
2020ರಲ್ಲಿ ತೆರೆಕಂಡು ವಿಮರ್ಷಾತ್ಮಕವಾಗಿ ವ್ಯಾಪಕ ಮೆಚ್ಚುಗೆ ಪಡೆದ ಚಿತ್ರ 'ದಿಯಾ' ನಂತರ ನಟ ದೀಕ್ಷಿತ್ ಶೆಟ್ಟಿ ಮತ್ತು ನಿರ್ದೇಶಕ ಕೆಎಸ್ ಅಶೋಕ ಮತ್ತೆ ಒಟ್ಟಿಗೆ ಕೆಲಸ ಮಾಡಲಿದ್ದಾರೆ ಎಂದು ನಾವು ಈ ಹಿಂದೆ ವರದಿ ಮಾಡಿದ್ದೆವು. ಇದೀಗ ಹೊಸ ವಿಚಾರವೆಂದರೆ, ಚಿತ್ರದ ಮತ್ತೊಬ್ಬ ಜನಪ್ರಿಯ ನಟ ಪೃಥ್ವಿ ಅಂಬಾರ್ ಕೂಡ ಈ ಚಿತ್ರತಂಡ ಸೇರಿಕೊಂಡಿದ್ದಾರೆ. ಚಿತ್ರದಲ್ಲಿ ಖುಷಿ ರವಿ ನಾಯಕಿಯಾಗಿ ನಟಿಸಿದ್ದರು. ದಿಯಾ ಚಿತ್ರವನ್ನು ಬಹು ಭಾಷೆಗಳಲ್ಲಿ ರೀಮೇಕ್ ಮಾಡಲಾಯಿತು. ಪೃಥ್ವಿ ಹಿಂದಿ ಮತ್ತು ಮರಾಠಿ ಆವೃತ್ತಿಗಳಲ್ಲಿ ನಟಿಸಿದರು.
ಕಚ್ಚಾ ಮಾನವ ಭಾವನೆಗಳನ್ನು ಅನ್ವೇಷಿಸುವ ಸಂಕೀರ್ಣ ಕಥೆಗಳನ್ನು ಹೆಣೆಯುವುದಕ್ಕೆ ಹೆಸರುವಾಸಿಯಾದ ಅಶೋಕ ಈಗ, ಹಳ್ಳಿಯೊಂದರಲ್ಲಿ ನಡೆಯುವ ಸಾಮಾಜಿಕ ಕಥೆಯನ್ನು ತೆರೆಮೇಲೆ ತರಲು ಮುಂದಾಗಿದ್ದಾರೆ. ಸ್ನೇಹ, ಪ್ರೀತಿ ಮತ್ತು ಜೀವನದ ಅನಿರೀಕ್ಷಿತ ತಿರುವುಗಳ ವಿಚಾರಗಳನ್ನು ಹೇಳಲು ಈ ಮೂವರು ಮತ್ತೆ ಒಂದಾಗುತ್ತಿದ್ದಾರೆ.
ಆಡಿಷನ್ ಪ್ರಕ್ರಿಯೆಯ ನಂತರ, ಅಶೋಕ ಅವರು ತಮ್ಮ ಮುಂದಿನ ಚಿತ್ರಕ್ಕೆ ನಟರಾದ ಪೃಥ್ವಿ ಮತ್ತು ದೀಕ್ಷಿತ್ ಅವರನ್ನು ಅಂತಿಮಗೊಳಿಸಿದ್ದಾರೆ. ಸಲಗ (2021) ಚಿತ್ರದಲ್ಲಿ ಜೂನಿಯರ್ ವಿಜಯ್ ಪಾತ್ರದ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದ ಶ್ರೀಧರ್ ಎಚ್ ಕೃಷ್ಣ ಕೂಡ ನಟಿಸುತ್ತಿದ್ದಾರೆ.
ಅಶೋಕ ಅವರು ನಾಯಕಿಯಾಗಿ ದೇವಿಕಾ ಭಟ್ ಅವರನ್ನು ಸ್ಯಾಂಡಲ್‌ವುಡ್‌ಗೆ ಪರಿಚಯಿಸುತ್ತಿದ್ದಾರೆ. ಕಿರುತೆರೆಯಲ್ಲಿ ನಟಿಸಿದ್ದ ದೇವಿಕಾ ಇದೀಗ ದೊಡ್ಡ ಪರದೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎಸ್‌ಪಿಕೆ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನವೀನ್ ಎಸ್‌ಪಿ ನಿರ್ಮಿಸಿರುವ ಈ ಹೆಸರಿಡದ ಯೋಜನೆಯು ಸದ್ಯ ಸಿದ್ಧತೆಯ ಹಂತದಲ್ಲಿದ್ದು, ಏಪ್ರಿಲ್‌ನಲ್ಲಿ ಚಿತ್ರೀಕರಣ ಪ್ರಾರಂಭಿಸುವ ಯೋಜನೆ ಇದೆ.
ದೀಕ್ಷಿತ್ ತೆಲುಗು ಮತ್ತು ತಮಿಳು ಚಿತ್ರರಂಗಗಳಲ್ಲಿ ತಮ್ಮ ವೃತ್ತಿಜೀವನವನ್ನು ವಿಸ್ತರಿಸಿದ್ದರೆ, ಪೃಥ್ವಿ ಅಂಬಾರ್ ಅನೇಕ ಯೋಜನೆಗಳಲ್ಲಿ ಬ್ಯುಸಿಯಾಗಿದ್ದಾರೆ.
Advertisement