ನಿವೇದಿತಾ ಶಿವರಾಜ್‌ಕುಮಾರ್‌ ನಿರ್ಮಾಣದ ಮೊದಲ ಸಿನಿಮಾ 'ಫೈರ್ ಫ್ಲೈ' ಬಿಡುಗಡೆಗೆ ದಿನಾಂಕ ಫಿಕ್ಸ್

ಈ ಚಿತ್ರದ ಟೀಸರ್ ಪ್ರೇಕ್ಷಕರನ್ನು ಸೆಳೆದಿದ್ದು, ವಂಶಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ನಟನೆಯೊಂದಿಗೆ ನಿರ್ದೇಶಕನ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ.
ನಿವೇದಿತಾ ಶಿವರಾಜ್‌ಕುಮಾರ್‌ - ಫೈರ್ ಫ್ಲೈ ಚಿತ್ರದ ಸ್ಟಿಲ್
ನಿವೇದಿತಾ ಶಿವರಾಜ್‌ಕುಮಾರ್‌ - ಫೈರ್ ಫ್ಲೈ ಚಿತ್ರದ ಸ್ಟಿಲ್
Updated on

ಶ್ರೀ ಮುತ್ತು ಸಿನಿ ಸರ್ವೀಸಸ್ ಬ್ಯಾನರ್ ಅಡಿಯಲ್ಲಿ ನಿವೇದಿತಾ ಶಿವರಾಜ್‌ಕುಮಾರ್ ಅವರ ಚೊಚ್ಚಲ ನಿರ್ಮಾಣದ 'ಫೈರ್‌ ಫ್ಲೈ' ಚಿತ್ರ ಏಪ್ರಿಲ್ 24 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಜುಗಡೆಯಾಗಲು ಸಜ್ಜಾಗುತ್ತಿದೆ. ದಂತಕಥೆ ಡಾ. ರಾಜ್‌ಕುಮಾರ್ ಅವರ ಜನ್ಮ ವಾರ್ಷಿಕೋತ್ಸವದ ದಿನ ಚಿತ್ರ ಬಿಡುಗಡೆಗೆ ಚಿತ್ರತಂಡ ಯೋಜನೆ ರೂಪಿಸಿದೆ.

ಈ ಚಿತ್ರದ ಟೀಸರ್ ಪ್ರೇಕ್ಷಕರನ್ನು ಸೆಳೆದಿದ್ದು, ವಂಶಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ನಟನೆಯೊಂದಿಗೆ ನಿರ್ದೇಶಕನ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಚಿತ್ರದಲ್ಲಿ ರಚನಾ ಇಂದರ್ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಅಚ್ಯುತ್ ಕುಮಾರ್, ಸುಧಾರಾಣಿ, ಶೀತಲ್ ಶೆಟ್ಟಿ, ಆನಂದ್ ನೀನಾಸಂ, ಚಿತ್ಕಲಾ ಬಿರಾದಾರ್ ಮತ್ತು ಮೂಗು ಸುರೇಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಚಿತ್ರದ ಕುರಿತು ಮಾತನಾಡಿದ ನಟ ಶಿವರಾಜ್‌ಕುಮಾರ್, 'ಫೈರ್‌ ಫ್ಲೈ' ದುಃಖ ಮತ್ತು ಗುಣಪಡಿಸುವಿಕೆಯ ವಿಚಾರಗಳನ್ನು ಒಳಗೊಂಡಿದ್ದು, ಆಳ ಮತ್ತು ಸರಳತೆ ನಡುವಿನ ಸಮತೋಲನ ಕಾಯ್ದುಕೊಳ್ಳುವ ನಿರೂಪಣೆಯನ್ನು ಒಳಗೊಂಡಿದೆ. ಇದು ಎಲ್ಲರಿಗೂ ಇಷ್ಟವಾಗುತ್ತದೆ ಎಂದು ನನಗೆ ವಿಶ್ವಾಸವಿದೆ' ಎಂದು ಹೇಳಿದರು.

