Mark Teaser: ಕಿಚ್ಚ ಸುದೀಪ್ ಮಾಸ್ ಅವತಾರಕ್ಕೆ ಅಭಿಮಾನಿಗಳು ಫಿದಾ; ಡಿಸೆಂಬರ್ 25ಕ್ಕೆ ರಸದೌತಣ!

ಕಳೆದ ವರ್ಷ ಮ್ಯಾಕ್ಸ್ ಮೂಲಕ ಬ್ಲಾಕ್ ಬಸ್ಟರ್ ಚಿತ್ರ ನೀಡಿದ್ದ ಕಿಚ್ಚ ಸುದೀಪ್ ಮತ್ತು ನಿರ್ದೇಶಕ ವಿಜಯ್ ಕಾರ್ತಿಕೇಯನ್ ಮತ್ತೊಮ್ಮೆ ಆಕ್ಷನ್ ಎಂಟರ್ಟೈನರ್ ಮಾರ್ಕ್ ನೊಂದಿಗೆ ಮತ್ತೆ ದೊಡ್ಡ ಪರದೆಯ ಮೇಲೆ ಬಂದಿದ್ದಾರೆ. ಚಿತ್ರತಂಡ ಇಂದು ಚಿತ್ರದ ಕುತೂಹಲಕಾರಿ ಟೀಸರ್ ಅನ್ನು ಬಿಡುಗಡೆ ಮಾಡಿದ್ದಾರೆ.
Kichcha Sudeepa
ಕಿಚ್ಚ ಸುದೀಪ್
Updated on: 

ಕಳೆದ ವರ್ಷ ಮ್ಯಾಕ್ಸ್ ಮೂಲಕ ಬ್ಲಾಕ್ ಬಸ್ಟರ್ ಚಿತ್ರ ನೀಡಿದ್ದ ಕಿಚ್ಚ ಸುದೀಪ್ ಮತ್ತು ನಿರ್ದೇಶಕ ವಿಜಯ್ ಕಾರ್ತಿಕೇಯನ್ ಮತ್ತೊಮ್ಮೆ ಆಕ್ಷನ್ ಎಂಟರ್ಟೈನರ್ ಮಾರ್ಕ್ ನೊಂದಿಗೆ ಮತ್ತೆ ದೊಡ್ಡ ಪರದೆಯ ಮೇಲೆ ಬಂದಿದ್ದಾರೆ. ಚಿತ್ರತಂಡ ಇಂದು ಚಿತ್ರದ ಕುತೂಹಲಕಾರಿ ಟೀಸರ್ ಅನ್ನು ಬಿಡುಗಡೆ ಮಾಡಿದ್ದಾರೆ. ಮಾಸ್ ಲುಕ್ ನಲ್ಲಿ ಸುದೀಪ್ ಕಾಣಿಸಿಕೊಂಡಿದ್ದು ಗ್ಯಾಂಗ್ ಸ್ಟರ್ ಗಳ ಹುಟ್ಟಡಗಿಸುವ ಕಥೆಯನ್ನು ಚಿತ್ರ ಹೊಂದಿದೆ ಎನ್ನಲಾಗದೆ.

73 ಸೆಕೆಂಡುಗಳ ಟೀಸರ್ ಅಭಿಮಾನಿಗಳು ಮತ್ತೊಂದು ಆಕ್ಷನ್ ಎಂಟರ್ಟೈನರ್ ಗೆ ಸಜ್ಜಾಗುವಂತೆ ಮಾಡಿದೆ. ಮಾರ್ಕ್ ಅನ್ನು ಸುದೀಪ್ ಅಭಿನಯದ ಮ್ಯಾಕ್ಸ್ ಚಿತ್ರವನ್ನು ನಿರ್ದೇಶಿಸಿದ ವಿಜಯ್ ಕಾರ್ತಿಕೇಯ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ನವೀನ್ ಚಂದ್ರ, ದೀಪಶಿಖಾ, ಯೋಗಿ ಬಾಬು ಮತ್ತು ಗೋಪಾಲಕೃಷ್ಣ ದೇಶಪಾಂಡೆ ಕೂಡ ಇದ್ದಾರೆ.

ಸತ್ಯ ಜ್ಯೋತಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಸೆಂಧಿಲ್ ತ್ಯಾಗರಾಜನ್ ನಿರ್ಮಿಸಿರುವ ಮಾರ್ಕ್ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರ ಸಂಗೀತ ನೀಡಿದ್ದಾರೆ. ಈ ಚಿತ್ರವು ಡಿಸೆಂಬರ್ 25ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದ್ದು, ಇದು ವರ್ಷದ ಅತ್ಯಂತ ನಿರೀಕ್ಷಿತ ಕ್ರಿಸ್‌ಮಸ್ ಬಿಡುಗಡೆಗಳಲ್ಲಿ ಒಂದಾಗಿದೆ.

Kichcha Sudeepa
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅಭಿಯನದ 'ಮಫ್ತಿ ಪೊಲೀಸ್' ರಿಲೀಸ್ ಡೇಟ್ ಫಿಕ್ಸ್!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com