ರಿಷಿ ಅಭಿನಯದ 'ರುದ್ರ ಗರುಡ ಪುರಾಣ'ದ ತೆಲುಗು ಡಬ್ಬಿಂಗ್ ರೈಟ್ಸ್ ಭಾರಿ ಬೆಲೆಗೆ ಮಾರಾಟ!

ಪ್ರಿಯಾಂಕಾ ಕುಮಾರ್ ನಾಯಕಿ
A still from Rudra Garuda Purana
ರುದ್ರ ಗರುಡ ಪುರಾಣ ಸಿನಿಮಾ ಸ್ಟಿಲ್
Updated on

ನಟ ರಿಷಿ ಅಭಿನಯದ 'ರುದ್ರ ಗರುಡ ಪುರಾಣ' ಬಿಡುಗಡೆಯಾಗಿ ಸುಮಾರು ಒಂದು ವಾರ ಕಳೆದಿದೆ. ದಿನದಿಂದ ದಿನಕ್ಕೆ ಸ್ಕ್ರೀನ್ ಸಂಖ್ಯೆ ಹೆಚ್ಚುತ್ತಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಚಿತ್ರದ ಈ ಯಶಸ್ಸನ್ನು ಆಚರಿಸಲು ಚಿತ್ರತಂಡ ಇತ್ತೀಚೆಗೆ ಒಂದೆಡೆ ಸೇರಿತ್ತು.

ನಿರ್ಮಾಪಕ ಲೋಹಿತ್ ಮಾತನಾಡಿ, 'ಈ ಚಿತ್ರವನ್ನು ಸಾಕಷ್ಟು ಉತ್ಸಾಹದಿಂದ ಮಾಡಲಾಗಿದೆ ಮತ್ತು ಇದು ಪ್ರೇಕ್ಷಕರಿಗೆ ಇಷ್ಟವಾಗಿರುವುದನ್ನು ನೋಡುವುದು ನಿಜವಾಗಿಯೂ ಲಾಭದಾಯಕವಾಗಿದೆ. ಹೆಚ್ಚುತ್ತಿರುವ ಥಿಯೇಟರ್‌ಗಳ ಸಂಖ್ಯೆ ಅದರ ಯಶಸ್ಸಿಗೆ ಸಾಕ್ಷಿಯಾಗಿದೆ' ಎನ್ನುತ್ತಾರೆ.

ನಿರ್ದೇಶಕ ನಂದೀಶ್ ಮಾತನಾಡಿ, ಈ ಚಿತ್ರದ ಯಶಸ್ಸಿಗೆ ಸಾಮೂಹಿಕ ಪ್ರಯತ್ನವೇ ಕಾರಣವಾಗಿದೆ. ಪ್ರತಿಯೊಬ್ಬ ನಟ ಮತ್ತು ತಂತ್ರಜ್ಞರು ಈ ಯೋಜನೆಗಾಗಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಮಾಧ್ಯಮಗಳ ಬೆಂಬಲ ಮತ್ತು ಪ್ರೇಕ್ಷಕರ ಮೆಚ್ಚುಗೆಯ ಮಾತುಗಳು ಈ ಪ್ರಯಾಣಕ್ಕೆ ಸಹಕಾರಿಯಾಗಿದೆ' ಎಂದು ಹೇಳಿದರು.

ನಟ ರಿಷಿ, ತಮ್ಮ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು. 'ಚಿತ್ರವನ್ನು ವಿಮರ್ಶಿಸಿದ ವಿಮರ್ಷಕರಿಗೆ ನಾನು ಮೊದಲು ಧನ್ಯವಾದ ಹೇಳಲು ಬಯಸುತ್ತೇನೆ. ಅವರ ಮಾತುಗಳು ಹೆಚ್ಚು ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಸೆಳೆದಿವೆ. ಚಿತ್ರ ಬಿಡುಗಡೆಯಾದ ಐದು ದಿನಗಳಲ್ಲಿ, ಹೆಚ್ಚಿನ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ ಮತ್ತು ಈಗ ತೆಲುಗು ಡಬ್ಬಿಂಗ್ ಹಕ್ಕು ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಿದೆ' ಎಂದರು.

A still from Rudra Garuda Purana
'ರುದ್ರ ಗರುಡ ಪುರಾಣ' ಕಥೆಯು 17ಎ ಕಾವೇರಿ ಎಕ್ಸ್‌ಪ್ರೆಸ್ ಬಸ್‌ನೊಂದಿಗೆ ಸಂಪರ್ಕ ಹೊಂದಿದೆ: ನಿರ್ದೇಶಕ ಕೆಎಸ್ ನಂದೀಶ್

ರುದ್ರ ಗರುಡ ಪುರಾಣದಲ್ಲಿ ರಿಷಿ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ರಾಜಕಾರಣಿಯ ಮಗನ ನಿಗೂಢ ಕಣ್ಮರೆಯ ತನಿಖೆಗೆ ಸಂಬಂಧಿಸಿದೆ. ಈ ಚಿತ್ರ 1955 ರಲ್ಲಿ ಇದ್ದಕ್ಕಿಂದ್ದಂತೆ ಕಣ್ಮರೆಯಾಗಿ, ಮೂರು ದಶಕಗಳ ನಂತರ ಮತ್ತೆ ಕಾಣಿಸಿಕೊಂಡ Pan Am Flight 914 ನಿಂದ ಸ್ಫೂರ್ತಿ ಪಡೆದಿದೆ. ಪ್ರಿಯಾಂಕಾ ಕುಮಾರ್ ನಾಯಕಿಯಾಗಿ ನಟಿಸಿದ್ದರೆ, ಶಿವರಾಜ್ ಕೆಆರ್ ಪೇಟೆ, ಗಿರೀಶ್ ಶಿವಣ್ಣ, ವಿನೋದ್ ಆಳ್ವಾ ಮತ್ತು ಅವಿನಾಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಚಿತ್ರಕ್ಕೆ ಸಂದೀಪ್ ಕುಮಾರ್ ಅವರ ಛಾಯಾಗ್ರಹಣ, ಮನು ಶೇಡಗಾರ್ ಅವರ ಸಂಕಲನವಿದ್ದು, ರಘು ನಿಡುವಳ್ಳಿ ಅವರು ಸಂಭಾಷಣೆ ಬರೆದಿದ್ದಾರೆ. ಸಂಭ್ರಮಾಚರಣೆಗೆ ಪೂರಕವಾಗಿ, ತಂದೆ-ಮಗನ ಬಾಂಧವ್ಯವನ್ನು ಎತ್ತಿ ತೋರಿಸುವ ವಿಶೇಷ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com