ನಿವೇದಿತಾ ಶಿವರಾಜ್‌ಕುಮಾರ್‌ - ಫೈರ್ ಫ್ಲೈ ಚಿತ್ರದ ಸ್ಟಿಲ್
ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ ಚೊಚ್ಚಲ ಚಿತ್ರ 'ಫೈರ್‌ ಫ್ಲೈ' ಶೂಟಿಂಗ್ ಮುಕ್ತಾಯ!

'ನನ್ನ ಮಗಳ ನಿರ್ಮಾಣದ ಮೊದಲ ಚಿತ್ರ ಅಪ್ಪಾಜಿಯವರ ಹುಟ್ಟುಹಬ್ಬದಂದು ಬಿಡುಗಡೆಯಾಗುತ್ತಿರುವುದು ನನಗೆ ತುಂಬಾ ವಿಶೇಷವಾದ ಕ್ಷಣ. ವರ್ಷಗಳಿಂದ ನಮ್ಮ ಕುಟುಂಬವು ಪಡೆಯುತ್ತಿರುವ ಪ್ರೀತಿ ಅಪ್ಪಾಜಿಯವರು ನೀಡಿರುವ ಉಡುಗೊರೆಯಾಗಿದೆ. ಆ ಪ್ರೀತಿಯನ್ನು ಮುಂದಿನ ಪೀಳಿಗೆಗೆ ರವಾನಿಸುವುದನ್ನು ನೋಡುವುದು ಹೃದಯಸ್ಪರ್ಶಿಯಾಗಿದೆ. ಬೆಂಬಲ ನೀಡಿದ್ದಕ್ಕಾಗಿ ಎಲ್ಲ ಅಭಿಮಾನಿಗಳು ಮತ್ತು ಕನ್ನಡ ಸಿನಿಮಾ ಅಭಿಮಾನಿಗಳಿಗೆ ನಾನು ಹೃತ್ಪೂರ್ವಕ ಕೃತಜ್ಞತೆಯನ್ನು ಅರ್ಪಿಸುತ್ತೇನೆ' ಎಂದರು.

ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜಿಸಿದ್ದು, ಚಿತ್ರದ ಮೊದಲ ಹಾಡು ಮಾರ್ಚ್ ಕೊನೇ ವಾರದಲ್ಲಿ ಆನಂದ್ ಆಡಿಯೋದ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ. ಚಿತ್ರಕ್ಕೆ ಅಭಿಲಾಷ್ ಕಲಾಥಿ ಅವರ ಛಾಯಾಗ್ರಹಣ, ರಘು ನಿಡುವಳ್ಳಿ ಅವರ ಸಂಭಾಷಣೆ, ಸುರೇಶ್ ಆರ್ಮುಗಂ ಅವರ ಸಂಕಲನ, ವರದರಾಜ್ ಕಾಮತ್ ಅವರ ಕಲಾ ನಿರ್ದೇಶನ, ಅರ್ಜುನ್ ರಾಜ್ ಅವರ ಫೈಟ್ ಮತ್ತು ರಾಹುಲ್ ಮಾಸ್ಟರ್ ಅವರ ನೃತ್ಯ ಸಂಯೋಜನೆ ಇದೆ.

ಇದು ಫ್ಯಾಮಿಲಿ ಎಂಟರ್‌ಟೈನರ್ ಚಿತ್ರವಾಗಿದ್ದು, ಎಲ್ಲ ವಯಸ್ಸಿನ ವೀಕ್ಷಕರನ್ನು ಆಕರ್ಷಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ ನಿರ್ಮಾಪಕರು.

ನಿವೇದಿತಾ ಶಿವರಾಜ್‌ಕುಮಾರ್‌ - ಫೈರ್ ಫ್ಲೈ ಚಿತ್ರದ ಸ್ಟಿಲ್
ಪುತ್ರಿ ನಿವೇದಿತಾ ನಿರ್ಮಾಣದ ಮೊದಲ ಚಿತ್ರ 'ಫೈರ್ ಫ್ಲೈ' ನಲ್ಲಿ ಶಿವಣ್ಣ ಅತಿಥಿ ಪಾತ್ರ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com