ಶಾರುಖ್ ಖಾನ್‌ಗೆ 'ಪುಷ್ಪ' ಚಿತ್ರದ ನಿರ್ದೇಶಕ ಸುಕುಮಾರ್ ಆ್ಯಕ್ಷನ್ ಕಟ್; ಖಳನಾಯಕನ ಪಾತ್ರ?

ಶಾರುಖ್ ಖಾನ್ ಮತ್ತು ಸುಕುಮಾರ್ ಇಬ್ಬರೂ ಈಗ ಇತರೆ ಹಲವಾರು ಯೋಜನೆಗಳಲ್ಲಿ ಬ್ಯುಸಿಯಾಗಿದ್ದು, ಈ ಚಿತ್ರವು ಕಾರ್ಯರೂಪಕ್ಕೆ ಬರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.
ಶಾರುಖ್ ಖಾನ್ - ಸುಕುಮಾರ್
ಶಾರುಖ್ ಖಾನ್ - ಸುಕುಮಾರ್
Updated on

ಗ್ರಾಮೀಣ ಭಾಗದಲ್ಲಿ ನಡೆಯುವ ಆ್ಯಕ್ಷನ್ ಚಿತ್ರಕ್ಕಾಗಿ ಅಲ್ಲು ಅರ್ಜುನ್ ನಟನೆಯ ಪುಷ್ಪ ಚಿತ್ರದ ನಿರ್ದೇಶಕ ಸುಕುಮಾರ್ ಅವರೊಂದಿಗೆ ಶಾರುಖ್ ಖಾನ್ ಕೆಲಸ ಮಾಡಲಿದ್ದಾರೆ ಎಂದು ಮಿಡ್-ಡೇ ವರದಿ ಮಾಡಿದೆ. ವರ್ಗ ಮತ್ತು ಜಾತಿಯಂತಹ ಸಾಮಾಜಿಕ ಸಮಸ್ಯೆಗಳನ್ನು ಕುರಿತಾದ ಈ ಚಿತ್ರದಲ್ಲಿ ಶಾರುಖ್ ಖಳನಾಯಕನ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ.

'ಶಾರುಖ್ ಖಾನ್ ಖಳನಾಯಕನ ಪಾತ್ರವನ್ನು ನಿರ್ವಹಿಸಲಿದ್ದಾರೆ. ಆದರೆ, ಇದು ಗ್ರಾಮೀಣ ಭಾಗದ ರಾಜಕೀಯ ಆ್ಯಕ್ಷನ್ ಚಿತ್ರವಾಗಿದ್ದು, ಅವರ ಜಾಗತಿಕ ಸೂಪರ್‌ಸ್ಟಾರ್ ಇಮೇಜ್‌ನೊಂದಿಗೆ ಕಚ್ಚಾ, ಹಳ್ಳಿಗಾಡಿನ ಮತ್ತು ದೇಸಿ ಅವತಾರದಲ್ಲಿ ತೋರಿಸುವ ಭರವಸೆ ನೀಡುತ್ತದೆ. ಇದು ಜಾತಿ ಮತ್ತು ವರ್ಗ ದಬ್ಬಾಳಿಕೆಯಂತಹ ಸಾಮಾಜಿಕ ಸಮಸ್ಯೆಗಳ ಕುರಿತಾದ ಕಥೆಯನ್ನು ಒಳಗೊಂಡಿದೆ' ಎಂದು ಮೂಲಗಳು ಪ್ರಕಟಣೆಗೆ ತಿಳಿಸಿವೆ.

ಶಾರುಖ್ ಖಾನ್ ಮತ್ತು ಸುಕುಮಾರ್ ಇಬ್ಬರೂ ಈಗ ಇತರೆ ಹಲವಾರು ಯೋಜನೆಗಳಲ್ಲಿ ಬ್ಯುಸಿಯಾಗಿದ್ದು, ಈ ಚಿತ್ರವು ಕಾರ್ಯರೂಪಕ್ಕೆ ಬರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ತಮ್ಮೊಂದಿಗೆ ಯಾವುದೇ ಸಿನಿಮಾವನ್ನು ಮಾಡಲು ನಿರ್ದೇಶಕರು ಎರಡು ವರ್ಷ ಕಾಯಬೇಕಾಗುತ್ತದೆ ಎಂದಿರುವುದಾಗಿ ವರದಿಯಾಗಿದೆ. ಕಿಂಗ್ ಚಿತ್ರದ ಚಿತ್ರೀಕರಣ ಮೇ ತಿಂಗಳ ಆರಂಭದಿಂದ ಅಂತ್ಯದವರೆಗೆ ನಡೆಯಲಿದೆ' ಎಂದು ಮೂಲಗಳು ತಿಳಿಸಿವೆ.

ಶಾರುಖ್ ಅವರ ಕಿಂಗ್ ಚಿತ್ರವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸುತ್ತಿದ್ದಾರೆ ಮತ್ತು ಸುಹಾನಾ ಖಾನ್ ಕೂಡ ನಟಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com