
ಬೆಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರ ಹಿಡಿದು ‘ರೀಲ್ಸ್’ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಬಿಗ್ ಬಾಸ್ ಖ್ಯಾತಿಯ ರಜತ್ ಕಿಶನ್ ಹಾಗೂ ವಿನಯ್ ಗೌಡ ಅವರನ್ನು ಬಂಧನಕ್ಕೊಳುಪಡಿಲಿದ್ದ ಬಸವೇಶ್ವರ ನಗರ ಠಾಣೆಯ ಪೊಲೀಸರು, ತಡರಾತ್ರಿ ಬಿಡುಗಡೆ ಮಾಡಿದ್ದಾರೆಂದು ತಿಳಿದುಬಂದಿದೆ.
ರಜತ್ ಕಿಶನ್ ಹಾಗೂ ವಿನಯ್ ಗೌಡ ಇಬ್ಬರು ಇಬ್ಬರೂ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದರು. ಸಿನಿಮೀಯ ಶೈಲಿಯಲ್ಲಿ ವೀಡಿಯೋ ಮಾಡಿ ಪೋಸ್ಟ್ ಮಾಡಿದ್ದರು. ಬಸವೇಶ್ವರ ನಗರ ಪೊಲೀಸರು ಇಬ್ಬರಿಗೂ ನೋಟಿಸ್ ನೀಡಿ ವಿಚಾರಣೆಗೆ ಬರುವಂತೆ ಸೂಚಿಸಿದ್ದರು. ಬಳಿಕ ಇಬ್ಬರನ್ನೂ ಬಂಧನಕ್ಕೆ ಒಳಪಡಿಸಲಾಗಿತ್ತು ಎಂದು ವರದಿಗಳಿಂದ ತಿಳಿದುಬಂದಿದೆ.
ನಿನ್ನೆ ಮಧ್ಯಾಹ್ನ ಇಬ್ಬರನ್ನೂ ಬಂಧನಕ್ಕೊಳಪಡಿಸಿದ್ದಪೊಲೀಸರು, ಮಧ್ಯರಾತ್ರಿ ಬಿಡುಗಡೆ ಮಾಡಿದ್ದಾರೆಂದು ತಿಳಿದುಬಂದಿದೆ.ಆದರೆ, ಇಬ್ಬರನ್ನು ತಡರಾತ್ರಿ ಬಿಡುಗಡೆ ಮಾಡಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಬಂಧನ ಬಳಿಕ ಪೊಲೀಸರು ಸ್ಟೇಷನ್ ಬೇಲ್ ಕೊಡಬೇಕು, ಇಲ್ಲವೇ ಕೋರ್ಟ್ ಬೇಲ್ ಆಗಬೇಕು. ತಡರಾತ್ರಿ ಬಿಡುಗಡೆ ಮಾಡಿರುವುದು ಅನುಮಾನಗಳನ್ನು ಮೂಡಿಸಿದೆ.
ಈ ನಡುವೆ ವಿನಯ್ ಹಾಗೂ ರಜತ್ ಇಬ್ಬರು ವಿಚಾರಣೆ ವೇಳೆ ರೀಲ್ಸ್ ನಲ್ಲಿ ಬಳಸಿದ್ದ ಮಚ್ ನ್ನು ಪೊಲೀಸರಿಗೆ ಒಪ್ಪಿಸಿದ್ದು, ಇಬ್ಬರ ಕೈನಲ್ಲಿ ರಾರಾಜಿಸಿದ್ದ ಮಚ್ಚು ಫೈಬರ್‌ನಿಂದ ಮಾಡಿದ್ದು ಎಂದು ಪೊಲೀಸರು ಹೇಳಿದ್ದಾರೆಂದು ತಿಳಿದುಬಂದಿದೆ.
ಹೀಗಾಗಿಯೇ ಪೊಲೀಸ್ ಠಾಣೆಯಿಂದ ವಿನಯ್ ಗೌಡ ಹಾಗೂ ರಜತ್‌ನ ರಾತ್ರೋರಾತ್ರಿ ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ.
Advertisement