
ಮುಂಬೈ: ಖ್ಯಾತ ಬಾಲಿವುಡ್ ನಟ ಹಾಗೂ ನಟ ರಾಹುಲ್ ದೇವ್ ಅವರ ಸಹೋದರ ಮುಕುಲ್ ದೇವ್ ನಿಧನರಾಗಿದ್ದು ಅವರಿಗೆ 54 ವರ್ಷ ವಯಸ್ಸಾಗಿತ್ತು.
ನಟ ಮುಕುಲ್ ದೇವ್ ಶುಕ್ರವಾರ ರಾತ್ರಿ ನಿಧನರಾಗಿದ್ದು, ಅವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಮುಕುಲ್ ದೇವ್ ಅವರ ಸ್ನೇಹಿತೆ ನಟಿ ದೀಪ್ಶಿಕಾ ನಾಗ್ಪಾಲ್ ಸಾಮಾಜಿಕ ಮಾಧ್ಯಮದ ಮೂಲಕ ಈ ಸುದ್ದಿಯನ್ನು ದೃಢಪಡಿಸಿದ್ದಾರೆ.
ಅವರು ಮುಕುಲ್ ದೇವ್ ಅವರೊಂದಿಗಿನ ಹಳೆಯ ಛಾಯಾಚಿತ್ರವನ್ನು ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಹಂಚಿಕೊಂಡಿದ್ದು, "ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. RIP" ಎಂದು ಬರೆದಿದ್ದಾರೆ.
ಬಾಲಿವುಡ್, ಟಾಲಿವುಡ್, ಕಾಲಿವುಡ್, ಬೆಂಗಾಲಿ, ಮಲಯಾಳಿ ಸೇರಿದಂತೆ ಹಲವು ಭಾಷಾ ಸಿನಿಮಾಗಳಲ್ಲಿ ನಟಿಸಿದ್ದ ನಟ ಮುಕುಲ್ ದೇವ್ ಹಿಂದಿಯ ಸನ್ ಆಫ್ ಸರ್ದಾರ್ ಚಿತ್ರದ ಮೂಲಕ ಖ್ಯಾತಗಳಿಸಿದ್ದರು.
ಬಾಲಿವುಡ್ ನಲ್ಲಿ ಆರ್… ರಾಜ್‌ಕುಮಾರ್, ಜೈ ಹೋ ಸೇರಿದಂತೆ ಹತ್ತಾರು ಸಿನಿಮಾಗಳಲ್ಲಿ ನಟಿಸಿದ್ದ ಮುಕುಲ್ ದೇವ್ ಪ್ರಭಾಸ್ ಅಭಿನಯದ ಏಕ್ ನಿರಂಜನ್, ರವಿತೇಜ ನಟನೆಯ ಕೃಷ್ಣ, ನಿಪ್ಪು, ನಾಗಾರ್ಜುನ ಅಭಿನಯದ ಕೆಡಿ ಸೇರಿದಂತೆ ಕನ್ನಡದ ರಜನಿ, ನಾಗರಹಾವು, ಚಿತ್ರದಲ್ಲೂ ಮುಕುಲ್ ದೇವ್ ಅಭಿನಯಿಸಿದ್ದರು.
ದೆಹಲಿಯಲ್ಲಿ ಪಂಜಾಬಿ ಕುಟುಂಬದಲ್ಲಿ ಜನಿಸಿದ ಮುಕುಲ್ ದೇವ್ ಜಲಂಧರ್ ಬಳಿಯ ಹಳ್ಳಿಯಲ್ಲಿ ಜನಿಸಿದ್ದರು. ಅವರ ತಂದೆ ಹರಿ ದೇವ್, ಸಹಾಯಕ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು.
Advertisement