
1980, ನಗುವಿನ ಹೂಗಳೇ, ಕೃಷ್ಣಂ ಪ್ರಣಯ ಸಖಿ, ಮತ್ತು ಫಾರೆಸ್ಟ್‌ನಂತಹ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಗಳಿಸಿರುವ ನಟಿ ಶರಣ್ಯ ಶೆಟ್ಟಿ ಅವರು, ನಾಯಕ ನಟಿಯಾಗಿ ಸ್ಯಾಂಡಲ್‌ವುಡ್‌ಗೆ ಕಾಲಿಡಲು ಸಜ್ಜಾಗಿದ್ದಾರೆ.
ಚಿತ್ರದಲ್ಲಿ ನೆನಪಿರಲಿ ಪ್ರೇಮ್ ಅವರು ನಾಯಕ ನಟನಾಗಿ ನಟಿಸುತ್ತಿದ್ದು, ಈ ಮೂಲಕ ಚಿತ್ರರಂಗಕ್ಕೆ ಕಮ್'ಬ್ಯಾಕ್ ಆಗುತ್ತಿದ್ದಾರೆ. ಚಿತ್ರದಲ್ಲಿ ಶರಣ್ಯ ಅವರು ಪ್ರೇಮ್ ಅವರಿಗೆ ಜೋಡಿಯಾಗಿ ಹಾಗೂ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಕಥೆ ಹಾಗೂ ನಿರ್ದೇಶನವನ್ನು ತೇಜಲ್ ಅವರು ಮಾಡಿದ್ದು, ಚಿತ್ರವು ಫೆಬ್ರವರಿಯಲ್ಲಿ ತೆರೆಗೆ ಬರಲು ಸಜ್ಜಾಗಿದೆ.
ಚಿತ್ರದಲ್ಲಿ ನಾಯಕ ನಟಿಯಾಗಿ ನಟಿಸಿರುವ ಶರಣ್ಯಾ ಅವರು ಚಿತ್ರ ಬಿಡುಗಡೆಗೆ ಕಾತುರರಾಗಿದ್ದಾರೆ. ಪಾತ್ರದ ಬಗ್ಗೆ ಉತ್ಸುಕಳಾಗಿದ್ದೇನೆ. ಇದೂವರೆಗೂ ಮಾಡಿದ ಪಾತ್ರಗಳಿಗಿಂತ ಈ ಚಿತ್ರದಲ್ಲಿ ಮಾಡಿರುವ ಪಾತ್ರ ವಿಭಿನ್ನವಾಗಿದೆ. ಚಿತ್ರದಲ್ಲಿ ನಾಯಕ ನಟಿಯಾಗಿದ್ದೇನೆ. ಹೊಸ ಭಾಷೆ ಕಲಿಯಲು ಅಗತ್ಯವಿರುವ ಪಾತ್ರವಾಗಿದೆ. ನಾಯಕ ನಟಿಯಾಗಬೇಕೆಂಬ ಬಯಕೆ ಇತ್ತು. ಆದರೆ, ಟೈಪ್‌ಕಾಸ್ಟ್ ಆಗಲು ಎಂದಿಗೂ ಬಯಸಲಿಲ್ಲ. ಯಾವಾಗಲೂ ವಿಭಿನ್ನ ಪಾತ್ರ ಮಾಡಲು ಬಯಸುತ್ತೇನೆಂದು ನಟಿ ಶರಣ್ಯಾ ಅವರು ಹೇಳಿದ್ದಾರೆ.
ಗೀತಾಂಜಲಿ ಬಿ ಎಸ್ ಅವರ ಪೆಂಟ್ರಿಕ್ ಎಂಟರ್‌ಟೈನ್‌ಮೆಂಟ್ಸ್ ನಿರ್ಮಾಣದ ಇನ್ನೂ ಹೆಸರಿಡದ ಈ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸಂಯೋಜಕರಾಗಿ ಮತ್ತು ಆನಂದ್ ಮೀನಾಕ್ಷಿ ಡಿಒಪಿಯಾಗಿದ್ದಾರೆ.
ಪ್ರೇಮ್ ಅವರೊಂದಿನ ಚಿತ್ರದ ಜೊತೆಗೆ ಟಾಲಿವುಡ್ ಚಿತ್ರವೊಂದಕ್ಕೂ ಶರಣ್ಯಾ ಅವರು ಸಹಿ ಹಾಕಿದ್ದು, ವಿಶ್ವಕ್ ಸೇನ್ ಜೊತೆ ನಟಿಸಲು ಸಜ್ಜಾಗಿದ್ದಾರೆ. ಚಿತ್ರದ ಬಗ್ಗೆ ಇನ್ನೂ ಮಾಹಿತಿ ಬಹಿರಂಗಗೊಂಡಿಲ್ಲ. ಚಿತ್ರೀಕರಣ ಆರಂಭವಾದ ಬಳಿಕ ಮತ್ತಷ್ಟು ಮಾಹಿತಿ ಹಂಚಿಕೊಳ್ಳಲಾಗುವುದು ಎಂದು ಶರಣ್ಯಾ ಅವರು ತಿಳಿಸಿದ್ದಾರೆ.
Advertisement