎಂದು ನಾನು ನಂಬುತ್ತೇನೆ. ಈ ಚಿತ್ರವು ಮನರಂಜನೆ ಮಾತ್ರವಲ್ಲದೆ ಚಿಂತನೆಯನ್ನು ಕೆರಳಿಸುತ್ತದೆ' ಎಂದರು.

ಎ ಸ್ಕ್ವೇರ್ ಪಿಕ್ಚರ್ಸ್ ಮತ್ತು ಆರುಷ್ ಪಿಕ್ಚರ್ಸ್ ಸಹಭಾಗಿತ್ವದಲ್ಲಿ ರಫ್ ಕಟ್ ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com