'ಕೆಡಿ' ಚಿತ್ರ ಬಿಡುಗಡೆಗೆ ತಡ ಮಾಡಲ್ಲ, ಆಗಸ್ಟ್‌ನಲ್ಲಿ ತೆರೆಗೆ: ನಿರ್ದೇಶಕ ಪ್ರೇಮ್

ಇನ್ನು ಮುಂದೆ ಚಿತ್ರ ಬಿಡುಗಡೆಯಲ್ಲಿ ಯಾವುದೇ ವಿಳಂಬವಾಗುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ. ಚಿತ್ರ ಈ ವರ್ಷದ ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿದೆ.
ಕೆಡಿ- ದಿ ಡೆವಿಲ್ ಚಿತ್ರತಂಡ
ಕೆಡಿ- ದಿ ಡೆವಿಲ್ ಚಿತ್ರತಂಡ
Updated on

ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ರವಿಚಂದ್ರನ್, ರಮೇಶ್ ಅರವಿಂದ್ ಮತ್ತು ಬಾಲಿವುಡ್ ತಾರೆಯರಾದ ಸಂಜಯ್ ದತ್ ಮತ್ತು ಶಿಲ್ಪಾ ಶೆಟ್ಟಿ ನಟಿಸಿರುವ ನಿರ್ದೇಶಕ ಪ್ರೇಮ್ ಅವರ 'ಕೆಡಿ' ಚಿತ್ರವು ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ, ಕಾರಣಾಂತರಗಳಿಂದ ವಿಳಂಬವಾಗಿದ್ದು, ಇನ್ಮುಂದೆ ಯಾವುದೇ ಕಾರಣಕ್ಕೂ ಚಿತ್ರ ಬಿಡುಗಡೆಗೆ ತಡ ಮಾಡುವುದಿಲ್ಲ ಎಂದು ನಿರ್ದೇಶಕ ಪ್ರೇಮ್ ತಿಳಿಸಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸಿರುವ ಬಹುಭಾಷಾ ಚಿತ್ರವು ಈಗ ಆಗಸ್ಟ್‌ನಲ್ಲಿ ಬಿಡುಗಡೆಯಾಗುವ ಗುರಿಯನ್ನು ಹೊಂದಿದೆ. 'ಸೆಟ್ಟಾಗಲ್ಲ ಹೋಗೇ ನಂಗು ನಿಂಗು' ಎಂಬ ಹಾಡು ಬಿಡುಗಡೆ ಸಮಾರಂಭದಲ್ಲಿ ಪ್ರೇಮ್ ಅವರೇ ಈ ಅಪ್‌ಡೇಟ್ ನೀಡಿದ್ದಾರೆ.

'ಇನ್ನು ಮುಂದೆ ಚಿತ್ರ ಬಿಡುಗಡೆಯಲ್ಲಿ ಯಾವುದೇ ವಿಳಂಬವಾಗುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ. ಚಿತ್ರ ಈ ವರ್ಷದ ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿದೆ. 'ಸೆಟ್ಟಾಗಲ್ಲ ಹೋಗೆ ನಂಗು ನಿಂಗು' ಹಾಡಿನ ಅಂತಿಮ ದೃಶ್ಯಗಳನ್ನು ಹೊರತುಪಡಿಸಿ ಉಳಿದೆಲ್ಲ ಚಿತ್ರೀಕರಣ ಪೂರ್ಣಗೊಂಡಿದೆ' ಎಂದರು. ಧ್ರುವ ಸರ್ಜಾ ಪಾತ್ರದ ಸುತ್ತ ಕೇಂದ್ರೀಕೃತವಾಗಿರುವ ಕೆಡಿ ಚಿತ್ರದ ಭಾವನಾತ್ಮಕ ಕಥಾಹಂದರವು 70 ಮತ್ತು 80ರ ದಶಕದ ರೆಟ್ರೋ ಹಿನ್ನೆಲೆಯಲ್ಲಿ ಮೂಡಿಬಂದಿದೆ.

'ಈ ಅವಧಿಯ ಸನ್ನಿವೇಶದಲ್ಲಿ ಚಿತ್ರೀಕರಣ ನಡೆಸುವುದು ಸುಲಭವಾಗಿರಲಿಲ್ಲ. ನಾವು ಹೆಚ್ಚುವರಿ ಕಾಳಜಿ ವಹಿಸಿದ್ದೇವೆ. ಆ ಕಾಲದ ಭಾವನೆಗೆ ಸರಿಹೊಂದಿಸಲು 'ಸೆಟ್ಟಾಗಲ್ಲ ಹೋಗೆ...' ಹಾಡಿನ ಒಂದು ಭಾಗವನ್ನು ಆಮ್ಸ್ಟರ್‌ಡ್ಯಾಮ್‌ನಲ್ಲಿ ಚಿತ್ರೀಕರಿಸಿದ್ದೇವೆ. ಇದಲ್ಲದೆ, ನಾವು ಚಿತ್ರಕ್ಕಾಗಿ ಹಲವಾರು ಸೆಟ್‌ಗಳನ್ನು ನಿರ್ಮಿಸಿದ್ದೇವೆ' ಎಂದರು.

