
ದಿಯಾ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ನಟ ದೀಕ್ಷಿತ್ ಶೆಟ್ಟಿ ಕನ್ನಡ ಚಿತ್ರೋದ್ಯಮದಲ್ಲಿ ಉದಯೋನ್ಮುಖ ಪ್ರತಿಭೆಯಾಗಿದ್ದಾರೆ. ರಾಮ್ ವೆಂಕಟ್ ನಿರ್ದೇಶನದ ಹೊಸ ಚಿತ್ರದ ಮೂಲಕ ದೀಕ್ಷಿತ್ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.
ಇನ್ನೂ ಹೆಸರಿಡದ ಈ ಚಿತ್ರ ಗುರುವಾರ ದೇವಾಲಯದಲ್ಲಿ ಔಪಚಾರಿಕ ಪೂಜೆಯೊಂದಿಗೆ ಸೆಟ್ಟೇರಿದೆ. ಉಮಾಪತಿ ರಾಮಯ್ಯ ನಟಿಸಿದ 'ಪಿಥಳ ಮಾತಿ' ಚಿತ್ರ ನಿರ್ಮಾಣ ಮಾಡಿದ್ದ ಶ್ರೀ ಸರವಣ ಫಿಲ್ಮ್ ಆರ್ಟ್ಸ್‌ನ ಜಿ ಸಾರಾ ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ.
ದೀಕ್ಷಿತ್ ಶೆಟ್ಟಿ ಅವರು 2020 ರಲ್ಲಿ ದಿಯಾ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದರು. ಬಳಿಕ ಅವರು ಕೆಟಿಎಂ (2024) ಮತ್ತು ಬ್ಲಿಂಕ್ (2024) ಮತ್ತು ತೆಲುಗು ಚಿತ್ರಗಳಾದ ಮುಗ್ಗುರು ಮೊನಗಲ್ಲು (2021), ದಿ ರೋಸ್ ವಿಲ್ಲಾ (2021) ಮತ್ತು ನಾನಿ ನಟಿಸಿದ್ದ ದಸರಾ (2023) ಚಿತ್ರಗಳಲ್ಲಿ ನಟಿಸಿದ್ದರು.
ದೀಕ್ಷಿತ್ ಅವರು ಮುಂಬರುವ ಶೀಘ್ರಮೇವ ಕಲ್ಯಾಣ ಪ್ರಾಪ್ತಿರಸ್ತು, ಸ್ಟ್ರಾಬೆರಿ, ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ, ಕಿಂಗ್ ಜಾಕಿ ಕ್ವೀನ್ (ತೆಲುಗು), ದಿ ಗರ್ಲ್‌ಫ್ರೆಂಡ್ (ತೆಲುಗು) ಮತ್ತು ಒಪ್ಪೀಸ್ ಚಿತ್ರಗಳಲ್ಲಿ ನಟಿಸಲಿದ್ದಾರೆ.
ದೀಕ್ಷಿತ್ ಜೊತೆಗೆ ಜನಪ್ರಿಯ ಟಿವಿ ನಟರಾದ ಅಮಿತ್ ಭಾರ್ಗವ್ ಮತ್ತು ಆಯೇಶಾ ನಟಿಸಿದ್ದಾರೆ. ಚಿತ್ರಕ್ಕೆ ವೆಂಕಟೇಶ್ವರ್ ಅವರ ಛಾಯಾಗ್ರಹಣವಿದೆ. ಚಿತ್ರದ ಉಳಿದ ಪಾತ್ರವರ್ಗ ಮತ್ತು ಸಿಬ್ಬಂದಿಯಂತಹ ವಿವರಗಳನ್ನು ಇನ್ನೂ ಬಹಿರಂಗಪಡಿಸಿಲ್ಲ.
Advertisement