ಆರ್ ಆರ್ ವೆಟ್ರಿ ವೇಲ್ ನಿರ್ದೇಶನದ 'VK 30' ಚಿತ್ರದಲ್ಲಿ ನಟ ದುನಿಯಾ ವಿಜಯ್; ಕೆಪಿ ಶ್ರೀಕಾಂತ್ ನಿರ್ಮಾಪಕ

ದುನಿಯಾ ವಿಜಯ್ ಅವರ ಭೀಮ ಚಿತ್ರದಲ್ಲಿ ಸಹ ನಿರ್ದೇಶಕರಾಗಿದ್ದ ಮಹೇಶ್ ಅವರು ವೆಟ್ರಿ ವೇಲ್ ಎಂದು ಹೆಸರು ಬದಲಿಸಿಕೊಂಡಿದ್ದಾರೆ.
ವಿಕೆ 30 ಪೋಸ್ಟರ್ - ದುನಿಯಾ ವಿಜಯ್
ವಿಕೆ 30 ಪೋಸ್ಟರ್ - ದುನಿಯಾ ವಿಜಯ್
Updated on

ಕೊನೆಯದಾಗಿ ಭೀಮ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ನಟ ದುನಿಯಾ ವಿಜಯ್ ಇದೀಗ ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೊಸ ಸಿನಿಮಾಗಾಗಿ ಸಲಗ ಚಿತ್ರದ ನಂತರ ಕೆಪಿ ಶ್ರೀಕಾಂತ್ ಜೊತೆಗೆ ಕೈಜೋಡಿಸುತ್ತಿದ್ದು, ಚಿತ್ರಕ್ಕೆ 'VK 30' ಎಂದು ತಾತ್ಕಾಲಿಕವಾಗಿ ಹೆಸರಿಡಲಾಗಿದೆ. ವಿಶೇಷ ಅಂದ್ರೆ ಈ ಚಿತ್ರಕ್ಕೆ ತಂಬಿ ಎಂದೇ ಹೆಸರಾದ ಆರ್ ಆರ್ ವೆಟ್ರಿ ವೇಲ್ ಅವರು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರವನ್ನು ಕೆಪಿ ಶ್ರೀಕಾಂತ್ ನಿರ್ಮಿಸುತ್ತಿದ್ದಾರೆ.

ನಟ ವಿಜಯ್ ಸಲಗ ಚಿತ್ರವನ್ನು ನಿರ್ದೇಶಿಸಿದ್ದರು. ಆದರೆ, ಈ ಬಾರಿ ಅವರು ನಟನೆಯ ಮೇಲೆ ಮಾತ್ರ ಗಮನ ಹರಿಸುತ್ತಿದ್ದು, ತಂಬಿಗೆ ನಿರ್ದೇಶನದ ಜವಾಬ್ದಾರಿಯನ್ನು ನೀಡಲಾಗಿದೆ. ದುನಿಯಾ ವಿಜಯ್ ಅವರ ಭೀಮ ಚಿತ್ರದಲ್ಲಿ ಸಹ ನಿರ್ದೇಶಕರಾಗಿದ್ದ ಮಹೇಶ್ ಅವರು ವೆಟ್ರಿ ವೇಲ್ ಎಂದು ಹೆಸರು ಬದಲಿಸಿಕೊಂಡಿದ್ದಾರೆ.

ವೀನಸ್ ಎಂಟರ್‌ಟೈನರ್ಸ್ ಬ್ಯಾನರ್‌ನಡಿಯಲ್ಲಿ ಗೀತಾ ಶಿವರಾಜ್‌ಕುಮಾರ್ ಬೆಂಬಲದೊಂದಿಗೆ 'ವಿಕೆ 30' ನಿರ್ಮಾಣವಾಗುತ್ತಿದೆ. ದುನಿಯಾ ವಿಜಯ್ ಹುಟ್ಟುಹಬ್ಬದಂದು ಚಿತ್ರದ ಪೋಸ್ಟರ್ ರಿಲೀಸ್ ಮಾಡಲಾಗಿದ್ದು, ಚಿತ್ರಕ್ಕಾಗಿ ಸಲಗ ಮತ್ತು ಭೀಮ ಚಿತ್ರತಂಡ ಒಂದಾಗಿದೆ. ಚಿತ್ರಕ್ಕೆ ಚರಣ್ ರಾಜ್ ಅವರ ಸಂಗೀತ, ಮಾಸ್ತಿ ಅವರ ಸಂಭಾಷಣೆ ಮತ್ತು ಶಿವಸೇನಾ ಅವರ ಛಾಯಾಗ್ರಹಣವಿದೆ.

ವಿಕೆ 30 ಪೋಸ್ಟರ್ - ದುನಿಯಾ ವಿಜಯ್
ವಿಜಯ್ ಕುಮಾರ್- ಜಡೇಶಾ ಹಂಪಿ ಕಾಂಬಿನೇಷನ್ 'ವಿಕೆ-29' ಪೋಸ್ಟರ್ ಬಿಡುಗಡೆ

ಸದ್ಯ, ವಿಜಯ್ ಕುಮಾರ್ ಅವರು ನಿರ್ದೇಶಕ ಜಡೇಶಾ ಕೆ ಹಂಪಿ ಅವರೊಂದಿಗೆ ಲ್ಯಾಂಡ್ ಲಾರ್ಡ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದಲ್ಲಿ ವಿಜಯ್ ರಾಚಯ್ಯನ ಪಾತ್ರದಲ್ಲಿ ನಟಿಸಿದ್ದು, ರಚಿತಾ ರಾಮ್ ಮತ್ತು ರಾಜ್ ಬಿ ಶೆಟ್ಟಿ ಜೊತೆ ತೆರೆ ಹಂಚಿಕೊಂಡಿದ್ದಾರೆ. ಇದು ಮುಗಿದ ನಂತರ ವಿಜಯ್ ಅವರು ವಿಕೆ 30 ಚಿತ್ರೀಕರಣವನ್ನು ಪ್ರಾರಂಭಿಸುತ್ತಾರೆ.

ವಿಕೆ 30 ಚಿತ್ರದ ಪೋಸ್ಟರ್
ವಿಕೆ 30 ಚಿತ್ರದ ಪೋಸ್ಟರ್

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com