'ಸೆಟ್ಟಾಗಲ್ಲ ಹೋಗೆ...' ಹಾಡು ಈಗಾಗಲೇ ಅಭಿಮಾನಿಗಳ ಮೆಚ್ಚುಗೆ ಗಳಿಸಿದೆ. ನಿರ್ದೇಶಕ ಪ್ರೇಮ್, ಹಾಡಿನ ಹುಕ್ ಸ್ಟೆಪ್‌ಗಳನ್ನು ಆಯ್ಕೆ ಮಾಡಲು ಪ್ರೇಕ್ಷಕರಿಗೆ ಅವಕಾಶ ನೀಡಿದ್ದಾರೆ. ಅತ್ಯುತ್ತಮವಾದದ್ದನ್ನು ಅಧಿಕೃತ ಮ್ಯೂಸಿಕ್ ವಿಡಿಯೋದಲ್ಲಿ ಸೇರಿಸಲಾಗುವುದು. ಇದನ್ನು ಆಮ್ಸ್ಟರ್‌ಡ್ಯಾಮ್‌ನಲ್ಲಿ ಚಿತ್ರೀಕರಿಸಲಾಗುವುದು. ಸ್ಪರ್ಧೆಯ ವಿಜೇತರನ್ನು ಹಾಡಿನ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಗೌರವಿಸಲಾಗುತ್ತದೆ.

ಕೆಡಿ- ದಿ ಡೆವಿಲ್ ಚಿತ್ರತಂಡ
ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ನಟನೆಯ 'ಕೆಡಿ- ದಿ ಡೆವಿಲ್' ಚಿತ್ರದಲ್ಲಿ ಶಿವರಾಜಕುಮಾರ್ ಪಾತ್ರ!

ಚಿತ್ರದ ಮೊದಲ ಹಾಡು 'ಶಿವ ಶಿವ' ಈಗಾಗಲೇ ಭರ್ಜರಿ ವೀಕ್ಷಣೆಗಳನ್ನು ಪಡೆದಿದ್ದು, ಪ್ರೇಕ್ಷಕರ ಇಷ್ಟದ ಹಾಡುಗಳಲ್ಲಿ ಒಂದಾಗಿದೆ. ಪ್ರೇಮ್ ಬರೆದು, ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ ಸೆಟ್ಟಾಗಲ್ಲ ಹೋಗೆ ಹಾಡು ಕೂಡ ಪ್ರೇಕ್ಷಕರಿಗೆ ಇಷ್ಟವಾಗಲಿದೆ. ಬಹು ಭಾಷೆಗಳಲ್ಲಿ ಈ ಟ್ರ್ಯಾಕ್‌ ರೆಕಾರ್ಡ್ ಮಾಡಲಾಗಿದ್ದು, ವೈವಿಧ್ಯಮಯ ಪ್ರೇಕ್ಷಕರನ್ನು ಆಕರ್ಷಿಸುತ್ತದೆ. ಆನಂದ್ ಆಡಿಯೋದ ಮುಖ್ಯಸ್ಥ ಶ್ಯಾಮ್ ಹಾಡನ್ನು ಕೇಳಿದ ನಂತರ ಹುಕ್ ಸ್ಟೆಪ್‌ಗಳಿಗೆ ಪ್ರೇಕ್ಷಕರು ಭಾಗವಹಿಸಲಿ ಎಂದು ಸೂಚಿಸಿದರು ಎಂದು ಪ್ರೇಮ್ ಹೇಳಿದ್ದಾರೆ.

ಸಂಗೀತ ಸಂಯೋಜಕ ಅರ್ಜುನ್ ಜನ್ಯ, ಈ ಹಾಡಿಗೆ ರಾಗವು ಹೇಗೆ ಬಂದಿತು ಎಂಬುದನ್ನು ಹಂಚಿಕೊಂಡರು, ಈ ಪ್ರಕ್ರಿಯೆಯನ್ನು 'ದೈವಿಕ' ಎಂದು ಕರೆದರು.

'ಶಿವ ಶಿವ' ಹಾಡಿನ ಯಶಸ್ಸಿಗೆ ಧನ್ಯವಾದ ಹೇಳಿದ ಧ್ರುವ ಸರ್ಜಾ, 40 ಮಿಲಿಯನ್ ವೀಕ್ಷಣೆ ಮತ್ತು 6 ಲಕ್ಷ ರೀಲ್‌ಗಳನ್ನು ಮಾಡಲಾಗಿದೆ. ಅಭಿಮಾನಿಗಳ ಬೆಂಬಲಕ್ಕೆ ಧನ್ಯವಾದಗಳು. 'ನಿಜವಾದ ನಾಯಕ ನಿರ್ದೇಶಕ ಪ್ರೇಮ್' ಎಂದರು. ರೀಷ್ಮಾ, 'ಧ್ರುವ ಸರ್ಜಾ ಜೊತೆ ನೃತ್ಯ ಮಾಡುವಾಗ ನಾನು ತುಂಬಾ ಜಾಗರೂಕರಾಗಿರಬೇಕು!' ಎಂದು ಹೇಳುತ್ತಾರೆ.

ಯಶ್ ಅಭಿನಯದ ಟಾಕ್ಸಿಕ್ ಮತ್ತು ವಿಜಯ್ ಅಭಿನಯದ ಜನ ನಾಯಗನ್ ನಂತಹ ಇತರ ಗಮನಾರ್ಹ ಯೋಜನೆಗಳಿಗೆ ಬಂಡವಾಳ ಹೂಡಿರುವ ನಿರ್ಮಾಪಕ ವೆಂಕಟ್ ನಾರಾಯಣ್, ಕೆಡಿಗೆ ಬೆಂಬಲ ನೀಡಿದ್ದಾರೆ.

ಕೆಡಿ- ದಿ ಡೆವಿಲ್ ಚಿತ್ರತಂಡ
'ಸತ್ಯವತಿ' ನನ್ನ ವೃತ್ತಿಜೀವನದ ಅತ್ಯುತ್ತಮ ಪಾತ್ರ: 'ಕೆಡಿ ದಿ ಡೆವಿಲ್' ಶೂಟಿಂಗ್ ಪೂರ್ಣಗೊಳಿಸಿದ ಶಿಲ್ಪಾ ಶೆಟ್ಟಿ ಮಾತು!

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com