ಮರ್ಡರ್ ಮಿಸ್ಟರಿ ಚಿತ್ರದಲ್ಲಿ ಶಿವರಾಜ್‌ಕುಮಾರ್ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಪಾತ್ರ; ಶೀಘ್ರದಲ್ಲೇ ಶೀರ್ಷಿಕೆ ಘೋಷಣೆ

ಈ ವರ್ಷದ ಅಂತ್ಯದ ವೇಳೆಗೆ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಚಿತ್ರತಂಡ ಬಹಿರಂಗಪಡಿಸಿದೆ.
First look at Shivarajkumar's new film
ನಟ ಶಿವರಾಜ್‌ಕುಮಾರ್ ಫಸ್ಟ್ ಲುಕ್
Updated on

ನಟ ಶಿವರಾಜ್‌ಕುಮಾರ್ ಅವರ ಹುಟ್ಟುಹಬ್ಬದಂದು ಅರ್ಧ ಡಜನ್‌ಗೂ ಹೆಚ್ಚು ಚಿತ್ರಗಳು ಘೋಷಣೆಯಾಗಿದ್ದು, ಶ್ರಿತಿಕ್ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಮತ್ತೊಂದು ಹೊಸ ಚಿತ್ರವನ್ನು ಘೋಷಿಸಲಾಗಿದೆ. ನಟ ಮರ್ಡರ್ ಮಿಸ್ಟರಿ ಪ್ರಕಾರದ ಚಿತ್ರದಲ್ಲಿ ಪೊಲೀಸ್ ಸಬ್-ಇನ್‌ಸ್ಪೆಕ್ಟರ್ ಪಾತ್ರವನ್ನು ನಿರ್ವಹಿಸಲಿದ್ದಾರೆ.

ಈ ಯೋಜನೆಯನ್ನು ಸಾಗರ್ ಶಾ, ಕೃಷ್ಣಕುಮಾರ್ ಬಿ ಮತ್ತು ಸೂರಜ್ ಶರ್ಮಾ ಜಂಟಿಯಾಗಿ ನಿರ್ಮಿಸುತ್ತಿದ್ದು, ಬಾಲಾಜಿ ಮಾಧವನ್ ಕಥೆ ಮತ್ತು ನಿರ್ದೇಶನ ಮಾಡಲಿದ್ದಾರೆ. ಚಿತ್ರದ ಅಧಿಕೃತ ಶೀರ್ಷಿಕೆ ಇನ್ನೂ ಬಹಿರಂಗವಾಗದಿದ್ದರೂ, ಚಿತ್ರತಂಡ ಶೀಘ್ರದಲ್ಲೇ ಮುಹೂರ್ತ ಸಮಾರಂಭವನ್ನು ಯೋಜಿಸಿದ್ದು, ಅಲ್ಲಿ ಶೀರ್ಷಿಕೆ ಅನಾವರಣಗೊಳಿಸಲಿದೆ.

ಹಲವು ವರ್ಷಗಳಿಂದ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಶಿವರಾಜ್‌ಕುಮಾರ್ ಇದೀಗ ಹೊಸ ಕುತೂಹಲಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಅವರು ತನಿಖಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕೊಲೆ ರಹಸ್ಯವೊಂದನ್ನು ಭೇದಿಸುವ ಸಬ್-ಇನ್‌ಸ್ಪೆಕ್ಟರ್ ಪಾತ್ರವು ಭಾವನಾತ್ಮಕ ಮತ್ತು ನಿರೂಪಣೆಯಿಂದ ಕೂಡಿರುವ ನಿರೀಕ್ಷೆಯಿದೆ.

ಈ ವರ್ಷದ ಅಂತ್ಯದ ವೇಳೆಗೆ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಚಿತ್ರತಂಡ ಬಹಿರಂಗಪಡಿಸಿದೆ.

First look at Shivarajkumar's new film
63ನೇ ವರ್ಷಕ್ಕೆ ಕಾಲಿಟ್ಟ ಶಿವರಾಜ್‌ಕುಮಾರ್; 'ಟಗರು 2' ಚಿತ್ರಕ್ಕಾಗಿ ಮತ್ತೆ ಒಂದಾದ ನಿರ್ದೇಶಕ ಸೂರಿ-ಶಿವಣ್ಣ?

ಸೂರಜ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಅರ್ಜುನ್ ಜನ್ಯ ನಿರ್ದೇಶನದ 45 ಚಿತ್ರದ ಬಿಡುಗಡೆಗಾಗಿ ಕಾಯುತ್ತಿರುವ ಶಿವಣ್ಣ, ಶ್ರೀನಿ ಎ ಮತ್ತು ಪವನ್ ಒಡೆಯರ್ ಜೊತೆ ಚಿತ್ರಗಳನ್ನು ಮಾಡುತ್ತಿದ್ದಾರೆ. ಇದಲ್ಲದೆ ಸಂಜು ವೆಡ್ಸ್ ಗೀತಾ ನಿರ್ದೇಶಕ ನಾಗಶೇಖರ್ ನಿರ್ದೇಶನದ, ನಿರ್ಮಾಪಕ ಛಲವಾದಿ ಕುಮಾರ್ ಜೊತೆಯೂ ಒಂದು ಸಿನಿಮಾ ಮಾಡಲಿದ್ದಾರೆ. ಅವರು ತಮ್ಮ 131ನೇ ಚಿತ್ರಕ್ಕಾಗಿ ಕೆಲವು ಭಾಗಗಳ ಚಿತ್ರೀಕರಣವನ್ನು ಸಹ ಪೂರ್ಣಗೊಳಿಸಿದ್ದಾರೆ ಮತ್ತು ಕೆಆರ್‌ಜಿ ಸ್ಟುಡಿಯೋಸ್ ನಿರ್ಮಿಸಿದ ಮತ್ತು ಧನಂಜಯ್ ನಟಿಸಿದ ಉತ್ತರಕಾಂಡದ ಭಾಗವಾಗಿದ್ದಾರೆ. ರಾಮ್ ಚರಣ್ ನಟಿಸಿದ ತೆಲುಗು ಚಿತ್ರ ಪೆಡ್ಡಿ ಮತ್ತು ರಜನಿಕಾಂತ್ ಅವರ ಮುಂಬರುವ ಚಿತ್ರ ಜೈಲರ್ 2 ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com