
ಯುವ ರಾಜ್‌ಕುಮಾರ್ ಸದ್ಯ ರೋಹಿತ್ ಪದಕಿ ನಿರ್ದೇಶನದ ತಮ್ಮ ಎರಡನೇ ಚಿತ್ರ 'ಎಕ್ಕ' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಮೇಲಿನ ನಿರೀಕ್ಷೆ ಈಗಾಗಲೇ ಹೆಚ್ಚಾಗಿದ್ದು, ನಟ ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನದಂದು ಚಿತ್ರತಂಡ ಆನಂದ್ ಆಡಿಯೋದ ಯೂಟ್ಯೂಬ್ ಚಾನೆಲ್‌ನಲ್ಲಿ ಸೋಮವಾರ ಚಿತ್ರದ ಮೊದಲ ಹಾಡು 'ಎಕ್ಕಾ ಮಾರ್ ಮಾರ್' ಅನ್ನು ಬಿಡುಗಡೆ ಮಾಡಿದೆ.
ಯುವ ರಾಜ್‌ಕುಮಾರ್ ಅವರನ್ನೇ ಪ್ರಧಾನವಾಗಿಟ್ಟುಕೊಂಡಿರುವ ಈ ಹಾಡು ಸಖತ್ ಎನರ್ಜಿಯನ್ನು ಹೊಂದಿದೆ. ನಾಗಾರ್ಜುನ ಶರ್ಮಾ ಅವರು ಸಾಹಿತ್ಯ ಬರೆದಿದ್ದು, ಚರಣ್ ರಾಜ್ ಅವರು ಸಂಗೀತ ಸಂಯೋಜಿಸಿದ್ದಾರೆ. ರೋಹಿತ್ ಪದಕಿ, ಚರಣ್ ರಾಜ್ ಮತ್ತು ಮಹಾಲಿಂಗ್ ವಿಎಂ ಹಾಡಿಗೆ ಧ್ವನಿ ನೀಡಿದ್ದಾರೆ.
ಪಿಆರ್‌ಕೆ ಪ್ರೊಡಕ್ಷನ್ಸ್, ಕೆಆರ್‌ಜಿ ಸ್ಟುಡಿಯೋಸ್ ಮತ್ತು ಜಯಣ್ಣ ಫಿಲ್ಮ್ಸ್ ಜಂಟಿಯಾಗಿ ನಿರ್ಮಿಸುತ್ತಿರುವ ಆಕ್ಷನ್-ಥ್ರಿಲ್ಲರ್ 'ಎಕ್ಕ' ಚಿತ್ರ ಜೂನ್ 6 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಚಿತ್ರದಲ್ಲಿ ಯುವ ರಾಜ್‌ಕುಮಾರ್ ಜೊತೆಗೆ, ಅತುಲ್ ಕುಲಕರ್ಣಿ, ಆದಿತ್ಯ, ಸಂಜನಾ ಆನಂದ್ ಮತ್ತು ಸಂಪದಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರೋಹಿತ್ ಪದಕಿ ಅವರ ಮನಮುಟ್ಟುವ ಕಥೆ, ಚಿತ್ರಕಥೆ ಮತ್ತು ನಿರ್ದೇಶನವಿರುವ ಈ ಚಿತ್ರಕ್ಕೆ ಸತ್ಯ ಹೆಗ್ಡೆ ಅವರ ಛಾಯಾಗ್ರಹಣ ಮತ್ತು ದೀಪು ಎಸ್ ಕುಮಾರ್ ಅವರ ಸಂಕಲನವೂ ಇದೆ.
Advertisement