
ಹರಿವು, ನಾತಿಚರಾಮಿ, ACT 1978 ಮತ್ತು 19.20.21 ಚಿತ್ರಗಳನ್ನು ನಿರ್ದೇಶಿಸಿದ್ದ ಮನ್ಸೋರೆ ಇದೀಗ 'ದೂರ ತೀರ ಯಾನ' ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ದೂರ ತೀರ ಯಾನ ಚಿತ್ರವು ಜುಲೈ 11 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವು ಎರಡು ಹಿಟ್ ಹಾಡುಗಳೊಂದಿಗೆ ಈಗಾಗಲೇ ಸಂಚಲನ ಮೂಡಿಸಿದೆ. ಚಿತ್ರದಲ್ಲಿ ನಟಿ ಶ್ರುತಿ ಹರಿಹರನ್ ನಟಿಸಿದ್ದು, ಗೌರಿಯಾಗಿ ತೆರೆಮೇಲೆ ಮಿಂಚಲು ಸಿದ್ಧರಾಗಿದ್ದಾರೆ.
2018ರಲ್ಲಿ ಮಂಸೋರೆ ನಿರ್ದೇಶಿಸಿದ 'ನಾತಿಚರಾಮಿ' ಚಿತ್ರವನ್ನು ನೋಡಿದ ಪ್ರೇಕ್ಷಕರಿಗೆ ಗೌರಿ ಪಾತ್ರ ಪರಿಚಿತವಾಗಿರುತ್ತದೆ. ಆ ಚಿತ್ರದಲ್ಲಿ ಶ್ರುತಿ ಅವರ ಗೌರಿ ಪಾತ್ರ ವ್ಯಾಪಕ ಮೆಚ್ಚುಗೆ ಗಳಿಸಿತು.
'ನಾತಿಚರಾಮಿ' ಚಿತ್ರವು ಐದು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದುಕೊಂಡಿತು. ವೈಯಕ್ತಿಕ ಮತ್ತು ಸಾಮಾಜಿಕ ವಿಷಯಗಳ ಸೂಕ್ಷ್ಮ ಪರಿಶೋಧನೆಗಾಗಿ ಮೆಚ್ಚುಗೆ ಪಡೆಯಿತು. ಹೊಸ ಚಿತ್ರದಲ್ಲಿ ಗೌರಿ ಪಾತ್ರದ ಉಪಸ್ಥಿತಿಯ ಕುರಿತು ಮಾಹಿತಿಯನ್ನು ಇನ್ನೂ ಮುಚ್ಚಿಡಲಾಗಿದೆ. ಆದರೆ, ಅವರ ಪುನರಾಗಮನವು ಎರಡು ಚಿತ್ರಗಳ ಭಾವನಾತ್ಮಕ ಪ್ರಪಂಚಗಳನ್ನು ಸಂಪರ್ಕಿಸಬಹುದಾದ ವಿಷಯಾಧಾರಿತ ನಿರಂತರತೆಯನ್ನು ಸೂಚಿಸುತ್ತದೆ.
ನಾತಿಚರಾಮಿ ಚಿತ್ರದ ಮೂಲಕ ಛಾಪು ಮೂಡಿಸಿದ್ದ ಗೌರಿ ಪಾತ್ರವು ಪ್ರೇಕ್ಷಕರ ಆಸಕ್ತಿಯನ್ನು ಕೆರಳಿಸಿದೆ. ಮನ್ಸೋರೆ ಅವರು ಅರ್ಥಪೂರ್ಣ ಕಥೆ ಹೇಳುವಿಕೆಗೆ ಹೆಸರುವಾಸಿಯಾಗಿರುವುದರಿಂದ, ದೂರ ತೀರ ಯಾನದಲ್ಲಿನ ಗೌರಿಯ ಪಾತ್ರವು ಚಿತ್ರದ ಮೇಲೆ ನಿರೀಕ್ಷೆ ಹೆಚ್ಚುವಂತೆ ಮಾಡಿದೆ.
Advertisement