'ಲೂಸ್ ಮಾದ' ಆಗಿ ಬರುತ್ತಿದ್ದಾರೆ ನಟ ಯೋಗಿ; ಚಿತ್ರಕ್ಕೆ ರಂಜಿತ್ ಕುಮಾರ್ ಗೌಡ ಆ್ಯಕ್ಷನ್ ಕಟ್

ಧರ್ಮೇಂದ್ರ ನಿರ್ಮಾಣದ ಈ ಚಿತ್ರದ ಮುಹೂರ್ತ ಜುಲೈ 31 ರಂದು ನಡೆಯಲಿದ್ದು, ಅಧಿಕೃತವಾಗಿ ಸೆಟ್ಟೇರಲಿದೆ.
Yogi and director Ranjith Kumar Gowda
ನಟ ಯೋಗಿ - ನಿರ್ದೇಶಕ ರಂಜಿತ್ ಕುಮಾರ್ ಗೌಡ
Updated on

ದುನಿಯಾ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದ್ದ ನಟ ಯೋಗಿ 'ಲೂಸ್ ಮಾದ' ಎಂದೇ ಖ್ಯಾತಿ ಗಳಿಸಿದರು. ಇದೀಗ ಅದೇ ಹೆಸರಿನ ಚಿತ್ರದಲ್ಲಿ ನಟಿಸಲು ನಟ ಸಿದ್ಧರಾಗಿದ್ದಾರೆ. ಲೂಸ್ ಮಾದ 'ಆ್ಯಪಲ್ ಕೇಕ್' ಮತ್ತು ಕಾಗದ ಮೂಲಕ ಚೊಚ್ಚಲ ಪ್ರವೇಶ ಮಾಡಿ 'ಕಾಗದ' ಚಿತ್ರಗಳನ್ನು ನಿರ್ದೇಶಿಸಿದ್ದ ರಂಜಿತ್ ಕುಮಾರ್ ಗೌಡ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಇದು ಅವರ ನಿರ್ದೇಶನದ ಮೂರನೇ ಚಿತ್ರವಾಗಿದೆ.

ಧರ್ಮೇಂದ್ರ ನಿರ್ಮಾಣದ ಈ ಚಿತ್ರದ ಮುಹೂರ್ತ ಜುಲೈ 31 ರಂದು ನಡೆಯಲಿದ್ದು, ಅಧಿಕೃತವಾಗಿ ಸೆಟ್ಟೇರಲಿದೆ. ದುನಿಯಾದಲ್ಲಿ ವಿಲಕ್ಷಣ ಪಾತ್ರವನ್ನು ನಿರ್ವಹಿಸಿದ್ದ ಯೋಗಿ ಮತ್ತೊಮ್ಮೆ ಈ ಚಿತ್ರದಲ್ಲಿ ವಿಲಕ್ಷಣ, ಮೊಂಡುತನದ ಮತ್ತು ಅಸಾಮಾನ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ಲೂಸ್ ಮಾದ ಎಂಬ ಶೀರ್ಷಿಕೆಯು ಈ ಕಥೆಯಲ್ಲಿ ಯೋಗಿ ಆ ಪಾತ್ರಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತಾರೆ' ಎನ್ನುತ್ತಾರೆ ರಂಜಿತ್.

ನಟ ಕಿಶೋರ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದು, ಅಚ್ಯುತ್ ಕುಮಾರ್, ಗೋಪಾಲ್ ಕೃಷ್ಣ ದೇಶಪಾಂಡೆ, ಯಶ್ ಶೆಟ್ಟಿ, ವಿವಾನ್ ಆಕರ್ಷ್, ಮಾನಸಿ ಸುಧೀರ್, ಬಾಬು ಹಿರಣ್ಣಯ್ಯ ಸೇರಿದಂತೆ ಇತರರು ನಟಿಸಿದ್ದಾರೆ. ಆದಿ ಲೋಕೇಶ್ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ನಾಯಕಿ ಇನ್ನೂ ಅಂತಿಮಗೊಂಡಿಲ್ಲ.

ಚಿತ್ರಕ್ಕೆ ಶಶಾಂಕ್ ಶೇಷಗಿರಿ ಸಂಗೀತ ನೀಡಲಿದ್ದು, ಪ್ರದೀಪ್ ಬಿ ರೆಡ್ಡಿ ಅವರ ಛಾಯಾಗ್ರಹಣವಿದೆ.

Yogi and director Ranjith Kumar Gowda
ನಿರ್ವಹಿಸುವ ಪ್ರತೀ ಪಾತ್ರಕ್ಕೂ ಜೀವ ತುಂಬಲು ಯತ್ನಿಸುತ್ತೇನೆ: ನಟ ಯೋಗಿ

ಸಿದ್ಲಿಂಗು 2 ನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಮತ್ತು ಲಂಕಾ ಸುರ ಬಿಡುಗಡೆಗೆ ಎದುರು ನೋಡುತ್ತಿರುವ ಯೋಗಿ, ಶಂಕರ್ ಗುರು ನಿರ್ದೇಶನದ ಧನಂಜಯ್ ಅಭಿನಯದ ಅಣ್ಣಾ ಫ್ರಮ್ ಮೆಕ್ಸಿಕೋದ ಭಾಗವಾಗಿದ್ದಾರೆ.

ಲೂಸ್ ಮಾದ ಚಿತ್ರದ ಸಂಪೂರ್ಣ ಚಿತ್ರೀಕರಣ ಮಂಗಳೂರು ಸುತ್ತಮುತ್ತ ನಡೆಯಲಿದೆ. ಆಗಸ್ಟ್ 25 ರಂದು ಚಿತ್ರೀಕರಣ ಆರಂಭಿಸಲು ಚಿತ್ರತಂಡ ಯೋಜಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com