
ಪ್ರೇಮ್ ನಿರ್ದೇಶನದ ಮತ್ತು ಧ್ರುವ ಸರ್ಜಾ ನಟಿಸಿರುವ ಬಹು ನಿರೀಕ್ಷಿತ ಕೆಡಿ- ದಿ ಡೆವಿಲ್ ಚಿತ್ರ ಈಗಾಗಲೇ ವ್ಯಾಪಕ ನಿರೀಕ್ಷೆ ಮೂಡಿಸಿದೆ. ಕೆವಿಎನ್ ಪ್ರೊಡಕ್ಷನ್ಸ್ ಬೆಂಬಲದೊಂದಿಗೆ, ಚಿತ್ರದ ಬಿಡುಗಡೆ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಇದೀಗ ಹೊಸ ಸುದ್ದಿಯೊಂದು ಕೇಳಿಬಂದಿದೆ. ಚಿತ್ರತಂಡ ಸದ್ಯ ಒಂದು ಪ್ರಮುಖ ಸನ್ನಿವೇಶವನ್ನು ಚಿತ್ರೀಕರಿಸಲು ಸಿದ್ಧವಾಗುತ್ತಿದ್ದು, ಅಚ್ಚರಿಯ ವಿಚಾರವೊಂದು ಕೇಳಿಬರುತ್ತಿದೆ.
ಇತ್ತೀಚಿನ ವರದಿಗಳ ಪ್ರಕಾರ, ಕೆಡಿ ಚಿತ್ರದಲ್ಲಿ ಸುದೀಪ್ ಅವರನ್ನು ಮಹತ್ವದ ಪಾತ್ರಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಚಿತ್ರದಲ್ಲಿ ನಟ ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ದತ್ ಮತ್ತು ಶಿಲ್ಪಾ ಶೆಟ್ಟಿ ಅವರಂತಹ ಪಾತ್ರವರ್ಗವನ್ನು ಹೊಂದಿದ್ದು, ಇದೀಗ ಚಿತ್ರದ ತಾರಾಗಣಕ್ಕೆ ಮತ್ತಷ್ಟು ತಾರಾ ಮೆರುಗು ಸೇರಿದೆ. ನಟಿ ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸಿದ್ದಾರೆ.
ಈ ಹಿಂದೆ ಕೆಡಿ ಚಿತ್ರದಲ್ಲಿ ಶಿವರಾಜ್‌ಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದ್ದವು. ಆದರೆ, ಚಿತ್ರತಂಡ ಸುದೀಪ್ ಅವರನ್ನು ಆ ಪಾತ್ರಕ್ಕೆ ಅಂತಿಮಗೊಳಿಸಿದ್ದಾರೆ ಎನ್ನಲಾಗಿದೆ. ಅವರ ಪಾತ್ರದ ವಿವರಗಳನ್ನು ಗೌಪ್ಯವಾಗಿಡಲಾಗಿದ್ದು, ಈ ತಿಂಗಳ ಕೊನೆಯಲ್ಲಿ ಅವರು ಚಿತ್ರೀಕರಣಕ್ಕೆ ಸೇರುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಶಿವರಾಜ್‌ಕುಮಾರ್ ನಟಿಸಿದ 'ದಿ ವಿಲನ್' ಚಿತ್ರದಲ್ಲಿ ಕೊನೆಯ ಬಾರಿಗೆ ಒಟ್ಟಿಗೆ ಕೆಲಸ ಮಾಡಿದ್ದ ಪ್ರೇಮ್ ಮತ್ತು ಸುದೀಪ್ ಇದೀಗ ಕೆಡಿ ಚಿತ್ರದ ಮೂಲಕ ಒಂದಾಗುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್‌ನೊಂದಿಗೆ ಸುದೀಪ್ ಅವರ ಮೊದಲ ಚಿತ್ರ 'ಕೆಡಿ' ಆಗಲಿದೆ.
ವೆಂಕಟ್ ಕೆ ನಾರಾಯಣ ನಿರ್ಮಿಸಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದು, ವಿಲಿಯಂ ಡೇವಿಡ್ ಅವರ ಛಾಯಾಗ್ರಹಣ ಮತ್ತು ಮತ್ತು ಶ್ರೀನಿವಾಸ್ ಪಿ ಪ್ರಭು ಅವರ ಸಂಕಲನವಿದೆ. ಕೆಡಿ- ದಿ ಡೆವಿಲ್ ಚಿತ್ರವು ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗುವ ಗುರಿ ಹೊಂದಿದೆ.
ಜುಲೈ 10 ರಿಂದ ಐದು ರಾಜ್ಯಗಳಲ್ಲಿ ಕೆಡಿ ಟೀಸರ್ ಬಿಡುಗಡೆ
ನಿರ್ದೇಶಕ ಪ್ರೇಮ್ ಅವರ ಕೆಡಿ - ದಿ ಡೆವಿಲ್ ಚಿತ್ರವು ಬಹುಭಾಷೆಗಳಲ್ಲಿ ಬಿಡುಗಡೆ ಆಗಲಿದ್ದು, ಚಿತ್ರತಂಡ ಐದು ರಾಜ್ಯಗಳಲ್ಲಿ ಚಿತ್ರದ ಟೀಸರ್ ಬಿಡುಗಡೆ ಮಾಡಲಿದೆ. ಪ್ರಚಾರ ಪ್ರವಾಸವು ಜುಲೈ 10 ರಂದು ಮುಂಬೈ ಮತ್ತು ಹೈದರಾಬಾದ್ ಮೂಲಕ ಪ್ರಾರಂಭವಾಗುತ್ತದೆ. ನಂತರ ಚೆನ್ನೈ ಮತ್ತು ಕೇರಳದ ಸ್ಥಳಗಳಲ್ಲಿ ಪ್ರಾರಂಭವಾಗುತ್ತದೆ ಮತ್ತು ಬೆಂಗಳೂರಿನಲ್ಲಿ ಮುಕ್ತಾಯಗೊಳ್ಳುತ್ತದೆ. ಚಿತ್ರದ ಇಡೀ ಪಾತ್ರವರ್ಗ ಮತ್ತು ಸಿಬ್ಬಂದಿ ಈ ಕಾರ್ಯಕ್ರಮಗಳಲ್ಲಿ ಹಾಜರಿರುತ್ತಾರೆ ಎಂದು ನಿರೀಕ್ಷಿಸಲಾಗಿದೆ.
ನಿಜ ಜೀವನದ ಘಟನೆಗಳಿಂದ ಪ್ರೇರಿತವಾದ ಈ ಚಿತ್ರವು 1970 ಮತ್ತು 80 ರ ದಶಕದ ಹಳೆಯ ಬೆಂಗಳೂರಿನ ಹಿನ್ನೆಲೆಯಲ್ಲಿ ಸಾಗುತ್ತದೆ.
Advertisement